• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಬಾರಿ ಹೊರುವ ಅರ್ಜುನನ ಸಂಪೂರ್ಣ ವಿವರ ಇಲ್ಲಿದೆ ಓದಿ...

|

ಮೈಸೂರು, ಅಕ್ಟೋಬರ್.18: ವಿಶ್ವವಿಖ್ಯಾತ ದಸರಾ ಮಹೋತ್ಸವ ಮೆರವಣಿಗೆಯ ಕೇಂದ್ರಬಿಂದು ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನ ಹಾಗೂ ಮಾವುತ ವಿನು ನಡುವೆ ಮೂಕ ಸಂಜ್ಞೆ-ಸಂಭಾಷಣೆ ನಡೆಯುತ್ತಾ ಪರಸ್ಪರ ಮೇ ಹೂ ನಾ' ಎಂದು ಧೈರ್ಯ ತುಂಬುತ್ತಿದ್ದ ದೃಶ್ಯ ಅರಮನೆಯ ಆವರಣದಲ್ಲಿ ಕಂಡು ಬಂತು.

ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ಲಕ್ಷಾಂತರ ಜನರ ನಡುವೆ ಜವಾಬ್ದಾರಿಯಿಂದ ಗಾಂಭೀರ್ಯವಾಗಿ ಸಾಗಬೇಕಿದೆ. ಅರ್ಜುನನ ಸುತ್ತ ಸಾವಿರಾರು ಜನರು ಓಡಾಡುತ್ತಿರುತ್ತಾರೆ.

ಸಾಂಸ್ಕೃತಿಕ ಮೇಳಗಳಾದ ಡೊಳ್ಳು, ತಮಟೆ, ಒಡ್ಡೋಲಗ ಮುಂತಾದ ವಾದ್ಯಗಳ ಅಬ್ಬರದ ಶಬ್ದದ ನಡುವೆ ಯಾವುದಕ್ಕೂ ಎದೆಗುಂದದೆ ಮುಂದೆ ಸಾಗಬೇಕು ಎನ್ನುವ ಬಗ್ಗೆ ಇಬ್ಬರೂ ಸಂವಾದ ಮಾಡಿಕೊಂಡಂತಿತ್ತು.

ವಿನು ಮತ್ತು ಅರ್ಜುನ ಈ ಬಾರಿ ದಸರಾದ ಭಲೇ ಜೋಡಿ. ಒಬ್ಬರಿಗೊಬ್ಬರು ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ವಿನು ಮಾತನ್ನು ಅರ್ಜುನ ಕೇಳುತ್ತಾನೆ. ಅರ್ಜುನನ ಮನಸ್ಸನ್ನು ವಿನು ಅರ್ಥ ಮಾಡಿಕೊಂಡಿದ್ದಾನೆ ಎಂದು ಅವರಿಬ್ಬರನ್ನು ನೋಡಿದವರು ಹೇಳದೇ ಇರುವುದಿಲ್ಲ.

ಮೈಸೂರು ದಸರಾ - ವಿಶೇಷ ಪುರವಣಿ

ಆರೋಗ್ಯ ಚೆನ್ನಾಗಿರುವುದರಿಂದ ಅಂಬಾರಿ ಹೊರಲು ಅಧಿಕಾರಿಗಳು ಈ ಅರ್ಜುನನನ್ನೇ ಆಯ್ಕೆ ಮಾಡಿದ್ದಾರೆ. ತೂಕದಲ್ಲಿ ಎಲ್ಲಾ ಆನೆಗಳಿಗಿಂತ ಮುಂದಿದ್ದು 5,650 ಕೆಜಿ ಮೂಲಕ ಕಳೆದ ಬಾರಿಗಿಂತ 400 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ದಸರಾ ಮುಗಿಯುವವರಗೆ 6 ಸಾವಿರ ಕೆಜಿ ದಾಟಲಿದ್ದಾನೆ.

ನಿಮಗೆ ಗೊತ್ತೇ? ಅರಮನೆಯಲ್ಲಿರುವ ಎಲ್ಲಾ ಕಾರುಗಳ ನಂಬರ್ 1953..!

2012ರಿಂದ ಇಲ್ಲಿಯವರೆಗೆ ಆರು ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊತ್ತು ಯಶಸ್ವಿಯಾಗಿ ದಸರಾ ಮುಗಿಸಿದ್ದಾನೆ. ಈ ಬಾರಿ ಅಂಬಾರಿ ಹೊತ್ತರೆ 7ನೇ ಬಾರಿಯಾಗುತ್ತದೆ. ಅರ್ಜುನನ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. ಮುಂದೆ ಓದಿ...

 ಮಾವುತ ವಿನು ಹೇಳುವುದೇನು?

ಮಾವುತ ವಿನು ಹೇಳುವುದೇನು?

ಕಳೆದ 20 ವರ್ಷಗಳಿಂದ ಅರ್ಜುನನ ಜೊತೆಯಲ್ಲಿದ್ದೇನೆ. ಆನೆ ಹಿಡಿಯಲು ಈತನನ್ನೇ ಕರೆದುಕೊಂಡು ಹೋಗಲಾಗುತ್ತದೆ. ಈ ಬಾರಿ ಅಂಬಾರಿ ಹೊರಲು ಸಿದ್ಧವಾಗಿದ್ದಾನೆ. ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ. ಯಾರೂ ಬೇಕಾದರೂ ಬಂದು ಮಾತನಾಡಿಬಹುದು.

ಅರ್ಜುನ ಆನೆಯಿಂದ ನಮ್ಮ ಕುಟುಂಬ ಅನ್ನ ತಿನ್ನುತ್ತಿದೆ. ನಮ್ಮ ಮಗ ವಿನು ಕೂಡು ಅರ್ಜುನನ ಸೇವೆ ಮಾಡಿಕೊಂಡು ಬರುತ್ತಿದ್ದಾನೆ ಎನ್ನುತ್ತಾರೆ ಅರ್ಜುನ ಆನೆಯ ಮಾವುತ ವಿನು.

ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್

 ಆನೆಯ ಇತಿಹಾಸ

ಆನೆಯ ಇತಿಹಾಸ

ಅರ್ಜುನ ಆನೆಯನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಕಾರ್ಯಾಚರಣೆ ಮೂಲಕ ಸೆರೆಹಿಡಿಯಲಾಯಿತು. ಇದಾದ ಬಳಿಕ ಬಲಶಾಲಿ ಅರ್ಜುನ ದಸರೆ ಟೀಂನೊಂದಿಗೆ 1990ರಲ್ಲಿ ಸೇರಿಸಲಾಯಿತು. ಅಂದರೆ ದಸರೆಯ ಗಜಪಡೆಯೊಂದಿಗೆ ಅರ್ಜುನನದ್ದು 2 ದಶಕಗಳ ಇತಿಹಾಸ.

 ಕೆಲವು ವರ್ಷಗಳ ಕಾಲ ದೂರ

ಕೆಲವು ವರ್ಷಗಳ ಕಾಲ ದೂರ

ಶಾಂತ ಸ್ವಾಭಾವದಿಂದಲೇ ಇದ್ದ ಅರ್ಜುನ ಏಕಾಏಕಿ ರೌದ್ರಾವತಾರದ ಬಗ್ಗೆ ಗೊತ್ತಾಗಿದ್ದೇ ಆಗ. ಅಂದು 1996. ಅರ್ಜುನ, ಬಹದ್ದೂರ್ ಹಾಗೆಯೇ ಮತ್ತೊಂದು ಆನೆಯನ್ನು ಮೈಸೂರಿನ ಕಾರಂಜಿ ಕೆರೆಗೆ ದಸರೆಯ ವೇಳೆ ಸ್ನಾನಕ್ಕಾಗಿ ಕರೆದ್ಯೊಯಲಾಗುತ್ತಿತ್ತು .

ಅದೇ ಸಮಯದಲ್ಲಿ ಬಹದ್ದೂರ್ ಆನೆಯ ಮಾವುತ ಅಣ್ಣಯ್ಯನನ್ನು ಅರ್ಜುನನ್ನೇ ತುಳಿದು ಗಾಯಗೊಳಿಸಿದ ಎಂಬ ಅಪವಾದ ಬಂತು. ಕಾರಣ ಅವನಲ್ಲಿದ್ದ ಕಟು ಸ್ವಭಾವ. ಅದಾದ ಬಳಿಕ ಅವನನ್ನು ದಸರೆಯಿಂದಲೇ ಕೆಲವು ವರ್ಷಗಳ ಕಾಲ ದೂರವಿಡಲಾಯಿತು.

 ವೈಭವದ ಅಂಬಾರಿ ಸೇವೆ

ವೈಭವದ ಅಂಬಾರಿ ಸೇವೆ

ಅರ್ಜುನ ನಂತರ ಕಂಡುಬಂದಿದ್ದು ನಾಗರಹೊಳೆ ಅಭಯಾರಣ್ಯದ ಬಳ್ಳೆ ಅರಣ್ಯಪ್ರದೇಶದಲ್ಲಿ. ಇದಾದ ಬಳಿಕ ಮುಂದಿನ ದಸರೆಯ ಸಂದರ್ಭದಲ್ಲಿ ಅಂಬಾರಿಯ ಸಾರಥ್ಯ ವಹಿಸಿದ್ದು ಬಲಶಾಲಿ ಬಲರಾಮನೇ. ಅವನಿಗೂ ವಯಸ್ಸಾಗುತ್ತಾ ಬಂದ ಕಾರಣ ನಿವೃತ್ತಿಗೊಳಿಸಿ 2012ರಲ್ಲಿ ಮತ್ತೆ ಅರ್ಜುನನೇ ಮುಂದಿನ ಅಂಬಾರಿಯ ರಾಯಭಾರಿಯಾದ.

ಇಂದಿಗೂ ಅವನ ಸಾರಥ್ಯದಲ್ಲೇ 750 ಕೆ ಜಿಯ ರತ್ನಖಚಿತ ವೈಭವದ ಅಂಬಾರಿ ಸೇವೆ ನಡೆಯುತ್ತಿರುವುದು ವಿಶೇಷ.

English summary
Arjuna to carry golden howdah this year. Here we will give full information about Arjuna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X