ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಬೀದಿಯಲ್ಲಿ ದೈತ್ಯ 'ಡೆಂಗ್ಯೂ' ಸೊಳ್ಳೆ!

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 3 : ಮೈಸೂರಿನ ಹೋಟೆಲ್ ದಾಸ್ಪ್ರಕಾಶ್ ಪ್ಯಾರಡೈಸ್ ನ ಹಿಂಭಾಗದಲ್ಲಿ ಹಿಂದೆಂದೂ ಕಂಡರಿಯಂದಂತಹ ಅತಿ ದೊಡ್ಡ ಸೊಳ್ಳೆಯೊಂದು ಕಂಡು ಬಂದು, ಜನರನ್ನು ಗಾಬರಿಗೊಳಿಸಿತ್ತು. ಅಷ್ಟೇ ಅಲ್ಲದೇ ಆ ಸೊಳ್ಳೆಯನ್ನು ನೆರೆದಿದ್ದ ವೀಕ್ಷಕರೆಲ್ಲರೂ ಕಣ್ಣು - ಬಾಯಿ ಬಿಟ್ಟು ನೋಡಿ ಗಾಬರಿಗೊಂಡಿದ್ದರು. ಅದು ಸಾವನ್ನು ತನ್ನತ್ತ ಕರೆಯುತ್ತಿದ್ದ ದೈತ್ಯಾಕಾರದ ಸೊಳ್ಳೆ!

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...
ಅರೇ ಇದ್ಯಾವ ಸೊಳ್ಳೆ...! ಅಷ್ಟು ದೈತ್ಯಾಕಾರವಾಗಿತ್ತೆ ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ, ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಸೊಳ್ಳೆಯನ್ನು ರಸ್ತೆಗಿಳಿಸಿದವರು, ಮೈಸೂರಿನ ಕುಂಚ ಕಲಾವಿದರಾದ ಬಾದಲ್ ನಂಜುಂಡಸ್ವಾಮಿ.

ನಗರದ ಪ್ರತಿಷ್ಠಿತ ಯಾದವಗಿರಿ ರಸ್ತೆಯ ಮಧ್ಯೆ ಕಳೆದ 2 ತಿಂಗಳಿನಿಂದ ಆಳವಾದ ಗುಂಡಿ ಬಿದ್ದಿದೆ. ಈ ಬಗ್ಗೆ ಅಲ್ಲಿನ ನಾಗರೀಕರು ಪಾಲಿಕೆಯ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯ ನಿವಾಸಿಗಳು ಕಲಾವಿದ ಬಾದಲ್ ನಂಜುಂಡಸ್ವಾಮಿಗೆ ತಿಳಿಸಿದ್ದರು. ಕಲಾವಿದ ನಂಜುಂಡಸ್ವಾಮಿ ಸ್ಥಳಕ್ಕೆ ಹೋಗಿ ಪಾಲಿಕೆಯನ್ನು ಎಚ್ಚರಿಸಲು ಹಾಗೂ ಡೆಂಗ್ಯೂವಿನ ಬಗ್ಗೆ ಎಚ್ಚರಿಕೆ ನೀಡಲು ಡೆಂಗ್ಯೂ ಸೊಳ್ಳೆಯ ಚಿತ್ರ ಬರೆದು ಜಾಗೃತಿ ಮೂಡಿಸಿದ್ದಾರೆ.

ಕುಂಚದಿಂದ ಅರಿವು ಮೂಡಿಸುವು ಕೆಲಸ

ಕುಂಚದಿಂದ ಅರಿವು ಮೂಡಿಸುವು ಕೆಲಸ

ಮೈಸೂರಿನವರಾಗಿರುವ ಬಾದಲ್ , ನಾಗರಿಕ ಸಮಸ್ಯೆಗಳಿಗೆ ತಮ್ಮದೇ ರೀತಿಯಾದ ವಿಶೇಷ ಕಲಾಕುಂಚದೊಂದಿಗೆ ಗಮನ ಸೆಳೆಯುವ ಅಪ್ರತಿಮ ಕಲಾವಿದ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೈಸೂರು ಬೀದಿಗಳಲ್ಲಿ ಈ ಸಮಸ್ಯೆಯನ್ನು ಹೈಲೈಟ್ ಮಾಡಲು ತೆಗೆದುಕೊಂಡ ಮಾರ್ಗ ಎಲ್ಲರನ್ನು ನಿಬ್ಬೆರಗಾಗಿಸಿತ್ತು.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!

ಈ ಕುರಿತು ಮಾತನಾಡಿದ ಅವರು, "ಈ ಗುಂಡಿಯನ್ನು ನಾನು ಕಳೆದ 2 ತಿಂಗಳಿನಿಂದಲೂ ಗುರುತಿಸಿದ್ದೇನೆ, ನನಗೆ ಇಂತಹ ವಿಚಾರಗಳು ಗೋಚರಿಸಿದಾಗ ತಕ್ಷಣವೇ ನನ್ನ ಕಲ್ಪನೆಯಿಂದ ಸಮಸ್ಯೆಗಳ ಪರಿಹಾರಕ್ಕಾಗಿ ಏನು ಮಾಡಬಹುದೆಂದು ಯೋಚಿಸುತ್ತೇನೆ. ಹಾಗಾಗಿ ಇಲ್ಲಿ ಎರಡು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಡೆಂಗ್ಯೂ ಮತ್ತು ಗುಂಡಿಗಳಿಗೆ, ಸಮಾಪ್ತಿ ಹಾಡಲು ಹೊರಟ್ಟಿದ್ದೇನೆ" ಎಂದು ಅವರು ತಿಳಿಸಿದರು.

30 ನಿಮಿಷದಲ್ಲಿ ಅಮೋಘ ಕಲಾಕೃತಿ

30 ನಿಮಿಷದಲ್ಲಿ ಅಮೋಘ ಕಲಾಕೃತಿ

ಒಂದು ಕಲಾಕೃತಿಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವು ಯೋಜನೆಯಿಂದ ಯೋಜನೆಯನ್ನು ಬದಲಾಗುತ್ತದೆ, ಮತ್ತು ಈ ಡೆಂಗ್ಯೂ ಗುಂಡಿಯು ಬಾದಲ್ 30 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ.

ಬಾದಲ್ ನ ರಚನೆಗಳು ಆಗಾಗ್ಗೆ ಅಂತರ್ಜಾಲದಲ್ಲಿ ಸುತ್ತುತ್ತಿದ್ದು, ಇತ್ತೀಚೆಗೆ ಇದು ಆನಂದ್ ಮಹೀಂದ್ರಾರ ಗಮನ ಸೆಳೆದಿದೆ. .

ಸೋಮವಾರ, ಮಹೀಂದ್ರಾ ಗ್ರೂಪ್ ಎಕ್ಸಿಕ್ಯುಟಿವ್ ಚೇರ್ಮನ್ ಆದ ಆನಂದ್, ಇವರ ಕಲೆಯನ್ನು ಗಮನಿಸಿ "ಸ್ಟ್ರೀಟ್" ಎಂದು ಟ್ವೀಟ್ ಮಾಡಿದ್ದರು. ಆದರೆ ಆ ಸಮಯದಲ್ಲಿ, ಕಲಾವಿದ ಬಾದಲ್ ಎಂದು ತಿಳಿದಿರಲಿಲ್ಲ. ಟ್ವಿಟ್ಟರ್ ಬಳಕೆದಾರರು ಕಲಾವಿದನ ಹೆಸರನ್ನು ಸೂಚಿಸಿದ ನಂತರ, ಆನಂದ್ ಮಹೀಂದ್ರಾ ತಮ್ಮ ಕಲೆಯ ಮೂಲಕ ಅವರ ಸೃಜನಶೀಲತೆಯನ್ನು ಬೆಂಬಲಿಸುವಲ್ಲಿ ಬಾದಲ್ ಆಸಕ್ತಿ ಹೊಂದಿದ್ದಾನೆ ಎಂದು ಮತ್ತೊಮ್ಮೆ ಟ್ವೀಟ್ ಮಾಡುವ ಮೂಲಕ ಪ್ರಶಂಸಿರುವುದು ಸಂತಸಕರ.

English summary
Baadal Nanjundaswamy‏ a famous artist from mysuru has painted a mosquito picture in a pothole in Mysuru to grab attention responsible authorities about the dangerous potholes and has also tried to create about Dengue disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X