ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಚೆ ಮತದಾನದ ವೇಳೆ ಪ್ರತಾಪ್ ಸಿಂಹರಿಂದ ಹಣ ಹಂಚಿಕೆ:ತನ್ವೀರ್ ಸೇಠ್ ಆರೋಪ

|
Google Oneindia Kannada News

ಮೈಸೂರು, ಏಪ್ರಿಲ್ 11:ಮೈಸೂರಿನಲ್ಲಿ ಬುಧವಾರ (ಏ.10) ಅಂಚೆ ಮತದಾನ ನಡೆದಿದ್ದು, ಚುನಾವಣೆ ವೇಳೆ ಸಂಸದ ಪ್ರತಾಪ್ ಸಿಂಹ ಹಣ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ತನ್ವೀರ್ ಆರೋಪಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂಚೆ ಮತದಾನದ ವೇಳೆ ಮತದಾರರಿಗೆ ಆಮಿಷ ಒಡ್ಡಿದ್ದಾರೆ.ಸಿ.ಆರ್.ಗ್ರೌಂಡ್ ನಲ್ಲಿ ನಿನ್ನೆ ಬುಧವಾರ ಸರ್ಕಾರಿ ಅಂಚೆ ಮತದಾನ ನಡೆಯಿತು. ಇದೇ ವೇಳೆ ಪ್ರತಾಪ್ ಸಿಂಹ ಮತದಾರರಿಗೆ ಬಹಿರಂಗವಾಗಿ ಹಣ ಹಂಚಿಕೆ ಮಾಡಿದ್ದಾರೆ. ಈ ಕುರಿತು ನಾನು ಅವರ ವಿರುದ್ದ ದೂರು ನೀಡಲಿದ್ದೇವೆ ಎಂದರು.

 ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತದಾರರಿಗೆ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ ಹಂಚಿಕೆ ಮಾಡಿದ್ದಾರೆ. ಭಾವಚಿತ್ರವಿರುವ ಮತದಾರ ಗುರುತಿನ ಚೀಟಿಯಲ್ಲಿರುವ ವಿವರಗಳಲ್ಲಿ ಎಲ್ಲವೂ ಸರಿಯಿದೆ. ಆದರೆ ಮತಗಟ್ಟೆಯ ವಿಳಾಸ ತಪ್ಪಾಗಿ ಮುದ್ರಿಸಲಾಗಿದೆ. ಚುನಾವಣಾ ಆಯೋಗ ತಪ್ಪು ಮಾಡಿದೆ. ಇದು ಕಾಕತಾಳಿಯೋ, ಉದ್ದೇಶ ಪೂರ್ವವೋ ತಿಳಿಯದಾಗಿದೆ ಎಂದು ದೂರಿದರು.

Former Minister Tanveer Sait slams on MP Pratap simha

ನನ್ನ ಕ್ಷೇತ್ರದಲ್ಲಿನ ಮತಗಟ್ಟೆಯ ಮತದಾರರನ್ನು ಬೇರೆ ಮತಗಟ್ಟೆಗೆ ಹಾಕಿ ಮತದಾರರಿಗೆ ಆಯೋಗ ದಾರಿ ತಪ್ಪಿಸುತ್ತಿದೆ. ಇದರಿಂದ ಮತದಾನ ಕಡಿಮೆಯಾಗಲಿದೆ. ಈ ಕುರಿತು ಚುನಾವಣಾ ಆಯೋಗ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯ ಚುನಾವಣಾ ಆಯೋಗಕ್ಕೆ ದೂರವಾಣಿ ಕರೆ ಮಾಡಿ ಮೌಖಿಕ ದೂರು ನೀಡಿದ್ದೇನೆ. ಅದನ್ನು ಗಮನಹರಿಸಿ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

English summary
Lok Sabha Elections 2019:Postal voting was held in Mysuru yesterday.On this reason Former Minister Tanvir sait alleged that MP Pratap Simha allocated funds during the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X