ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಬೆರಳಿನಲ್ಲಿರುವ ಶಾಯಿ ತೋರಿಸಿದರೆ ಉಚಿತ ದಂತ ಚಿಕಿತ್ಸೆ

|
Google Oneindia Kannada News

ಮೈಸೂರು, ಏಪ್ರಿಲ್ 19: ಮೈಸೂರು-ಕೊಡಗು ಕ್ಷೇತ್ರದಲ್ಲಿ ಗುರುವಾರ (ಏ.18) ಮತದಾನ ನಡೆದಿದ್ದು, ಶೇ.68ರಷ್ಟು ವೋಟಿಂಗ್ ಆಗಿದೆ. ಹಲವೆಡೆ ವಿಭಿನ್ನ ರೀತಿಯಲ್ಲಿ ಈ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕಸರತ್ತು ನಡೆಸಲಾಗಿತ್ತು. ಮೈಸೂರಿನಲ್ಲಿಯೂ ಸಹ ವಿಭಿನ್ನ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದು, ಇದೀಗ ಮೈಸೂರಿನಲ್ಲಿ ವೋಟ್ ಹಾಕಿ ಬಂದವರಿಗೆ ಉಚಿತ ದಂತ ಚಿಕಿತ್ಸೆಯನ್ನು ನೀಡಲು ಸಂಸ್ಥೆಯೊಂದು ನಿರ್ಧರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಮತದಾನ ಮಾಡಿ ಬಂದವರಿಗೆ ಉಚಿತ ದಂತ ಚಿಕಿತ್ಸೆ ನೀಡುವ ಮೂಲಕ ಮೈಸೂರಿನ‌ ಅನಿ‌ಫೌಂಡೇಶನ್ ‌ವಿಶಿಷ್ಟ ಅಭಿಯಾನ ನಡೆಸುತ್ತಿದೆ. ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಮತದಾನ ಮಾಡಿ ಬಂದು ಬೆರಳಿನಲ್ಲಿರುವ ಶಾಯಿ ತೋರಿಸಿದರೆ ಸಾಕು ಉಚಿತ ಚಿಕಿತ್ಸೆ ಸಿಗಲಿದೆ.

 ಹುಬ್ಬಳ್ಳಿ : ಬುಲೆಟ್ ಬೈಕ್ ಮೂಲಕ ಮತದಾನ ಜಾಗೃತಿ ಹುಬ್ಬಳ್ಳಿ : ಬುಲೆಟ್ ಬೈಕ್ ಮೂಲಕ ಮತದಾನ ಜಾಗೃತಿ

Free dental treatment for voting awareness in Mysuru

ಬೆರಳಿನಲ್ಲಿ ಶಾಯಿ ಎಷ್ಟು ದಿನ ಇರುತ್ತದೆ ಅಲ್ಲಿವರೆಗೂ ಅನಿ‌ಫೌಡೇಶನ್ ವತಿಯಿಂದ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದು. ಇದನ್ನು ಮೈಸೂರಿನ ಹೆಬ್ಬಾಳದ ಸಂಕ್ರಾಂತಿ ವೃತ್ತದಲ್ಲಿರುವ ಸ್ಮೈಲ್ ಆರ್ಕಿಟೆಕ್ ಡೆಂಟಲ್ ಕ್ಲಿನಿಕ್ ತಂಡದವರು ನಡೆಸುತ್ತಿರುವುದು ಸ್ತುತ್ಯಾರ್ಹ.

English summary
Lok Sabha Election 2019:Free dental treatment for voting awareness in Mysuru. Ani foundation team members decided to provide this treatment for increase voting levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X