ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

35 ವರ್ಷಗಳ ಬಳಿಕ ನುಗು ಏತ ನೀರಾವರಿಗೆ ಅನುದಾನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 11; ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲವಾರು ಗ್ರಾಮಗಳಿಗೆ ನೀರು ಹರಿಸುವ ನುಗು ಏತ ನೀರಾವರಿ ಯೋಜನೆಗೆ 35 ವರ್ಷಗಳ ಬಳಿಕ 80 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದೆ.

ನುಗು ಏತ ನೀರಾವರಿ ಯೋಜನೆಗೆ ಅನುದಾನ ದೊರೆಯುವಂತೆ ಮಾಡುವಲ್ಲಿ ಎಚ್. ಡಿ. ಕೋಟೆ ಶಾಸಕ ಬಿ. ಹರ್ಷವರ್ಧನ್‌ ಶ್ರಮವಹಿಸಿದ್ದು, ಹಣಕಾಸು ಇಲಾಖೆಯಿಂದ ಯೋಜನೆ ಜಾರಿಗೆ ಅನುಮೋದನೆ ದೊರೆತಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ವಿವಿ ಸಾಗರಕ್ಕೆ ಕೇಂದ್ರ ನೀರಾವರಿ ಅಧಿಕಾರಿಗಳ ಭೇಟಿ ವಿವಿ ಸಾಗರಕ್ಕೆ ಕೇಂದ್ರ ನೀರಾವರಿ ಅಧಿಕಾರಿಗಳ ಭೇಟಿ

ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಬಳಿ ಕಬಿನಿ ನದಿಯಿಂದ ಪಂಪ್ ಮೂಲಕ ನೀರನ್ನು ಎತ್ತಿ ರೈಸಿಂಗ್ ಮೇನ್ ಮೂಲಕ ನುಗು ನದಿಗೆ ಹರಿಸಿ ಅಣೆಕಟ್ಟು ತುಂಬಿಸುವುದೇ ನುಗು ಏತ ನೀರಾವರಿ ಯೋಜನೆಯಾಗಿದೆ. ಇದನ್ನು ಜಾರಿಗೊಳಿಸುವಂತೆ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಗೊಂಡ ಬಿ.ಹರ್ಷವರ್ಧನ್‌ ಮುಂದೆ ಜನರು ಬೇಡಿಕೆ ಇಟ್ಟಿದ್ದರು.

ಹಲವು ದಾಖಲೆಗಳಿಗೆ ನಾಂದಿಯಾದ ಕಾಳೇಶ್ವರಂ ನೀರಾವರಿ ಯೋಜನೆಹಲವು ದಾಖಲೆಗಳಿಗೆ ನಾಂದಿಯಾದ ಕಾಳೇಶ್ವರಂ ನೀರಾವರಿ ಯೋಜನೆ

ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಬಜೆಟ್‌ನಲ್ಲಿ ನುಗು ಏತ ನೀರಾವರಿ ಯೋಜನೆಗೆ 80 ಕೋಟಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದರು. ನುಗು ಜಲಾಶಯ ಎಡ, ಬಲ, ಮೇಲ್ದಂಡೆ ಮತ್ತು ಹಲಸೂರು ನಾಳೆಗಳನ್ನು ಹೊಂದಿದೆ. ಸುಮಾರು 18511 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಇದು ಹೊಂದಿದೆ.

ಬಜೆಟ್ 2021: ನೀರಾವರಿ ಕ್ಷೇತ್ರಕ್ಕೆ 20,996 ಕೋಟಿ ಅನುದಾನ ಬಜೆಟ್ 2021: ನೀರಾವರಿ ಕ್ಷೇತ್ರಕ್ಕೆ 20,996 ಕೋಟಿ ಅನುದಾನ

ಕುಮಾರಸ್ವಾಮಿ ಜೊತೆ ಚರ್ಚಿಸಿದ್ದರು

ಕುಮಾರಸ್ವಾಮಿ ಜೊತೆ ಚರ್ಚಿಸಿದ್ದರು

ಶಾಸಕರಾಗಿ ಆಯ್ಕೆಯಾದ ತಕ್ಷಣವೇ ಹರ್ಷವರ್ಧನ್‌ ಈ ಯೋಜನೆ ಕುರಿತು ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆ ಚರ್ಚಿಸಿದ್ದರು. 2019-20ರ ಬಜೆಟ್‌ನಲ್ಲಿ 80 ಕೋಟಿ ರೂ. ಅನುದಾನ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಯಿತು.

ಆರ್ಥಿಕ ಮಂಜೂರಾತಿ ನೀಡಿದ್ದರು

ಆರ್ಥಿಕ ಮಂಜೂರಾತಿ ನೀಡಿದ್ದರು

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮೈಸೂರಿಗೆ ಬಂದಿದ್ದ ವೇಳೆ ನುಗು ಯೋಜನೆಯತ್ತ ಗಮನ ಸೆಳೆಯಲಾಗಿತ್ತು. ಸ್ಥಳದಲ್ಲಿಯೇ ಆರ್ಥಿಕ ಮಂಜೂರಾತಿ ನೀಡಿದ್ದರು. ಬಳಿಕ ಬಜೆಟ್‌ನಲ್ಲಿ ಅನುದಾನ ಘೋಷಿಸಿರುವ ಕುರಿತು ಶಾಸಕ ಹರ್ಷವರ್ಧನ್, ಯಡಿಯೂರಪ್ಪ ಗಮನ ಸೆಳೆಯುತ್ತಿದ್ದಂತೆ ಆರ್ಥಿಕ ಮಂಜೂರಾತಿಗೆ ಸ್ಥಳದಲ್ಲೇ ಆದೇಶ ಹೊರಡಿಸಿದರು.

270 ಕ್ಯುಸೆಕ್ ನೀರು ಎತ್ತಲಾಗುತ್ತದೆ

270 ಕ್ಯುಸೆಕ್ ನೀರು ಎತ್ತಲಾಗುತ್ತದೆ

ಈ ಯೋಜನೆಗಾಗಿ ನದಿಯಿಂದ 270 ಕ್ಯೂಸೆಕ್ ನೀರು ಎತ್ತಲಾಗುತ್ತದೆ. 2.4 ಟಿಎಂಸಿ ನೀರಿನ ಅಗತ್ಯವಿದ್ದು 3.05 ಕಿ.ಮೀ. ಉದ್ದಕ್ಕೆ 2.5 ಮೀಟರ್ ವ್ಯಾಸದ ಎಂಎಸ್ ರೈಸಿಂಗ್ ಪೈಪ್‌ಲೈನ್‌ನಿಂದ ಡೆಲಿವರಿ ಚೇಂಬರ್ 1.3 ಕಿ.ಮೀ. ನಾಲೆ ಕೊರೆದು ಇದರಿಂದ ನುಗು ನದಿಗೆ ನೀರು ಹರಿಸಿ ಅಣೆಕಟ್ಟೆಗೆ ತುಂಬಲಾಗುತ್ತದೆ. ಇದರಿಂದ 10 ಸಾವಿರ ಎಕರೆ ಪ್ರದೇಶಕ್ಕೆ ನೀರು ಲಭಿಸಲಿದೆ.

ವಿದ್ಯುತ್ ಉತ್ಪಾದನೆಯ ಗುರಿ

ವಿದ್ಯುತ್ ಉತ್ಪಾದನೆಯ ಗುರಿ

ಕರತಲೆ, ಮಸಗೆ, ಕಳಲೆ, ಹಂಡುವಿನಹಳ್ಳಿ, ದೇಬೂರು, ಕರಳಾಪುರ, ದೇವೀರಮ್ಮನಹಳ್ಳಿ, ಸಿಂಧುವಳ್ಳಿ, ಕಾಳಿಹುಂಡಿ, ಸಿಂಗಾರಿಪುರ, ಶ್ರೀನಗರ, ಹೆಡತಲೆ, ಗೀಕಹಳ್ಳಿ, ದೇವರಸನಹಳ್ಳಿ, ಉಪ್ಪನಹಳ್ಳಿ, ಹೊಸೂರು, ಕೋಡಿನರಸೀಪುರ, ಹೊರಳವಾಡಿ, ಮಳ್ಳೂರು, ಅಳಗಂಚಿಪುರ ಸೇರಿದಂತೆ 100ಕ್ಕೂ ಹೆಚ್ಚು ಗ್ರಾಮಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆಯಾಗಲಿದೆ.

ನರಸಾಂಬುಧಿಕೆರೆ, ಕಳಲೆ ಚೆಲುವಾಂಬ ಕೆರೆಸೇರಿದಂತೆ ಎಂಟು ಕೆರೆ ಕಟ್ಟೆಗಳೂ ತುಂಬುವುದರಿಂದ ಹತ್ತಾರು ಗ್ರಾಮಗಳ ಅಂತರ್ಜಲ ಹೆಚ್ಚಲಿದೆ. 17 ಕೋಟಿ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿ ಎರಡು ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆ ಇದರಲ್ಲಿ ಸೇರಿದೆ.

English summary
After 35 years fund released for Upper Nugu project. Nugu Dam is at H. D. Kote taluk of Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X