ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಬೆಂಕಿ ನಂದಿಸುತ್ತಿರುವ ಸಿಬ್ಬಂದಿಗಳಿಗೆ ನೀರು, ಹಣ್ಣು ಕೊಡಿ: ಅರಣ್ಯ ಇಲಾಖೆ ಮನವಿ

|
Google Oneindia Kannada News

ಮೈಸೂರು, ಫೆಬ್ರವರಿ 26 : ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯ ಕಾಡ್ಗಿಚ್ಚಿನಿಂದ ನಲುಗಿ ಹೋಗಿದ್ದು, ಅಪಾರ ಪ್ರಮಾಣದ ವನ್ಯಸಂಪತ್ತು ಅಗ್ನಿಗಾಹುತಿಯಾಗಿದೆ. ನೂರಾರು ಅರಣ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೀಗೆ ಅರಣ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಕುಡಿಯಲು ನೀರು, ಹಣ್ಣು ನೀಡುವಂತೆ ಅರಣ್ಯ ಇಲಾಖೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದೆ.
ಈಗಾಗಲೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿರುವವರಿಗೆ ಸಕಾಲಕ್ಕೆ ಕುಡಿಯುವ ನೀರು, ಆಹಾರ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.

ಬಂಡೀಪುರದ ಬೆಂಕಿ ನಂದಿಸಲು ಬಂತು 2 ಸೇನಾ ಹೆಲಿಕಾಪ್ಟರ್ಬಂಡೀಪುರದ ಬೆಂಕಿ ನಂದಿಸಲು ಬಂತು 2 ಸೇನಾ ಹೆಲಿಕಾಪ್ಟರ್

ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಮರೋಪಾದಿ ಕಾರ್ಯಾಚರಣೆಗಿಳಿದಿದೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ನೂರಾರು ಸ್ವಯಂಸೇವಕರು ಸಮರೋಪಾದಿಯಲ್ಲಿ ಪಾಲ್ಗೊಂಡಿದ್ದಾರೆ.

Forest department requested to people in social media

ಕುಡಿಯುವ ನೀರಿನ ಬಾಟೆಲ್, 5 ಲೀಟರ್ ನೀರಿನ ಕ್ಯಾನ್, ಕಾರವಿಲ್ಲದೆ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳ ಪ್ಯಾಕೆಟ್ , ಕಲ್ಲಂಗಡಿ, ಬಾಳೆಹಣ್ಣು, ಕಿತ್ತಳೆ , ದ್ರಾಕ್ಷಿ, ಮೂಸಂಬಿ, ಸೇಬು , ಗ್ಲುಕೋಸ್ , ತಂಪು ಪಾನೀಯ, ಬಿಸ್ಕೆಟ್ , ಟಾರ್ಚ್, ಸುಟ್ಟ ಗಾಯಗಳಿಗೆ ಹಚ್ಚುವ ಬರ್ನಾಲ್ , ಮಾಸ್ಕ್ , ಗ್ಲೌಸ್ ಇತ್ಯಾದಿ ಪದಾರ್ಥಗಳನ್ನು ಅರಣ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ನೀಡಬಹುದಾಗಿದೆ.

 ಮುಂಜಾಗ್ರತೆ ವಹಿಸಿದ್ದರೆ ಬಂಡೀಪುರ ಬೆಂಕಿ ಅವಘಡ ತಡೆಯಬಹುದಿತ್ತು ಮುಂಜಾಗ್ರತೆ ವಹಿಸಿದ್ದರೆ ಬಂಡೀಪುರ ಬೆಂಕಿ ಅವಘಡ ತಡೆಯಬಹುದಿತ್ತು

ದಾನಿಗಳು ನೀಡುವ ವಸ್ತುಗಳನ್ನು ಸಂಗ್ರಹಿಸಲು ಈಗಾಗಲೇ ಮೈಸೂರು ಮೃಗಾಲಯದಲ್ಲಿ ಕೌಂಟರ್ ತೆರೆಯಲಾಗಿದೆ. ರೇಸ್ ಕೋರ್ಸ್ ಮುಂಭಾಗದ ಗೇಟ್ ಬಳಿ ಈಗಾಗಲೇ ಕೌಂಟರ್ ಕಾರ್ಯಾರಂಭಿಸಿದ್ದು, ದಾನಿಗಳು ಶಕ್ತ್ಯಾನುಸಾರ ವಸ್ತುಗಳನ್ನು ನೀಡಿ ರಸೀದಿ ಪಡೆಯಬಹುದು.

Forest department requested to people in social media

 ಚಾಮುಂಡಿಬೆಟ್ಟದಲ್ಲೂ ಕಾಣಿಸಿಕೊಂಡ ಬೆಂಕಿ, 30 ಎಕರೆ ಪ್ರದೇಶ ಬೆಂಕಿಗಾಹುತಿ ಚಾಮುಂಡಿಬೆಟ್ಟದಲ್ಲೂ ಕಾಣಿಸಿಕೊಂಡ ಬೆಂಕಿ, 30 ಎಕರೆ ಪ್ರದೇಶ ಬೆಂಕಿಗಾಹುತಿ

ಸುಮಾರು ಒಂದು ಟ್ರಕ್ ನಲ್ಲಿ ಕುಡಿಯುವ ನೀರು ಕಲ್ಲಂಗಡಿ ಹಾಗೂ ಬಾಳೆ ಹಣ್ಣು ಬಂಡೀಪುರಕ್ಕೆ ಮೃಗಾಲಯದ ವತಿಯಿಂದ ಈಗಾಗಲೇ ರವಾನಿಸಲಾಗಿದೆ.

English summary
Forest department requested to people in social media please help to volunteers who is fire quench in Bandipur.They asked basic needs like water bottle, fruits, first aid kits etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X