ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸತನ ತೆರೆದಿಟ್ಟ ಮೈಸೂರಿನ ಫಾರ್ಮುಲಾ ರೇಸ್ ಕಾರ್ ವಿನ್ಯಾಸ ಕಾರ್ಯಾಗಾರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 21: ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಮಹಾರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು "ಗ್ಯಾಸೋಲಿನ್/ಎಲೆಕ್ಟ್ರಿಕ್ ಫಾರ್ಮುಲಾ ರೇಸ್ ಕಾರ್ ವಿನ್ಯಾಸ ಮತ್ತು ಫ್ಯಾಬ್ರಿಕೇಶನ್" ಕುರಿತು ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.

ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಎಲೈಟ್ ಟೆಕ್ನೋ ಗ್ರೂಪ್‌ ಜಂಟಿಯಾಗಿ ಆಯೋಜಿಸಿದ್ದ ಎಂಟು ದಿನಗಳ ಈ ಕಾರ್ಯಾಗಾರದಲ್ಲಿ ಭಾರತದ ವಿವಿಧ ಭಾಗಗಳಿಂದ ಬಂದ 80ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕರ್ನಾಟಕದ ಹಲವು ಜಿಲ್ಲೆಗಳಿಂದಲ್ಲದೇ ಪುಣೆ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಹೈದರಾಬಾದ್ ಹೀಗೆ ಹಲವು ರಾಜ್ಯಗಳಿಂದ ಕಾರ್ಯಾಗಾರಕ್ಕೆ ಬಂದಿದ್ದರು. ಅವರನ್ನು ತಂಡಗಳನ್ನಾಗಿ ರಚಿಸಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಇನ್ಮುಂದೆ ಹಾರ್ನ್ ಮಾಡಿದ್ರೆ ಸಿಗ್ನಲ್ ಓಪನ್ ಆಗೋದೆ ಇಲ್ಲಇನ್ಮುಂದೆ ಹಾರ್ನ್ ಮಾಡಿದ್ರೆ ಸಿಗ್ನಲ್ ಓಪನ್ ಆಗೋದೆ ಇಲ್ಲ

ಫಾರ್ಮುಲಾ ರೇಸ್ ಕಾರ್, ವಿಕಸನಗೊಳ್ಳುತ್ತಿರುವ ವಿನ್ಯಾಸ ಮತ್ತು ಫ್ಯಾಬ್ರಿಕೇಶನ್, ವಾಹನ ತಂತ್ರಜ್ಞಾನದ ಕುರಿತು ವಿಷಯ ವಿನಿಮಯ ನಡೆದಿದ್ದಲ್ಲದೆ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು ಅವರಿಗೆ ಮಾರ್ಗದರ್ಶನವನ್ನೂ ನೀಡಲಾಯಿತು. ಫ್ಯಾಬ್ರಿಕೇಟೆಡ್ ಫಾರ್ಮುಲಾ ರೇಸ್ ಕಾರ್ ಮಾದರಿಗಳಿಂದ ಕ್ರಿಯಾತ್ಮಕ ಪರೀಕ್ಷೆ ನಡೆಸಲಾಯಿತು. ಫೆಬ್ರವರಿ 20ರಂದು ಎಂಐಟಿ ಮೈಸೂರಿನ ಪ್ರಾಂಶುಪಾಲ ಡಾ.ಬಿ.ಜಿ. ನರೇಶ್ ಕುಮಾರ್, ಡಾ.ಟಿ. ವಾಸುದೇವ್ ಮತ್ತು ಡಾ. ಮೊಹಮ್ಮದ್ ಖೈಸರ್ ಅವರು ಈ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ನಡೆಸಿಕೊಟ್ಟರು.

Gasoline Electric Formula Race Car Designing Workshop By Maharaja Institute of Technology

ವಿಎಸ್ಟಿ ಟಿಲ್ಲರ್ಸ್ ಅಂಡ್ ಟ್ರ್ಯಾಕ್ಟರ್ಸ್ ಲಿಮಿಟೆಡ್ ನ ಅಧ್ಯಕ್ಷ ಡಾ.ಎಸ್.ಮುರಳಿ, ಉಪಾಧ್ಯಕ್ಷ ಎಂ.ಇ.ಟಿ, ಡಾ.ಸತ್ಯೇಂದ್ರ ದೇವರಾಕೊಂಡೆ, ಎಂಇಟಿ ಕಾರ್ಯದರ್ಶಿ ಡಾ. ಟಿ. ವಾಸುದೇವ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ಖೈಸರ್, ಎಲೈಟ್ ಟೆಕ್ನೊ ಗ್ರೂಪ್ ನ ಅರ್ಬಾಜ್ ಶೇಖ್ ಮುಂತಾದವರು ಸಮಾರಂಭದ ಅತಿಥಿಗಳಾಗಿದ್ದರು.

Gasoline Electric Formula Race Car Designing Workshop By Maharaja Institute of Technology

ಗುಂಪು ನಡವಳಿಕೆ, ತಂಡದ ಶ್ರಮ, ಕೆಲಸದ ವಿಭಜನೆಯಂಥ ಅಂಶಗಳು ನೈಜ ಕೈಗಾರಿಕಾ ವಾತಾವರಣವನ್ನು ಹೊರತರುವಲ್ಲಿ ಕಾರ್ಯಾಗಾರ ಮಹತ್ವದ ಪಾತ್ರ ವಹಿಸಿತ್ತು.

English summary
The Maharaja Institute of Technology, Mechanical Engineering Department has organized a national level workshop on "Gasoline/Electric Formula Race Car Design and Fabrication" with an emphasis on practical learning,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X