ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲೇ ವಿಶ್ವನಾಥ್ ಜೆಡಿಎಸ್ ಗೆ: ಎಚ್ ಡಿಕೆ ಸ್ಪಷ್ಟನೆ

ಕಾಂಗ್ರೆಸ್ ಮಾಜಿ ಸಂಸದ ಎಚ್.ವಿಶ್ವನಾಥ್ ಶೀಘ್ರದಲ್ಲೇ ಜೆಡಿಎಸ್ ಸೇರಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಇಂದು ಮೈಸೂರಿನಲ್ಲಿ ಸ್ಪಷ್ಟಪಡಿದಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 10: ಈಗಾಗಲೇ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಶೀಘ್ರದಲ್ಲೇ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಂಜನಗೂಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಸಂಸದ, ಕಾಂಗ್ರೆಸ್ ನ ಎಚ್.ವಿಶ್ವನಾಥ್ ಸದ್ಯದಲ್ಲೇ ಜೆಡಿಎಸ್ ಸೇರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.['ಹಳ್ಳಿ ಹಕ್ಕಿ' ವಿಶ್ವನಾಥ್ ಜೊತೆ ಸಿದ್ದರಾಮಯ್ಯ 'ಟೂ' ಬಿಟ್ಟಿದ್ದೇಕೆ?]

Former MP Vishwanath will soon join JDS: HD Kumaraswamy

ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಅವರು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಸಮಯದಲ್ಲಿ ಈ ವಿಷಯ ತಿಳಿಸಿದರು.[ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಬರೆದ ಪತ್ರದಲ್ಲೇನಿದೆ?]

ನಿನ್ನೆ (ಮೇ 09) ತಾನೇ ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನ ಕೆಲ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವಿಶ್ವನಾಥ್ ಜೆಡಿಎಸ್ ಗೆ ಸೇರುತ್ತಾರೆಂಬ ವದಂತಿ ಈ ಮೊದಲೇ ಹರಡಿತ್ತು.
ಇದೀಗ ಕುಮಾರಸ್ವಾಮಿಯವರೇ ಈ ಸುದ್ದಿಯನ್ನು ದೃಢಪಡಿಸಿರುವುದು ವದಂತಿಗಳಿಗೆ ತೆರೆ ಎಳೆದಂತಾಗಿದೆ.

English summary
Former member of parliament H Vishwanath will soon join JDS, HD Kumaraswamy, JDS state president told in Mysuru, today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X