ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ವಿರುದ್ಧ ಕ್ರಮಕ್ಕೆ ಒತ್ತಾಯ

By Yashaswini
|
Google Oneindia Kannada News

ಮೈಸೂರು, ಮಾರ್ಚ್ 19 : ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ಸುಳ್ಳು ಜಾತಿಪ್ರಮಾಣ ಪತ್ರ ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ತಕ್ಷಣ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಮಾಜಿ ಉಪಾಧ್ಯಕ್ಷ ಎಸ್. ಎಚ್ ಸುಭಾಷ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಜು ರವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದು ಅಷ್ಟೇ ಅಲ್ಲದೆ ಅದು ರದ್ದಾಗಿದ್ದು ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು. ಗಂಗಾಮತಸ್ಥರ ಸಿದ್ದರಾಜು ಅವರು ನಾಯಕ ಪರಿಹಾರವೆಂದು ಸುಳ್ಳು ಪ್ರಮಾಣ ಪತ್ರ ಪಡೆಯಲು ತಂದೆಯ ಹೆಸರನ್ನು ಬದಲಾಯಿಸಿದ್ದರು. ಶಾಲೆಗೆ ಸೇರುವಾಗ ಒಕ್ಕಲಿಗ ದಾಸ ಎಂದು, ಹಾಗೆಯೇ ಒಕ್ಕಲಿಗ ನಾಯಕ ಎಂದು ಮತ್ತೊಮ್ಮದೆ ಬದಲಾಯಿಸಿ ಮೂರು ಬಾರಿ ಬೇರೆ ಬೇರೆ ಜಾತಿಯ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಅವರ ತಂದೆಯ ಹೆಸರನ್ನು ಬದಲಾಯಿಸಿದ್ದಾರೆ ಎಂದು ದೂರಿದರು.

ಅಸೆಂಬ್ಲಿ ಟಿಕೆಟ್ ಬಯಸಿರುವ ಸಂಸದರು, ಎಂಎಲ್ಸಿಗಳ ಪಾಡೇನು?ಅಸೆಂಬ್ಲಿ ಟಿಕೆಟ್ ಬಯಸಿರುವ ಸಂಸದರು, ಎಂಎಲ್ಸಿಗಳ ಪಾಡೇನು?

ಪರಿವಾರ ಜನಾಂಗ ಎಸ್ಟಿ ವರ್ಗಕ್ಕೆ ಸೇರಿದೆ ಎಂದು ಕ್ಷೇತ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ತಹಸೀಲ್ದಾರರ ಮೇಲೆಯೂ ಸಿದ್ದರಾಜು ಒತ್ತಡ ತರುತ್ತಿದ್ದಾರೆ. ಅಲ್ಲದೆ ಸುಳ್ಳು ಜಾತಿ ಪ್ರಮಾಣ ಪತ್ರ ವಿವಾದದಲ್ಲಿ ಸಿಲುಕಿರುವ ಸಿದ್ದರಾಜು ಅವರಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.

Former member of council Siddaraju had given fake caste certificate: S H Subhash

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕ ಸ್ಟೇಟ್ ರಿಸರ್ವೇಷನ್ ಅಂಡ್ ಅದರ್ ಒಬಿಸಿ ಅಪಾಯಿಂಟ್ಮೆಂಟ್ act ರೂಲ್ಸ್ , ಬಿ ಪ್ರಕಾರ ಐಪಿಸಿ ಕಾಲಂ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯಗಳ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಹಾಗೂ ಸಂಘಟಿತ ಅಪರಾಧ ಕಾಯ್ದೆ ಅಡಿಯಲ್ಲಿ ಸಿದ್ದರಾಜು ಅವರ ವಿರುದ್ಧ ದೂರು ದಾಖಲಿಸಬೇಕು. ಇದರಿಂದಾಗಿ ಪರಿಶಿಷ್ಟ ಪಂಗಡದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಜಾರಿ ನಿರ್ದೇಶನಾಲಯಕ್ಕೆ ಒತ್ತಾಯಿಸಿದ್ದೇವೆ ಎಂದರು.

Former member of council Siddaraju had given fake caste certificate: S H Subhash

ರಾಜನಹಳ್ಳಿ ಸ್ವಾಮೀಜಿಯವರು ಗಂಗಾಮತಸ್ಥರನ್ನು ದೆಹಲಿಗೆ ಕರೆದೊಯ್ದು ಇವರು ಸಹ ನಾಯಕ ಸಮುದಾಯದ ಉಪಪಂಗಡ ವಾಗಿದ್ದು ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ನಮಗೆ ತೀವ್ರ ಅಸಮಾಧಾನವಿದೆ. ಶ್ರೀಗಳಿಗೆ ಆ ಸಮಾಜದ ಬಗ್ಗೆ ಒಲವು ಹೆಚ್ಚಾಗಿದ್ದರೆ ಕೂಡಲೇ ವಾಲ್ಮೀಕಿ ಪೀಠ ತ್ಯಾಗ ಮಾಡಬೇಕೆಂದು ಕಿಡಿಕಾರಿದರು.

English summary
"Former member of council Siddaraju had given fake caste certificate, and misused his power. He should face legal action against him" KPCC former vice president S H Subhash told in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X