ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸತ್ತವರ ಹೆಸರೂ ಮತದಾರರ ಪಟ್ಟಿಯಲ್ಲಿ!" ರಾಮ್ ದಾಸ್ ಆರೋಪ

By Yashaswini
|
Google Oneindia Kannada News

ಮೈಸೂರು, ನವೆಂಬರ್ 3 : ಮೈಸೂರಿನಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಲು ಸತ್ತವರ ಹೆಸರನ್ನು ಸಹ ಮತದಾರರ ಪಟ್ಟಿಯಲ್ಲಿ ಸೇರಿಸಿ ಮೋಸಗೈಯುತ್ತಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪಿಸಿದ್ದಾರೆ.

ಬೆಂಗಳೂರು : ನ.15ರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸಿಬೆಂಗಳೂರು : ನ.15ರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದುಕಿರುವ ಅನೇಕ ಮಂದಿ ಮತದಾರರ ಪಟ್ಟಿಯಲ್ಲಿ ಸತ್ತಿದ್ದಾರೆ. ಈ ಭಾರಿ ಅಕ್ರಮ ಕೇವಲ ಕೃಷ್ಣರಾಜ ಕ್ಷೇತ್ರ ಮಾತ್ರವಲ್ಲದೆ ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ನಡೆದಿದೆ. ಮತದಾರರು ಹತ್ತಾರು ವರ್ಷಗಳಿಂದ ಸ್ವಂತ ಮನೆಯಲ್ಲಿದ್ದರೂ ಅವರು ಮತ್ತೊಂದೆಡೆ ಸ್ಥಳಾಂತರಗೊಂಡಿದ್ದಾರೆ ಎಂದು ಮನಸೋ ಇಚ್ಛೆ ಪಟ್ಟಿ ಬಿಡುಗಡೆ ಮಾಡಿದ್ದಾರೆ.

Golmaal in revised voter list: alleges BJP leader Ramadas

ಕಾಂಗ್ರೆಸ್ ತನ್ನ ಕೆಟ್ಟ ಸಂಸ್ಕೃತಿಯನ್ನು ಮುಂದುವರೆಸಿದೆ ಎಂದು ಕಿಡಿಕಾರಿದರು. ಈ ನೀಚ ಕೃತ್ಯವನ್ನು ಅಧಿಕಾರಿ ವರ್ಗದಿಂದ ಮಾಡಿಸಿಬಿಟ್ಟಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಶಾಸಕ ಎಂ.ಕೆ.ಸೋಮಶೇಖರ್ ರವರ ಆದೇಶದ ಮೇಲೆ ಮತದಾರರ ಪಟ್ಟಿ ಬದಲಾವಣೆ ಅಕ್ರಮ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಕೆಆರ್ ಕ್ಷೇತ್ರದಲ್ಲಿ 4794 ಮತದಾರರ ಹೆಸರು ನಾಪತ್ತೆಯಾಗಿದೆ. ಅಧಿಕಾರಿಗಳೇ ಅವರನ್ನ ಸಾಯಿಸಿದ್ದಾರೆ. ಸ್ವಂತ ಮನೆಯಿಲ್ಲದವರು ಊರು ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಒಂದೇ ಮಾದರಿಯಲ್ಲಿ ನಾಲ್ಕು ಸಾವಿರ ಅರ್ಜಿಗಳು ಭರ್ತಿಯಾಗಿದ್ದು, ಒಬ್ಬರೇ ಬಹುತೇಕ ಅರ್ಜಿಗಳನ್ನ ಭರ್ತಿ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕ ಎಂ.ಕೆ ಸೋಮಶೇಖರ್ ನೇತೃತ್ವದಲ್ಲಿ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾ

ರೆ ಎಂದು ದೂರಿದರು.
ಈ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ರಾಮದಾಸ್, ನವೆಂಬರ್ 7 ರಂದು ಮತದಾರರ ಪಟ್ಟಿಯಲ್ಲಿ ಸೇರಿಸಿ ಎಂಬ ಅಭಿಯಾನವನ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

English summary
Former minister and senior BJP leader S A Ramadas has alleged that there has been a huge golmaal in voters’ list revision. He was addressing a press meet at a private hotel here in the city on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X