ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರದ ರಸ್ತೆ ಅಗೆದರೆ ಭಾರೀ ದಂಡ ಕಟ್ಟಲು ಸಿದ್ಧರಾಗಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 23: ಮೈಸೂರು ನಗರದ ರಸ್ತೆಗಳನ್ನು ಮನಬಂದಂತೆ ಅಗೆಯುವವರಿಗೆ ಇನ್ನು ಮುಂದೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಅಬಿವೃದ್ಧಿ ಪಡಿಸಿದ ರಸ್ತೆಯನ್ನು ವಿವಿಧ ಉದ್ದೇಶಗಳಿಗೆ ಅಗೆದು ಹಾಳು ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.

ನಗರದ ರಸ್ತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಪಾಲಿಕೆ ಇಂತಹ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಅನುಮತಿ ಇಲ್ಲದೆ ರಸ್ತೆ ಅಗೆದರೆ ನಿಶ್ಚಿತವಾಗಿ ದಂಡವನ್ನು ತೆರಬೇಕಾಗುತ್ತದೆ. ಒಂದು ವೇಳೆ ರಸ್ತೆ ಅಗೆಯುವ ಪರಿಸ್ಥಿತಿ ಇದ್ದರೆ ಸಂಬಂಧಿಸಿದವರು ಪಾಲಿಕೆ ವಲಯ ಕಚೇರಿಗೆ ಭೇಟಿ ನೀಡಿ ಶುಲ್ಕ ಪಾವತಿಸಿ ಅನುಮತಿ ಪಡೆಯುವುದು ಕಡ್ಡಾಯ.

ಮೈಸೂರಿನ ಜನರು ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲೇ ಕಟ್ಟಿ ಮೈಸೂರಿನ ಜನರು ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲೇ ಕಟ್ಟಿ

ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವಂತ ಕಟ್ಟಡಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳನ್ನು ಪಡೆಯುವುದಕ್ಕಾಗಿ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅಗೆದು ಹಾಕುತ್ತಾರೆ.

ಬೆಂಗಳೂರಿನ ರಸ್ತೆ ಗುಂಡಿಗೆ ಬಿದ್ದವರಿಗೆ 15,000 ರೂಪಾಯಿ ಪರಿಹಾರ! ಬೆಂಗಳೂರಿನ ರಸ್ತೆ ಗುಂಡಿಗೆ ಬಿದ್ದವರಿಗೆ 15,000 ರೂಪಾಯಿ ಪರಿಹಾರ!

Get Ready To Pay Fine If Dig The Road

ರಸ್ತೆಗಳನ್ನು ಅಗೆಯುವುದಕ್ಕೆ ಸಂಬಂಧಿಸಿದಂತೆ ಡಾಂಬರ್ ರಸ್ತೆಗಳಿಗೆ ಪ್ರತಿ ಮೀಟರ್‌ಗೆ 1,200 ರೂ., ಕಾಂಕ್ರೀಟ್ ರಸ್ತೆಗಳಿಗೆ ಪ್ರತಿ ಮೀಟರ್ ಗೆ 2000 ರೂ. ಹಾಗೂ ಪಾದಚಾರಿ ಮಾರ್ಗಕ್ಕೆ 800 ರೂ. ನಿಗದಿ ದರವನ್ನು ನಿಗದಿ ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ; ಸರ್ಕಾರದ ಒಪ್ಪಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ; ಸರ್ಕಾರದ ಒಪ್ಪಿಗೆ

ಅಲ್ಲದೇ ರಸ್ತೆಗಳನ್ನು ಅಗೆದ ನಂತರ ಆ ಭಾಗವನ್ನು ಸರಿಯಾಗಿ ಪುನಶ್ಚೇತನಗೊಳಿಸಬೇಕು. ಇಲ್ಲವಾದಲ್ಲಿ ಕಟ್ಟಡ ಮಾಲೀಕರಿಂದ ದುಪ್ಪಟ್ಟು ಶುಲ್ಕವನ್ನು ವಸೂಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅನುಮತಿ ಪಡೆಯದೆ ರಸ್ತೆ ಅಗೆದರೆ ನಿಗದಿ ಪಡಿಸಿದ ಶುಲ್ಕದ ಮೂರು ಪಟ್ಟು ದಂಡ ವಸೂಲಾತಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಹೇಳಿದ್ದಾರೆ.

English summary
Mysuru city corporation will impose heavy fine if dig the road in the city. People to pay fine if dig the road for water drainage pipe line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X