• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಸಚಿವ ಕೆ.ಪುಟ್ಟಸ್ವಾಮಿ ಅವರ ಪತ್ನಿ ಜಯಲಕ್ಷ್ಮಮ್ಮ ನಿಧನ

|

ಮೈಸೂರು, ಏಪ್ರಿಲ್ 10: ಮಾಜಿ ಸಚಿವ ಕೆ.ಪುಟ್ಟಸ್ವಾಮಿ ಅವರ ಪತ್ನಿ ಹಾಗೂ ಮೈಸೂರಿನ ಮೊದಲ ಮೇಯರ್ ಹಾಗೂ ವಿದ್ಯಾವರ್ಧಕ ಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್ ಅವರ ತಾಯಿ ಜಯಲಕ್ಷ್ಮಮ್ಮ (96) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಜಯಲಕ್ಷ್ಮಮ್ಮ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಮೈಸೂರು ನಗರದ ಗೋಕುಲಂ ರುದ್ರಭೂಮಿಯಲ್ಲಿ ನೆರವೇರಿತು.

1952 ರಿಂದ 1978 ರವರೆಗೆ ಸತತ 5 ಬಾರಿ ಮೈಸೂರು ಶಾಸಕರಾಗಿದ್ದ ಕೆ.ಪುಟ್ಟಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ಬಿ.ಡಿ ಜತ್ತಿ, ವೀರೇಂದ್ರ ಪಾಟೀಲ್ ಸಂಪುಟದಲ್ಲಿ ಸಚಿವರಾಗಿದ್ದರು.

ಮೈಸೂರಿನ ಪ್ರಖ್ಯಾತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ವಿದ್ಯಾವರ್ಧಕ 1949ರಲ್ಲಿ ಸ್ಥಾಪಿಸಿದ್ದ ಕೆ.ಪುಟ್ಟಸ್ವಾಮಿ ಅವರ ಪತ್ನಿ ಶ್ರೀಮತಿ ಜಯಲಕ್ಷ್ಮಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಟುಂಬಸ್ಥರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

English summary
Jayalakshmamma (96), wife of former minister K Puttuswamy passed away on Friday (April 9) morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X