ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿಯಲ್ಲಿ 'ಬಹುರೂಪಿ' ಮೆರಗು

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ. 15 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಅವರು ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ಉದ್ಘಾಟನೆ ನಂತರ ಮಾತನಾಡಿದ ಡಾ.ಗಿರೀಶ್ ಕಾರ್ನಾಡ್ ಅವರು, 30 ವರ್ಷದ ಹಿಂದೆ ಮೈಸೂರಿನಲ್ಲಿ ಬಿ.ವಿ.ಕಾರಂತ ರೊಂದಿಗೆ ಒಡಗೂಡಿ ರಂಗಭೂಮಿ ಕಟ್ಟಲು ಸಾಕಷ್ಟು ಕಷ್ಟಪಟ್ಟಿದ್ದೇವೆ.ಅಂದು ರಾಮಕೃಷ್ಣ ಹೆಗಡೆ ಅವರೊಂದಿಗೆ ಚರ್ಚೆ ನಡೆಸಿ, ರಂಗಭೂಮಿಯನ್ನು ಹೀಗೆ ಇರಬೇಕು ಎಂದು ಕಟ್ಟಿ, ಮತ್ತೆ ಇದೇ ಸ್ಥಳಕ್ಕೆ ಬಂದಿರುವುದು ತುಂಬ ಪುಣ್ಯದ ಕೆಲಸ ಎಂದರು.

Girish Karnad braves ill health to inaugurate Bahuroopi-2018

ರಂಗಾಯಣದಲ್ಲಿ ಆರಂಭದಿಂದಲ್ಲೂ ಆತ್ಮೀಯತೆಯನ್ನು ಕಾಪಾಡಿಕೊಂಡು ಬರಲಾಗುತ್ತಿರುವ ರಂಗಭೂಮಿ ಭಾಗ್ಯ ತನ್ನ ತಲೆಮಾರಿಗೆ ಸಿಕ್ಕಿರುವುದು ತುಂಬ ಸಂತಸ ತಂದಿದೆ. ನಾಟಕದ ಹಿರಿಮೆಯನ್ನು ಬಿ.ವಿ. ಕಾರಂತರು ಹೆಚ್ಚಿಸಿದರು. ರಂಗಭೂಮಿ ಮೇಲಿದ್ದ ಅವರ ಒಡನಾಟ ಹಾಗೂ ಪ್ರೇಮದಿಂದ ಕರ್ನಾಟಕದಲ್ಲಿ ರಂಗಭೂಮಿ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಅವರನ್ನು ಅನುಸರಿಸಿ ಅನೇಕ ಕಲಾವಿದರು ರಂಗಭೂಮಿಯನ್ನು ಬೆಳೆಸುತ್ತಿರುವುದು ತುಂಬ ಖುಷಿಯಾಗಿದೆ ಎಂದರು.

Girish Karnad braves ill health to inaugurate Bahuroopi-2018

ಹೋಳಿಗೆ, ರೊಟ್ಟಿಗೆ ಮುಗಿಬಿದ್ದ ಜನ
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವೈವಿಧ್ಯಮಯ ನಾಟಕಗಳು ರಂಗಪ್ರಿಯರನ್ನು ಮೋಡಿಗೊಳಪಡಿಸಲು ಮುಂದಾಗಿದ್ದರೆ, ಇನ್ನೊಂದೆಡೆ ವಿವಿಧ ಬಗೆಯ ಭಕ್ಷ್ಯಗಳು ಜನರನ್ನು ಆಕರ್ಷಿಸುತ್ತಿವೆ. ಅದಕ್ಕೆ ಸಮಾನಾಂತರವಾಗಿ ಪುಸ್ತಕಗಳು ಕೂಡ ಓದುಗರನ್ನು ತಮ್ಮತ್ತ ಸೆಳೆಯಲು ಅಖಾಡಕ್ಕೆ ಇಳಿದಿವೆ.

ರಂಗಾಯಣದ ಆವರಣದಲ್ಲಿ ಸುಮಾರು 13 ಮಳಿಗೆಗಳನ್ನು ದೇಸಿ ಆಹಾರ ತಯಾರಕರಿಗೆ ನೀಡಲಾಗಿದೆ. ವಿಶೇಷವೆಂದರೆ ಹಲವರು ಇದೇ ಮೊದಲ ಸಲ ಬಹುರೂಪಿಗೆ ಆಗಮಿಸಿದ್ದಾರೆ. ಸಹಜವಾಗಿ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಹೋಳಿಗೆ, ಜೋಳದ ರೊಟ್ಟಿ, ಪುಳಿಯೋಗರೆ, ವಿವಿಧ ಬಗೆಯ ದೋಸೆಗಳು ಜನರ ಹಸಿವು ಹಾಗೂ ನಾಲಗೆಯ ಚಪಲವನ್ನು ತಣಿಸುತ್ತಿವೆ.

Girish Karnad braves ill health to inaugurate Bahuroopi-2018

ಕನ್ನಡ ಪ್ರಸಿದ್ಧ ಸಾಹಿತಿಗಳ ಪುಸ್ತಕಗಳು
ಕಿಂದರಜೋಗಿ ಆವರಣದ ಎದುರು ಪುಸ್ತಕಗಳು, ಕೈಮಗ್ಗದ ಉಡುಪುಗಳು, ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಕನ್ನಡದ ಪ್ರಸಿದ್ಧ ಸಾಹಿತಿಗಳ ಪುಸ್ತಕಗಳು, ಹಲವಾರು ಪ್ರಕಾಶನಗಳು ಹೊರತಂದಿರುವ ಕಾದಂಬರಿಗಳು, ಶ್ರೀಮದ್ಭಗವದ್ಗೀತಾ, ಸಂಪೂರ್ಣ ರಾಮಾಯಣ ಇತ್ಯಾದಿ ಕೃತಿಗಳೂ ಇವೆ 25 ಮಳಿಗೆಗಳಲ್ಲಿ ಪುಸ್ತಕ ಮಾರಾಟ ನಡೆದಿದೆ.

English summary
Jnanapith awardee Girish Karnad braved ill health to inaugurate the national theatre festival Bahuroopi-2018, organised with the theme 'Migration', at Vanaranga Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X