ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೈಬಸ್‌ಗೆ ಉಚಿತ ವೋಲ್ವೋ ಸಂಪರ್ಕ ಸೇವೆ

|
Google Oneindia Kannada News

ksrtc
ಮೈಸೂರು, ಸೆ.17 : ಬೆಂಗಳೂರು ವಿಮಾನ ನಿಲ್ದಾಣ ಮತ್ತು ಮೈಸೂರಿನ ನಡುವೆ ಸಂಪರ್ಕ ಕಲ್ಪಿಸುವ ಫ್ಲೈಬಸ್ ಸೇವೆಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಕೆಎಸ್ಆರ್ ಟಿಸಿ ವೋಲ್ವೋ ಬಸ್‌ ಉಚಿತ ಸಂಪರ್ಕ ಸೇವೆಯನ್ನು ಪ್ರಾರಂಭಿಸಿದೆ.

ಸೋಮವಾರ ಮೈಸೂರಿನಲ್ಲಿ ಈ ಸಂಪರ್ಕ ಸೇವೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ಹೋಟೆಲ್‌, ಬಡಾವಣೆಗಳ ಮುಖಾಂತರ ಜನರು ಈ ವೋಲ್ವೋ ಬಸ್ ಮೂಲಕ, ಕೆಎಸ್ಆರ್ ಟಿಸಿ ನಿಲ್ದಾಣ ತಲುಪಿ ಫ್ಲೈಬಸ್ ಮೂಲಕ ಬೆಂಗಳೂರಿಗೆ ತೆರಳಬಹುದಾಗಿದೆ.

ಫ್ಲೈ ಬಸ್ ಸೇವೆಗೆ ಹೆಚ್ಚಿನ ಜನರನ್ನು ಆಕರ್ಷಿಸಲು ಕೆಎಸ್ಆರ್ ಟಿಸಿ ಈ ಸೇವೆಯನ್ನು ಪ್ರಾರಂಭಿಸಿದೆ. ವೋಲ್ವೋ ಬಸ್ ಗಳನ್ನು ಈ ಸಂಪರ್ಕ ಸೇವೆಗಾಗಿ ಬಳಸಿಕೊಳ್ಳಲಾಗಿದೆ. ಫ್ಲೈ ಬಸ್ ಗೆ ಸಂಪರ್ಕ ಕಲ್ಪಿಸುವ ಈ ಸೇವೆ ಉಚಿತವಾಗಿದೆ. (ಬೆಂಗಳೂರು ವಿ.ನಿಲ್ದಾಣ- ಮೈಸೂರು ಮಧ್ಯೆ ನೇರ ಬಸ್)

ಮಾರ್ಗ ಯಾವುದು : ಈ ನೂತನ ಸಂಪರ್ಕ ಸೇವೆ ಹೆಬ್ಟಾಳು ಕೈಗಾರಿಕಾ ಪ್ರದೇಶ ಇನ್ಫೋಸಿಸ್‌ನಿಂದ ಆರಂಭವಾಗಲಿದೆ. ಕೂರ್ಗಳ್ಳಿ, ಹೂಟಗಳ್ಳಿ, ಹಿನಕಲ್‌, ಪ್ರಿಮೀಯರ್ ಸ್ಟೂಡಿಯೋ, ಬಿಎಂ ಆಸ್ಪತ್ರೆ, ಮೆಟ್ರೋಪಾಲ್‌ ವೃತ್ತ, ರೈಲ್ವೇ ನಿಲ್ದಾಣ ವೃತ್ತ, ಕೆಆರ್ ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಗ್ರಾಮಾಂತರ ಬಸ್‌ ನಿಲ್ದಾಣ ತಲುಪಲಿದೆ.

ಈ ಮಾರ್ಗಗಳಿಂದ ಸಾರ್ವಜನಿಕರು, ವೋಲ್ವೋ ಬಸ್ ನಲ್ಲಿ ಉಚಿತವಾಗಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿ, ಫ್ಲೈಬಸ್‌ ಏರಿ ಬೆಂಗಳೂರು ತಲುಪಬಹುದು. ಫ್ಲೈ ಬಸ್ ಹೊರಡುವ ಸಮಯಕ್ಕೆ ಅನುಗುಣವಾಗಿ ಪ್ರಯಾಣಿಕರನ್ನು ಈ ಬಸ್ ನಿಲ್ದಾಣಕ್ಕೆ ತಲುಪಿಸಲಿದೆ.

ಕೆಎಸ್ಆರ್ ಟಿಸಿ ಆರಂಭಿಸಿರುವ ಫ್ಲೈಬಸ್‌ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ ಜನರನ್ನು ಆಕರ್ಷಿಸಲು ಇಂತಹ ಉಚಿತ ಸಂಪರ್ಕ ಸೇವೆ ಬಸ್ ಆರಂಭಿಸಿದೆ. ಇದರಿಂದ ಫ್ಲೈ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆಯೇ ಕಾದು ನೋಡಬೇಕು.

English summary
Karnataka Road Transport Corporation (KSRTC) begins connectivity free Volvo bus service for Mysore Fly bus Traveling from Mysore to Bangalore Airport. Mysore passengers can travel free in Volvo connectivity bus from different parts of city and catch fly bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X