ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ನಗರ ಮೈಸೂರಿಗೆ ಸದ್ಯದಲ್ಲೇ 'ಸೋಲಾರ್ ಸಿಟಿ' ಕಿರೀಟ

By Vanitha
|
Google Oneindia Kannada News

ಮೈಸೂರು, ಆಗಸ್ಟ್, 24: ನರೇಂದ್ರ ಮೋದಿ ಅವರ ಸ್ವಚ್ಛ ಅಭಿಯಾನದಲ್ಲಿ, ದೇಶದ ಮೊದಲ ಸ್ವಚ್ಛ ನಗರ ಎಂಬ ಬಿರುದು ಪಡೆದಿರುವ ಮೈಸೂರು ಇನ್ನು ಮುಂದೆ ಸೋಲಾರ್ ಸಿಟಿ ಎಂಬ ಕಿರೀಟ ಧರಿಸಲಿದೆ.

ಮೈಸೂರು ಸೇರಿದಂತೆ ದೇಶದ ೫೦ ನಗರಗಳಲ್ಲಿ ಸೌರಶಕ್ತಿ ಬಳಕೆ ಹೆಚ್ಚಿಸುವ ಯೋಜನೆಗೆ ಇಂಧನ ಸಚಿವಾಲಯ ಒಪ್ಪಿಗೆ ಸೂಚಿಸಿದ್ದು, ಈ ಯೋಜನೆಯು ಕೇಂದ್ರ ಸರ್ಕಾರ(30%), ರಾಜ್ಯ ಸರ್ಕಾರ(20%), ಮತ್ತು ನಗರಪಾಲಿಕೆ(50%)ಗಳ ಸಹಭಾಗಿತ್ವದಲ್ಲಿ ರೂಪುಗೊಳ್ಳಲಿದೆ.[ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]

Government conduct a new solar city project in mysuru

ಈಗಾಗಲೇ 46 ನಗರಗಳಲ್ಲಿ ಸೋಲಾರ್ ಯೋಜನೆ ರೂಪಿಸಲು ಕ್ರಿಯಾ ಯೋಜನೆ ಸಿದ್ದಗೊಂಡಿದ್ದು, ಇದರ ಅನುಸಾರ ನಗರಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಲಿದೆ.

ಮೈಸೂರು, ನವದಹಲಿ, ಆಗ್ರಾ, ಚಂಡೀಗಢ, ಗುರ್ಗಾಂವ್, ಫರೀದಾಬಾದ್, ಅಮೃತಸರ, ಕೊಲ್ಕತ್ತಾ, ಹೌರಾ, ಕೊಚ್ಚಿ, ಭೋಪಾಲ್, ಗಾಂಧಿನಗರ, ರಾಜ್ ಕೋಟ್, ಥಾಣೆ, ಸೂರತ್‌, ಶಿರಡಿ, ನಾಗ್ಪುರ, ಔರಂಗಾಬಾದ್‌, ಇಂಫಾಲ, ಬಿಲಾಸ್ ಪುರ, ರಾಯಪುರ, ಅಗರ್ತಲಾ, ಗುವಾಹಟಿ, ಜೋಹ್ರಾತ್, ಶಿಮ್ಲಾ, ಹಮೀರ್ ಪುರ, ಜೋಧ್ ಪುರ, ವಿಜಯವಾಡ, ಲೂಧಿಯಾನ, ಡೆಹ್ರಾಡೂನ್‌, ಪಣಜಿ ಸೇರಿದಂತೆ ೫೦ ನಗರಗಳು ಸೋಲಾರ್ ಸಿಟಿಗೆ ನಾಮಾಂಕಿತಗೊಂಡಿವೆ.

ಏನಿದು ಯೋಜನೆ ?

5 ವರ್ಷಗಳಲ್ಲಿ ಪರ್ಯಾಯ ಇಂಧನಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ವಿದ್ಯುತ್‌ ಪ್ರಮಾಣವನ್ನು 10%ರಷ್ಟು ಕಡಿಮೆ ಮಾಡುವುದು, ಎಲ್ಲೆಡೆ ಸೌರಶಕ್ತಿ ಬಳಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ನಗರದಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ ನ್ನು ಸೌರಶಕ್ತಿಯಿಂದಲೇ ಪೂರೈಸುವುದರ ಜೊತೆಗೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳಾದ ಪವನಶಕ್ತಿ, ಬಯೋಗ್ಯಾಸ್, ಸಣ್ಣ ಪ್ರಮಾಣದ ಹೈಡ್ರೋ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ.

ಮೊದಲು ನಾಮಾಂಕಿತಗೊಂಡ ನಗರಗಳು:

ಈ ಯೋಜನೆಗೆ ಗೊತ್ತು ಪಡಿಸಿದ 50 ನಗರಗಳಲ್ಲಿ, 8 ನಗರಗಳು ಅಂದರೆ ಮೈಸೂರು, ನಾಗ್ಪುರ, ಚಂಡೀಗಢ, ಗಾಂಧಿನಗರ ಇವುಗಳನ್ನು ಮಾದರಿ ಸೌರನಗರಗಳಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.

ಅಗರ್ತಲಾ, ಕೊಯಿಮತ್ತೂರು, ರಾಜ್‌ಕೋಟ್‌, ಶಿಮ್ಲಾ, ಫರೀದಾಬಾದ್, ಥಾಣೆ, ರಾಯಪುರ, ಶಿರಡಿ, ಲೇಹ್, ಐಜ್ವಾಲ್, ಪುದುಚೇರಿ, ವಿಜಯವಾಡ, ಅಮೃತಸರ ಈ ನಗರಗಳು ಪ್ರಾಯೋಗಿಕ ಸೌರ ನಗರಗಳಾಗಿ ರೂಪುಗೊಳ್ಳಲಿದೆ.

English summary
Central government, State government and municipality planned Solar city project.This project consists of 50 cities . The project has been mainly in Mysuru, Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X