ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಜರಾತಿಗೆ ಹೊರಟ ಸೀತಾ, ರೂಬಿ, ರಾಜೇಶ್ವರಿ, ಜೆಮಿನಿ; bye bye

|
Google Oneindia Kannada News

ಮೈಸೂರು, ಸೆಪ್ಟೆಂಬರ್ 21: ಮೈಸೂರು ಒಡೆಯರ್ ರಾಜಮನೆತನದ ಆನೆಗಳನ್ನು ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅರಮನೆಯಲ್ಲಿರುವ ಪ್ರತಿ ಆನೆಗಳನ್ನು ನಿರ್ವಹಣೆ ಮಾಡಲು ದಿನಕ್ಕೆ 10 ಸಾವಿರ ರೂ. ಖರ್ಚಾಗುತ್ತಿದೆ. ತಿಂಗಳಿಗೆ 6 ಆನೆಗಳ ನಿರ್ವಹಣೆಗೆ ಸುಮಾರು 18 ಲಕ್ಷ ರೂ. ವೆಚ್ಚವಾಗುತ್ತಿದೆ.

ಹೀಗಾಗಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಸದ್ಯ ಆರು ಆನೆಗಳಿದ್ದು, ಇದರಲ್ಲಿ ನಾಲ್ಕು ಆನೆಗಳು ಗುಜರಾತ್​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಎರಡು ಆನೆಗಳು ಅರಮನೆಯಲ್ಲೇ ಉಳಿದುಕೊಳ್ಳಲಿವೆ.

ಅರಮನೆ ಆನೆಗಳು ದಸರಾ ಪರಂಪರೆಯ ಪೂಜೆ ವೇಳೆ ಬಳಕೆಯಾಗುತ್ತಿದ್ದವು. ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಿದ್ದವು. ಇದೀಗ ಎರಡು ಆನೆಗಳನ್ನು ಮಾತ್ರ ಉಳಿಸಿಕೊಂಡು ಉಳಿದ ಆನೆಗಳ ರವಾನೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರಾಜಮನೆತನದವರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.

Mysuru: Four Palace Elephants To Be Rehabilitated In Gujarat; Here Is Why

ಸೀತಾ, ರೂಬಿ, ರಾಜೇಶ್ವರಿ, ಜೆಮಿನಿ ಹೆಸರಿನ ಆನೆಗಳು ಗುಜರಾತ್​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಚಂಚಲ್ ಮತ್ತು ಪ್ರೀತಿ ಹೆಸರಿನ ಎರಡು ಆನೆಗಳು ಮೈಸೂರು ಅರಮನೆಯಲ್ಲೇ ಉಳಿಯಲಿವೆ. ಗುಜರಾತ್ ಇಸ್ಕಾನ್​ಗೆ ಈ ಆನೆಗಳನ್ನು ಕಳುಹಿಸಲಾಗುತ್ತಿದ್ದು, ಅಲ್ಲಿ ಈಗಾಗಲೇ 50 ಆನೆಗಳಿವೆ ಎನ್ನಲಾಗಿದೆ.

ದಸರಾ ಉದ್ಘಾಟನೆಗೆ 15 ದಿನ ಮಾತ್ರ ಬಾಕಿ
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೇವಲ 15 ದಿನ ಮಾತ್ರ ಬಾಕಿಯಿದ್ದು, ಈವರೆಗೂ ದಸರಾ ಉದ್ಘಾಟಕರು ಯಾರು ಎಂಬುದು ನಿರ್ಧಾರವಾಗಿಲ್ಲ. ಉದ್ಘಾಟಕರ ವಿಚಾರವಾಗಿ ಯಾವುದೇ ಚರ್ಚೆಯೂ ಆಗಿಲ್ಲ. ಇದುವರೆಗೂ ಯಾರೊಬ್ಬರ ಹೆಸರನ್ನೂ ರಾಜ್ಯ ಸರ್ಕಾರ ಪ್ರಸ್ತಾಪಿಸಿಲ್ಲ. ಈ ಬಾರಿಯ ದಸರಾ ಉದ್ಘಾಟಕರು ಯಾರಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಗಜಪಡೆಗೆ ತಾಲೀಮು ಆರಂಭ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರೆಯ ಸಂಭ್ರಮ ಕಳೆಗಟ್ಟುತ್ತಿದೆ. ಅರಮನೆ ನಗರಿಯಲ್ಲಿ ಈಗಾಗಲೇ ನಾಡಹಬ್ಬದ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಸೋಮವಾರ ಜಂಬೂಸವಾರಿ ಆನೆಗಳು ಮತ್ತು ಫಿರಂಗಿ ಗಾಡಿಗಳಿಗೆ ಪೂಜೆ ಜೊತೆಗೆ ಗಜಪಡೆಗೆ ಮರಳಿನ ಮೂಟೆ ತಾಲೀಮು ನೀಡಲಾಯಿತು.

Mysuru: Four Palace Elephants To Be Rehabilitated In Gujarat; Here Is Why

ಅರಮನೆಯ ಆನೆ ಬಾಗಿಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಬೂಸವಾರಿ ಆನೆಗಳಿಗೆ ಮತ್ತು ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಪೂರ್ವಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಪೂಜೆ ಸಂದರ್ಭದಲ್ಲಿ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ಯಾವುದೇ ವಿಘ್ನಗಳು ಎದುರಾಗದೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ದಸರೆಯ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ದಿನದಂದು ಮೆರವಣಿಗೆ ಆರಂಭಕ್ಕೆ ಮುನ್ನ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಮೈಸೂರಿನ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಇದನ್ನು ನೆರವೇರಿಸಲಿದ್ದಾರೆ.

ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಭಾರೀ ಪ್ರಮಾಣದ ಸದ್ದು ಹೊರಬರಲಿದ್ದು, ಈ ವೇಳೆ ದಸರಾ ಆನೆಗಳು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವ ಅಶ್ವರೋಹಿ ಪಡೆಯ ಕುದುರೆಗಳು ಗಾಬರಿಗೊಳ್ಳುತ್ತವೆ. ಹೀಗಾಗಿ ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಯಾವುದೇ ಅಡೆತಡೆಯಾಗದಂತೆ ನಿಗಾವಹಿಸುವ ನಿಟ್ಟಿನಲ್ಲಿ ದಸರೆ ಆರಂಭಕ್ಕೂ ಮುನ್ನವೇ ಗಜಪಡೆ ಹಾಗೂ ಅಶ್ವರೋಹಿ ಪಡೆಗಳಿಗೆ ಕುಶಾಲತೋಪು ಸಿಡಿಸಿ ತಾಲೀಮು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮೈಸೂರು‌ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಅರಣ್ಯಾಧಿಕಾರಿ‌ ಕರಿಕಾಳನ್ ಸೇರಿದಂತೆ ಇತರ ಅಧಿಕಾರಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.

ದಸರೆ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ನಗರಕ್ಕಾಗಮಿಸಿ ತಾಲೀಮು ಆರಂಭಿಸಿರುವ ಗಜಪಡೆ ಸಾರಥಿ ಅಭಿಮನ್ಯುಗೆ ಸೋಮವಾರದಿಂದ ಭಾರ ಹೊರಿಸಿ ತಾಲೀಮು ನೀಡಲಾಯಿತು. ತಾಲೀಮು ಆರಂಭಕ್ಕೆ ಮುನ್ನ ಅರಮನೆಯಲ್ಲಿ ಆನೆಗಳ ಸಾಂಪ್ರದಾಯಿಕ ಪೂಜಾ ಸಲ್ಲಿಸಿದ ಬಳಿಕ 275 ಕೆ.ಜಿ ತೂಕದ ಮರಳಿನ ಮೂಟೆ ಹೊರಿಸಿ ತಾಲೀಮು ನೀಡಲಾಯಿತು.

English summary
The Mysuru Palace's Four elephants are being prepared to be sent to Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X