ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರೀ ಕಾಶ್ಮೀರ​ ಪ್ರಕರಣ: ಜಾಮೀನು ಅರ್ಜಿ ತೀರ್ಪು ಇಂದು ಪ್ರಕಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 27: ಜೆಎನ್​ಯು ಗಲಾಟೆ ಖಂಡಿಸಿ, ಜನವರಿ 8 ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಯುವ ವೇಳೆ ವಿಶ್ವವಿದ್ಯಾಲಯಯದ ಹಳೇ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್​​ "ಫ್ರೀ ಕಾಶ್ಮೀರ' ಫಲಕ​ ಪ್ರದರ್ಶನ ಮಾಡಿದ್ದ ಪ್ರಕರಣದ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಇಂದು ಪ್ರಕಟಿಸಲಿದೆ.

ಜನವರಿ 24 ರಂದು ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ನಡೆಸಿತ್ತು. ಇಂದು ನಳಿನಿ ಹಾಗೂ ಮರಿದೇವಯ್ಯ ಅವರ ಜಾಮೀನು ಅರ್ಜಿ ತೀರ್ಪು ಪ್ರಕಟವಾಗಲಿದೆ.

ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್" ಫಲಕ ವಿವಾದ; ಫಲಕ ಹಿಡಿದ ನಳಿನಿ ಹೇಳುವುದೇನು?

ನಳಿನಿ ಬಾಲಕುಮಾರ್ ಪರ ಐವರು ವಕೀಲರು ವಾದ ಮಂಡಿಸಿದ್ದರು. ಜನವರಿ ೨೪ ರಂದು ಎರಡು ಗಂಟೆಗಳ ವಾದ ಆಲಿಸಿದ್ದ ಕೋರ್ಟ್,​ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

Free Kashmir Case: Nalinis Bail Application Verdict Today

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ "ಫ್ರೀ ಕಾಶ್ಮೀರ' ಫಲಕ ಪ್ರದರ್ಶಿಸಿದ್ದರು, ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿ, ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ನಳಿನಿ, ಪ್ರತಿಭಟನೆಯ ಆಯೋಜಕರಾದ ಮರಿದೇವಯ್ಯ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

Free Kashmir Case: Nalinis Bail Application Verdict Today

"ಫ್ರೀ ಕಾಶ್ಮೀರ್" ಪ್ರಕರಣ: ನಳಿನಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ

ನಂತರ ನಳಿನಿ ಮೈಸೂರು ಜಿಲ್ಲಾ ಮತ್ತು ಸೆಷನ್ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್​, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ನಂತರ ನಳಿನಿ ರೆಗ್ಯೂಲರ್​ ಬೇಲ್​ಗೆ ಮನವಿ ಮಾಡಿದ್ದರು.

English summary
The Mysuru court will release the bail application Verdict of Nalini Balakumars Free Kashmir Board Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X