ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬಾರದ ಗೋವಾ ವಿಮಾನ, ಕಾದುಕೂತ ಪ್ರಯಾಣಿಕರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 09; ವಿಮಾನ‌ ಬಾರದ ಕಾರಣ ತಡರಾತ್ರಿವರೆಗೂ ಪ್ರಯಾಣಿಕರು ಕಾದು ಕುಳಿತ ಘಟನೆ ಭಾನುವಾರ ರಾತ್ರಿ ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿಮಾನ‌ ನಿಲ್ದಾಣದಿಂದ ಗೋವಾಕ್ಕೆ ಹೋಗಲು 50ಕ್ಕೂ ಹೆಚ್ಚು ಪ್ರಯಾಣಿಕರು ಟಿಕೆಟ್ ಬುಕ್‌ಮಾಡಿದ್ದರು.‌ ಎಂದಿನಂತೆ ಗೋವಾಕ್ಕೆ ತೆರಳಲು ಮೈಸೂರು ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ್ದರು.

ಮಧ್ಯಾಹ್ನ 3.25ಕ್ಕೆ ಬರಬೇಕಿದ್ದ‌ ವಿಮಾನ ರಾತ್ರಿ 11 ಗಂಟೆಯಾದರೂ ಬರಲಿಲ್ಲ. ಸಿಬ್ಬಂದಿ ಈಗ ಬರುತ್ತದೆ ಎಂದು ಸಬೂಬು ಹೇಳಿದ್ದಾರೆ. ಆದರೆ ತಡರಾತ್ರಿಯಾದರೂ ಬಾರದ ಹಿನ್ನೆಲೆ ಕಾದು ಕುಳಿತಿದ್ಧ ಪ್ರಯಾಣಿಕರು ವಿಮಾನ ನಿಲ್ದಾಣದ ಸಿಬ್ಬಂದಿಗಳ ವಿರುದ‍್ಧ ಆಕ್ರೋಶ ವ್ಯಕ್ತಪಡಿಸಿದರು.

Goa Mysuru Flight Cancelled Passengers Upset With Officials

ತಡರಾತ್ರಿಯಾದರೂ ವಿಮಾನ ಬರಬಹುದು ಎಂದು‌ ಕಾದು ಕುಳಿತಿದ್ದ ಪ್ರಮಾಣಿಕರಿಗೆ ಕೊನೆ ಘಳಿಗೆಯಲ್ಲಿ ವಿಮಾನ ರದ್ದಾಗಿದೆ ಎಂದು ಸಿಬ್ಬಂದಿ ತಿಳಿಸಿದರು. ಆಗ ಪ್ರಯಾಣಿಕರು ಏರ್‌ಪೋರ್ಟ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

ಪ್ರಯಾಣಿಕರನ್ನು ಪೊಲೀಸರ ಮೂಲಕ ಹೊರ ಹಾಕಲು ಸಿಬ್ಬಂದಿ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Mysuru and Goa flight cancelled and passengers upset with Mysuru airport officials. Flight scheduled on 3.25 pm passengers stay in airport till late night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X