ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 2022; ಆಗಸ್ಟ್‌ 7ಕ್ಕೆ ಗಜಪಯಣ ಆರಂಭ

|
Google Oneindia Kannada News

ಮೈಸೂರು, ಆಗಸ್ಟ್ 05: ಕೋವಿಡ್ ಪಿಡುಗಿನ ಕಾರಣಕ್ಕೆ ಕಳೆದ ಎರಡು ವರ್ಷ ಸರಳವಾಗಿ ಐತಿಹಾಸಿಕ ಮೈಸೂರು ದಸರಾ ಹಬ್ಬ ನಡೆದಿತ್ತು. ಈ ಬಾರಿ ಅದ್ಧೂರಿಯಾಗಿ ನಾಡಹಬ್ಬ ನಡೆಸಲು ಸರ್ಕಾರ ತೀರ್ಮಾನಿಸಿದೆ. ಮೈಸೂರು ದಸರಾದ ಮೊದಲ ಹಂತವಾದ ಗಜಪಯಣ ಆಗಸ್ಟ್ 7ರಂದು ಆರಂಭವಾಗಲಿದೆ.

ಮೈಸೂರು ದಸರಾ 2022ರಲ್ಲಿ ಪಾಲ್ಗೊಳ್ಳುವ ಆನೆಗಳು ನಾಗರಹೊಳೆ ಶಿಬಿರದಿಂದ ಮೈಸೂರು ಅರಮನೆಗೆ ಹೊರಡಲಿವೆ. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಅಧಿಕೃತವಾದ ಆರಂಭ ಸಿಗಲಿದೆ.

 ದಸರಾ ಮಹೋತ್ಸವಕ್ಕೆ ತಯಾರಿ: ಮಾವುತರು, ಕಾವಾಡಿಗರಿಗೆ 42 ಶೆಡ್ ನಿರ್ಮಾಣ ದಸರಾ ಮಹೋತ್ಸವಕ್ಕೆ ತಯಾರಿ: ಮಾವುತರು, ಕಾವಾಡಿಗರಿಗೆ 42 ಶೆಡ್ ನಿರ್ಮಾಣ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೊರ ವಲಯದಲ್ಲಿರುವ ನಾಗಾಪುರ ಸಣ್ಣಗ್ರಾಮದ ಸಮೀಪವೀರುವ ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ 9.01ರಿಂದ 9.35ರ ಮಧ್ಯದ ಶುಭ ಕನ್ಯಾ ಲಗ್ನದಲ್ಲಿ ಗಜಪಡೆಗಳ ಪಯಣ ಶುರುವಾಗಲಿದೆ.

Gajapayana From August 7th For Mysuru Dasara 2022

ಗಜಪಯಣಕ್ಕೆ ಚಾಲನೆ; ಮೈಸೂರು ದಸರಾ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಆನೆಗಳ ಪಯಣ ಸ್ವಲ್ಪ ದೂರದವರೆಗೆ ಮೆರವಣಿಗೆ ಮೂಲಕ ಸಾಗಲಿದೆ. ನಂತರ ವೀರನಹೊಸಹಳ್ಳಿಯಿಂದ ಮೈಸೂರಿಗೆ ಲಾರಿಗಳ ಮೂಲಕ ಆನೆಗಳನ್ನು ಕರೆತರಲಾಗುತ್ತದೆ.

ಗಜಪಯಣಕ್ಕೆ ಅರಣ್ಯ ಸಚಿವ ಉಮೇಶ ಕತ್ತಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ. ಸೋಮಶೇಖರ್‌ ಚಾಲನೆ ನೀಡಲಿದ್ದಾರೆ. ಹುಣಸೂರು ಶಾಸಕ ಎಚ್‌. ಪಿ. ಮಂಜುನಾಥ್‌ ಮತ್ತಿತರರು ಸಹ ಪಾಲ್ಗೊಳ್ಳಲಿದ್ದಾರೆ.

ಆಗಸ್ಟ್ 7ರ ಸಂಜೆ ವೇಳೆಗೆ ಆನೆಗಳು ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಲಿವೆ. ಎರಡು ದಿನ ವಿಶ್ರಾಂತಿ ಪಡೆಯಲಿರುವ ಆನೆಗಳು ಆಗಸ್ಟ್ 10 ರಂದು ಮೈಸೂರಿನ ಅರಮನೆ ಆವರಣಕ್ಕೆ ಆಗಮಿಸಲಿವೆ. ಅವುಗಳನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Gajapayana From August 7th For Mysuru Dasara 2022

ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಎರಡು ತಂಡಗಳಲ್ಲಿ ಆನೆಗಳು ಮೈಸೂರಿಗೆ ಆಗಮಿಸಲಿವೆ. ಮುಖ್ಯವಾಗಿ 'ಅಭಿಮನ್ಯು' ಹಾಗೂ 'ಅರ್ಜುನ' ಒಳಗೊಂಡ ಮೊದಲ ತಂಡದ ಆನೆಗಳು ಮೈಸೂರಿಗೆ ಆಗಸ್ಟ್7ಕ್ಕೆ ಆಗಮಿಸಿದರೆ ಎರಡನೇ ತಂಡದ ಆನೆಗಳು ಸೆಪ್ಟೆಂಬರ್‌ನಲ್ಲಿ ಆಗಮಿಸುವ ನಿರೀಕ್ಷೆ ಇದೆ.

ಇನ್ನು ಅರಮನೆ ಆವರಣದಲ್ಲಿ ಆನೆಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಮಾವುತರು ಮತ್ತು ಕಾವಾಡಿಗಳ ವಾಸ್ತವ್ಯಕ್ಕೆ ಸಹ ವ್ಯವಸ್ಥೆ ಕಲ್ಪಿಸಲಿದೆ. ಅಧಿಕಾರಿಗಳು ಮಾವುತರು ಮತ್ತು ಕಾವಾಡಿಗಳಿಗಾಗಿ ಅಗತ್ಯ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ. ಮಾವುತರು, ಕಾವಾಡಿಗಳ ಮಕ್ಕಳಿಗೆಂದು ಅಧಿಕಾರಿಗಳು ತಾತ್ಕಾಲಿಕ ಶಾಲೆ ನಿರ್ಮಿಸಲಿದ್ದಾರೆ.

ಅಕ್ಟೋಬರ್ 5ಕ್ಕೆ ವಿಜಯದಶಮಿ; ಎರಡು ವರ್ಷದ ನಂತರ ಮತ್ತೆ ಮೈಸೂರು ದಸರಾಕ್ಕೆ ತನ್ನ ಹಳೆಯ ಸೌಂದರ್ಯ, ಸೊಬಗು ವಿಜೃಂಭಣೆ ಸಿಗಲಿದೆ. ಈ ಬಾರಿ ಅದ್ಧೂರಿ ವಿಜಯದಶಮಿ, ಮೆರವಣಿಗೆ, ಪೂಜೆ, ಧಾರ್ಮಿಕ ಕೈಂಕರ್ಯ ಜರುಗಲಿವೆ.

2022 ಸೆಪ್ಟೆಂಬರ್ 26 ರಂದು ದಸಾರ ಪ್ರಾರಂಭವಾಗಲಿದೆ. ಜಂಬೂ ಸವಾರಿ ಅಕ್ಟೋಬರ್ 5 ರಂದು ವಿಜಯದಶಮಿಯಂದು ನಡೆಯಲಿದೆ. ಅಲ್ಲಿಯವರೆಗೆ ಅಂದರೆ ಸುಮಾರು ಎರಡು ತಿಂಗಳು ಆನೆಗಳಿಗೆ ತರಬೇತಿ ನೀಡಲಾಗುತ್ತದೆ.

English summary
Mysuru Dasara 2022; Gajapayana from Nagarahole on August 7th. 10 day Mysuru Dasara celebrations to be held from September 26 to October 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X