• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರಮಹಾಲಕ್ಷ್ಮೀ ಹಬ್ಬಕ್ಕೆ ತಪ್ಪಿದ ರೇಷ್ಮೆ ಸೀರೆ, ಗೌರಿ ಗಣೇಶ ಹಬ್ಬಕ್ಕೆ!

|
   Ganesha Chaturthi 2018 : ಗೌರಿ ಗಣೇಶ ಹಬ್ಬಕ್ಕೆ ಡಿಸ್ಕೌಂಟ್ ದರದಲ್ಲಿ ಸಿಗಲಿದೆ ಮೈಸೂರು ಸಿಲ್ಕ್ ಸೀರೆ

   ಮೈಸೂರು, ಸೆಪ್ಟೆಂಬರ್ 11: ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದ ರಾಜ್ಯ ಸರ್ಕಾರ, ರಾಜ್ಯದ ಮಹಿಳೆಯರನ್ನು ಸಮಾಧಾನ ಪಡಿಸಲು ಗೌರಿ-ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ಕೊಡುವುದು ಪಕ್ಕಾ ಆಗಿದೆ.

   ಗೌರಿ-ಗಣೇಶ ಹಬ್ಬದಂದು ಬೆಳಗ್ಗೆ 10.30ಮೈಸೂರಿನ ಮೃಗಾಲಯ ಆವರಣದಲ್ಲಿರುವ ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿಯ ಮಳಿಗೆಯಲ್ಲಿ ಮಹಿಳೆಯರಿಗೆ 4500 ರೂ ದರದಲ್ಲಿ ರೇ‍ಷ್ಮೆ ಸೀರೆ ನೀಡಲು ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು ಮಧ್ಯಾಹ್ನ 2.30ಕ್ಕೆ ರೇಷ್ಮೆ ಸೀರೆಯನ್ನು ವಿತರಿಸಲಾಗುವುದು. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

   ವರಮಹಾಲಕ್ಮಿ ಹಬ್ಬಕ್ಕೂ ರೇಷ್ಮೆ ಸೀರೆ ಡಿಸ್ಕೌಂಟ್ ಆಫರ್ ಇಲ್ಲ

   ಆದರೆ ರಾಜ್ಯ ಸರ್ಕಾರ ಘೋಷಿಸಿದ್ದ ರೇಷ್ಮೆ ಸೀರೆ ವಿತರಣೆ ಯೋಜನೆಯಲ್ಲಿ ಟ್ವಿಸ್ಟ್ ಏನೆಂದರೆ ಕುಮಾರಸ್ವಾಮಿ ಲಾಟರಿ ಮೂಲಕ ಆಯ್ದ ಮಹಿಳೆಯರಿಗೆ ಮಾತ್ರ ಸೀರೆ ಕೊಡುವರು. ಈ ಹಿಂದೆ ರಾಜ್ಯ ಸರ್ಕಾರ 4500ರೂ.ಗೆ ಎಲ್ಲಾ ಮಹಿಳೆಯರಿಗೆ ಕೆಎಸ್ಐಸಿ ಮಳಿಗೆಗಳಲ್ಲಿ ರಿಯಾಯಿತಿ ದರದ ಸೀರೆಗಳನ್ನು ಕೊಡುವುದಾಗಿ ಘೋಷಿಸಿತ್ತು.

   ದಾವಣಗೆರೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ, ಬಂಪರ್ ಆಫರ್ ಗೆ ಮುಗಿಬಿದ್ದ ಹೆಂಗಳೆಯರು

   ಆದರೆ ರಾಜ್ಯ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂಬ ಆರ್ಥಿಕ ಇಲಾಖೆಯ ದಿಗ್ಭಂಧನದ ಕಾರಣಕ್ಕಾಗಿ ಆಯ್ದ ಮಹಿಳೆಯರಿಗೆ ಮಾತ್ರ ರೇಷ್ಮೆ ಸೀರೆಯನ್ನು ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ವರ ಮಹಲಾಕ್ಷ್ಮೀ ಹಬ್ಬಕ್ಕೆ ರೇಷ್ಮೆ ಸೀರೆ ಕೊಳ್ಳಲು ಸಿದ್ಧರಾಗಿ ಕುಳಿತಿದ್ದ ಮಹಿಳೆಯರ ಪೈಕಿ ಕೆಲವರಿಗಾದರೂ ಗೌರಿ-ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ಸಿಗಲಿದೆ. ಆದರೆ ರಾಜ್ಯದ ಸಾವಿರಾರು ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಸಿಗುವುದು ಯಾವಾಗ ಎಂಬ ನಿರೀಕ್ಷೆ ಹಾಗೆಯೇ ಉಳಿದಿದೆ.

   English summary
   State government has finally decided to distribute Mysore silk sarees for Rs.4,500 on the occasion of Gowri-Ganesha festival in Mysuru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X