ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರ ಈಗಲೂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ:ಸಿಎಂ ಕುಮಾರಸ್ವಾಮಿ

|
Google Oneindia Kannada News

Recommended Video

ಮಾಧ್ಯಮದವರಿಗೆ ಬುದ್ಧಿ ಹೇಳಿದ ಕುಮಾರಸ್ವಾಮಿ | Oneindia Kannada

ಮೈಸೂರು, ಮೇ.19: ಮಾಧ್ಯಮದವರು ನಾನು ಸರ್ಕಾರ ರಚನೆ ಮಾಡಿದಾಗಿನಿಂದ ಎಷ್ಟು ಹಿಂಸೆ ಕೊಟ್ಟಿದ್ದಾರೆ. ನಾನು ಮಾಡಿದ ಒಂದು ಒಳ್ಳೆಯ ಕೆಲಸವನ್ನು ಬರೆದಿದ್ದಾರಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೈಸೂರಿನಲ್ಲಿ ಇಂದು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಜನರು ರಾಜಕೀಯ ನಾಯಕರನ್ನು ಜಾತಿಯಾಧಾರದ ಮೇಲೆ ಆಯ್ಕೆ ಮಾಡಿಲ್ಲ, ಇತ್ತೀಚೆಗೆ ಮೈಸೂರಿನಲ್ಲೂ ಸಹ ರಾಜಕೀಯದಲ್ಲಿ ಸ್ವಲ್ಪಮಟ್ಟಿಗೆ ಜಾತಿ ಪಸರಿಸಿದೆ. ಮೈಸೂರು ಜನರು 13 ಬಜೆಟ್ ಗಳನ್ನು ಕೊಟ್ಟ ಸಿದ್ದರಾಮಯ್ಯ, 13 ಚುನಾವಣೆಗಳನ್ನು ಎದುರಿಸಿರುವ ನಾಯಕರನ್ನು ನೋಡಿದ್ದಾರೆ ಎಂದರು.

ಉಡುಪಿಯಲ್ಲೂ ಮಾಧ್ಯಮಗಳ ಮೇಲೆ ಮುನಿಸು ತೋರಿದ ಕುಮಾರಸ್ವಾಮಿಉಡುಪಿಯಲ್ಲೂ ಮಾಧ್ಯಮಗಳ ಮೇಲೆ ಮುನಿಸು ತೋರಿದ ಕುಮಾರಸ್ವಾಮಿ

ಮಾಧ್ಯಮದವರ ವಿರುದ್ಧ ಗರಂ ಆದ ಸಿಎಂ, ನಾನು ಮಾಧ್ಯಮದವರ ಹತ್ತಿರಕ್ಕೆ ಹೋಗ್ತಿಲ್ಲ, ಅವರ ಬಳಿ ಹೋಗೋದೇ ಡೇಂಜರ್ ಅಂತ ದೂರ ಇದ್ದೀನಿ. ಹಿಂದಿನ ಕಾಲದ ಪತ್ರಿಕಾ ಧರ್ಮಗಳು ಪ್ರಿಂಟ್ ಮೀಡಿಯಾದಲ್ಲಿ ಉಳಿದುಕೊಂಡಿವೆ. ಆದರೆ ಎಲೆಕ್ಟ್ರಾನಿಕ್ ಮೀಡಿಯಾಗಳು ನೋಡಿದ್ರೆ ನಮಗೆ ಗಾಬರಿಯಾಗುತ್ತೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲವರು ಪ್ಯಾನಲ್ ಚರ್ಚೆ ಮಾಡ್ತಾರೆ, ಅವರೇ ಈ ಭೂಮಿ ಮೇಲೆ ಎಲ್ಲವನ್ನು ಜವಾಬ್ದಾರಿ ಹೊತ್ತಿರುವ ತರ ಎಂದು ಟೀಕಿಸಿದರು.

ನಿಮ್ಮಗಳ ಟಿಆರ್ ಪಿಗಾಗಿ ನಮ್ಮನ್ನು ಬಳಸಿಕೊಳ್ಳುತ್ತಿದ್ದೀರಿ, ಮಾಧ್ಯಮಗಳ ಮೇಲೆ ಕಾಯ್ದೆ ಮಾಡಲು ಯೋಚನೆ ಮಾಡ್ತೀನಿ.ರಾಜಕಾರಣಿಗಳು ಅಂದ್ರೆ ಏನು ಅಂತ‌ ತಿಳ್ಕೊಂಡಿದ್ದಿರಾ ನೀವು ಎಂದು ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.

ನಿಮ್ಮ ಚಾನೆಲ್ ಗಳ ಬಾಗಿಲು ಮುಚ್ಚಿ

ನಿಮ್ಮ ಚಾನೆಲ್ ಗಳ ಬಾಗಿಲು ಮುಚ್ಚಿ

ಅದ್ಯಾವ್ದೋ ಕಾಮಿಡಿ ಪ್ರೋಗ್ರಾಮ್ ಗಳು, ಅದ್ರಲ್ಲೂ ಎಲ್ಲಿದ್ದಿಯಪ್ಪಾ ನಿಖಲ್? ಅಂತ ಅರ್ಧ ಗಂಟೆ ಕಾರ್ಯಕ್ರಮ ಬೇರೆ, ನಾನು ವರದಿಗಾರರ ಬಗ್ಗೆ ಮಾತನಾಡಲ್ಲ ಸಂಪಾದಕರಿಗೆ ಹೇಳ್ತಿನಿ.

ನಡೆಸೋಕ್ಕೆ ಆಗಿಲ್ಲ ಅಂದ್ರೆ, ನಿಮ್ಮ ಚಾನೆಲ್ ಗಳ ಬಾಗಿಲು ಮುಚ್ಚಿ ಎಂದು ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.ಎಲೆಕ್ಟ್ರಾನಿಕ್ ಮಾಧ್ಯಮಗಳು ಊಹೆ ಮಾಡ್ಕೊಂಡ್ ಸುದ್ದಿ ಮಾಡ್ತೀರಾ, ಸಮಾಜವನ್ನು ಹಾಳು ಮಾಡುವ ಕೆಲಸ ಮಾಡ್ತಿದ್ದೀರಾ, ನಾನು ಮಾಧ್ಯಮಗಳ ಕಡೆ ಮುಖ‌ ಕೂಡ ಮಾಡಲ್ಲ,ಅದೇನ್ ಮಾಡ್ತಿರೋ‌ಮಾಡ್ಕೊಳಿ ಎಂದು ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮೀಡಿಯಾದವರಿಂದ ಅಧಿಕಾರಕ್ಕೆ ಬಂದಿಲ್ಲ

ಮೀಡಿಯಾದವರಿಂದ ಅಧಿಕಾರಕ್ಕೆ ಬಂದಿಲ್ಲ

ಮಗನ ನಿಖಿಲ್ ಸೋಲಿನಿಂದ ಮೀಡಿಯಾಗಳ ಬಳಿ ಹೋಗ್ತಿಲ್ಲ ಅಂತ ಹೇಳ್ತಾರೆ, ಗ್ರಾಮ ಪಂಚಾಯತಿಯಿಂದ ಪ್ರಧಾನಿವರೆಗೂ ಹೋಗಿರುವ ಕುಟುಂಬ ನಮ್ದು ಎಂದ ಕುಮಾರಸ್ವಾಮಿ, ಸೋಲು ಗೆಲುವುಗಳಿಗೆ ಹೆದರುವ ಕುಟುಂಬ ನನ್ನದಲ್ಲ. ನಾನು ಮೀಡಿಯಾದವರಿಂದ ಏನೂ ಅಧಿಕಾರಕ್ಕೆ ಬಂದಿಲ್ಲ. ಮಾಧ್ಯಮದವರು ಕೇವಲ ನಮ್ಮ ಬಗ್ಗೆ ಸ್ಟೋರಿ ಮಾಡೋದು ಬಿಡಿ, ಜನಪರ ಕಾರ್ಯಕ್ರಮಗಳನ್ನು ಮಾಡಿ. ನಾನು ಇದೆಲ್ಲಾ ಏಕೆ ಇಲ್ಲಿ ಮಾತನಾಡ್ತಿದ್ದಿನಿ ಅಂದ್ರೆ, ಇದು ಮಾಧ್ಯಮದವರ ಕಾರ್ಯಕ್ರಮ.ಅದಕ್ಕೆ ಬೇರೆಲ್ಲೂ ಅವಕಾಶವಿಲ್ಲ ಎಂದು ಮೈಸೂರಿನ ಕಲಾ ಮಂದಿರದಲ್ಲಿ ಕುಮಾರಸ್ವಾಮಿ ತಿಳಿಸಿದರು.

ಸಿಎಂ ಕುಮಾರಸ್ವಾಮಿ ಮೌನದ ಹಿಂದಿನ ಮರ್ಮವೇನು?ಸಿಎಂ ಕುಮಾರಸ್ವಾಮಿ ಮೌನದ ಹಿಂದಿನ ಮರ್ಮವೇನು?

ದೇವಸ್ಥಾನಗಳಿಗೆ ಹೋದರೆ ತಪ್ಪೇನು?

ದೇವಸ್ಥಾನಗಳಿಗೆ ಹೋದರೆ ತಪ್ಪೇನು?

ನಾವು ದೇವರ ಭಕ್ತರು. ದೇವಸ್ಥಾನಗಳಿಗೆ ಹೋಗ್ತಿವಿ ತಪ್ಪೇನು?, ದೇವಸ್ಥಾನಗಳಿಗೆ ಹೋದ್ರೆ ಚುನಾವಣೆಗಾಗಿ ಟೆಂಪಲ್ ರನ್ ಅಂತಿರಾ, ಮೋದಿ ಬಧ್ರಿನಾಥ್ ಈಶ್ವರನ‌ ತಪಸ್ಸು ಮಾಡ್ತಿರೋದು ಏತಕ್ಕಾಗಿ? 23ರ ಬಳಿಕ ಸೀಟ್ ಅಲ್ಲಾಡಿಬಹುದೆಂಬ ಕಾರಣಕ್ಕಾಗಿ ಕುತ್ಕೊಂಡಿರೋದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಸರ್ಕಾರ

ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಸರ್ಕಾರ

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿ, ಚಿಂಚೊಳ್ಳಿಯಲ್ಲಿ ಚುನಾವಣೆ ವೇಳೆ ಮಾತನಾಡಿದ್ದೆ. ಅದನ್ನ ಸಿದ್ದರಾಮಯ್ಯ ಹಾಗೂ ಖರ್ಗೆ ನಡುವೆ ತರುವ ಯತ್ನ ಅಂತ ಸ್ಟೋರಿ‌ ಮಾಡ್ತೀರಾ, ಈ ಸರ್ಕಾರಕ್ಕೆ ಸಂಕಷ್ಟ ಇದೆ ಎಂಬ ಸುದ್ದಿಗಳು ಬರುತ್ತವೆ. ಆದರೆ ಈ ಸರ್ಕಾರ ಈಗಲೂ ನಡೆಯುತ್ತಿರುವುದು ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

English summary
Chief Minister H. D. Kumaraswamy spoke with media persons in Mysuru, Kumaraswamy said that the government is ongoing still under Siddaramaiah's guidance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X