ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾ ಶಿವರಾತ್ರಿ ಆಚರಣೆಗೆ ಸಜ್ಜಾದ ಮೈಸೂರು, ದೇವಾಲಯಗಳಲ್ಲಿ ವಿಶೇಷ ಪೂಜೆ

|
Google Oneindia Kannada News

ಮೈಸೂರು, ಮಾರ್ಚ್ 3:ಮಹಾ ಶಿವರಾತ್ರಿ ಆಚರಣೆಗೆ ನಗರ ಸಜ್ಜಾಗಿದೆ. ಶಿವನ ಆರಾಧಕರು ಈಗಾಗಲೇ ತಮ್ಮ ತಮ್ಮ ನಿವಾಸಗಳಲ್ಲಿ ಭರದಿಂದ ಸಿದ್ಧತೆ ನಡೆಸಿದ್ದಾರೆ. ಶಿವರಾತ್ರಿ ನಿಮಿತ್ತ ನಡೆಸುವ ಉಪವಾಸಕ್ಕೆ ಅಗತ್ಯವಾಗಿ ಬೇಕಾದ ಹಣ್ಣುಹಂಪಲುಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ.

ಕರಬೂಜ ಹಾಗೂ ಕಲ್ಲಂಗಡಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.ನಗರದಲ್ಲಿರುವ ಶಿವಮಂದಿರಗಳು ವಿಶೇಷ ಪೂಜೆ ಪುನಸ್ಕಾರಗಳಿಗೆ ಅಣಿಗೊಂಡಿವೆ. ರಾಮಾನುಜ ರಸ್ತೆಯಲ್ಲಿರುವ ಕಾಮಕಾಮೇಶ್ವರಿ ದೇವಾಲಯ ಹಾಗೂ ಇದರ ಎದುರು ಇರುವ ನೂರೊಂದು ಶಿವಲಿಂಗಗಳ ದೇವಾಲಯದಲ್ಲಿ ಜನಜಾತ್ರೆಯೇ ಸೇರಲಿದೆ.

ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?

ಇದರ ಜೊತೆಗೆ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ, ವಾಣಿವಿಲಾಸ ಮೊಹಲ್ಲಾದ ಚಂದ್ರಮೌಳೀಶ್ವರ ದೇವಸ್ಥಾನ, ಬೋಗಾದಿ ರಿಂಗ್ ರಸ್ತೆಯಲ್ಲಿರುವ ನಾಗೇಶ್ವರ ಭೋಗೇಶ್ವರಸ್ವಾಮಿ ದೇವಾಲಯ, ಕುಂಬಾರಕೊಪ್ಪಲಿನ ಮಹದೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ.

Gold mask of lord shiva handed over to mysuru thrineshwara temple

ಅವಧೂತ ದತ್ತಪೀಠದಲ್ಲಿ, ಚಾಮುಂಡಿಬೆಟ್ಟದ ಮಹಾಬಲೇಶ್ವರ ದೇಗುಲದಲ್ಲೂ ಭಕ್ತರು ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ನಂಜನಗೂಡಿನ ನಂಜುಂಡೇಶ್ವರ ದೇವಾಲಯವೂ ಶಿವರಾತ್ರಿಗೆ ಸಿದ್ಧಗೊಂಡಿದೆ. ರಾಜ್ಯದಾದ್ಯಂತ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಜಾಗರಣೆಗಾಗಿಯೇ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?

ಚಿನ್ನದ ಕೊಳಗಧಾರಣೆ
ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕದಲ್ಲಿರುವ ತ್ರಿನಯನೇಶ್ವರ ದೇಗುಲದಲ್ಲಿನ ಶಿವಲಿಂಗಕ್ಕೆ ಚಿನ್ನದ ಕೊಳಗಧಾರಣೆ ನಡೆಯಲಿದೆ. ನಾಳೆ ನಸುಕಿನ 5.30ಕ್ಕೆ ವಿಶೇಷ ಪೂಜಾವಿಧಿಗಳು ಆರಂಭವಾಗಲಿವೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ಸಂದರ್ಭದಲ್ಲಿ ದೇವಾಲಯಕ್ಕೆ ಈ ಕೊಳಗವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಇದೇ ವೇಳೆ ಮೈಸೂರು ಜಿಲ್ಲಾಡಳಿತದ ಖಜಾನೆಯಲ್ಲಿದ್ದ ಇದೇ ಚಿನ್ನದ ಮುಖವಾಡವನ್ನು ಮಹಾಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯಕ್ಕೆ ಹಸ್ತಾಂತರಿಸಲಾಯಿತು.

Gold mask of lord shiva handed over to mysuru thrineshwara temple

ಮುಜರಾಯಿ ಇಲಾಖೆ ಶಿವರಾತ್ರಿ ಇಡೀ ದಿನ ಭಕ್ತರಿಗೆ ತ್ರಿನೇಶ್ವರ ಲಿಂಗದ ದರ್ಶನದ ಮಾಡಲು ಅವಕಾಶ ಮಾಡಿಕೊಡಲಿದೆ. ಶಿವರಾತ್ರಿ ದಿನ ಅನೇಕ ಭಕ್ತರು ಜಾಗರಣೆ ಮಾಡುತ್ತಾರೆ. ಹೀಗಾಗಿ ಅಂದಿನ ದಿನ ಶಿವನ ದೇವಾಲಯಗಳು ರಾತ್ರಿಯಿಡೀ ತೆರೆದಿರುತ್ತದೆ. ಅದೇ ರೀತಿ ತ್ರಿನೇಶ್ವರ ದೇವಾಲಯಲೂ ತೆರೆದಿರುತ್ತದೆ.

English summary
On the reason of Maha Shivaratri festival Mysuru district administration handed over gold mask of lord shiva to Thrineshwara temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X