ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂತನ ಬಿಜೆಪಿ ಮಂತ್ರಿಗಳಿಗೆ ಸಿದ್ದು ಗುದ್ದು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 06: ಬಿಜೆಪಿ ಪಕ್ಷದಿಂದ ಗೆದ್ದು ಇಂದು ಮಂತ್ರಿಯಾಗಿರುವವರು ಅನರ್ಹರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಕ್ಷದ್ರೋಹಿಗಳು ಮಂತ್ರಿಯಾಗಿದ್ದು ನನಗೆ ಖುಷಿ ಇಲ್ಲ. ಅವರು ಗೆದ್ದಿರಬಹುದು ಆದರೆ ಅವರು ಕಾನೂನಿನ ಪ್ರಕಾರ ಅನರ್ಹರೇ ಎಂದು ಟೀಕಿಸಿದರು.

ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!

ನೂತನ‌ ಮಂತ್ರಿಗಳನ್ನು ಮತ್ತೆ ಅನರ್ಹರು ಎಂದ ಮಾಜಿ ಸಿಎಂ ಸಿದ್ದರಾಮಯ್ಯ, ಇನ್ನು ಸಂಪುಟ ಪೂರ್ತಿಯಾಗಿಲ್ಲ. ಇನ್ನು 6 ಖಾತೆ ಬಾಕಿ ಇದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ಸೇರುವವರ ಪಟ್ಟಿಗೆ ಹೈಕಮಾಂಡ್ ಪೂರ್ಣ ಅನುಮತಿ ನೀಡಿಲ್ಲ ಎಂದರು.

Former CM Siddaramaiah Spoke Against On BJP New Ministers In HD Kote

ಸಿಎಂ ಯಡಿಯೂರಪ್ಪರನ್ನು ನೋಡಿದರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ. ಅವರು ಹೈಕಮಾಂಡ್ ಭೇಟಿ ಮಾಡಿ, ತಮಗೆ ಬೇಕಾದವರನ್ನು ಮಂತ್ರಿ ಮಾಡುವ ಸ್ವಾತಂತ್ರ್ಯವೂ ಅವರಿಗಿಲ್ಲ ಎಂದು ಮರುಕ ವ್ಯಕ್ತಪಡಿಸಿದರು.

ಮಂಗಳೂರಲ್ಲಿ ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲುಮಂಗಳೂರಲ್ಲಿ ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲು

ಹೊಸ ಸಚಿವರು ಪಕ್ಷ ದ್ರೋಹಿಗಳು‌, ಅವರು ಮಂತ್ರಿಯಾಗಿದ್ದು ಖುಷಿ ಇಲ್ಲ ಆದರೂ ಅವರಿಗೆ ಶುಭಕೋರುತ್ತೇನೆ. ಒಳ್ಳೆಯ ಕೆಲಸ ಮಾಡಲಿ ಎದು ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

English summary
Former chief minister Siddaramaiah has said that whoever wins the BJP and becomes a minister today they are Disqualifiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X