• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮ್ಮನಿಂದ ತಪ್ಪಿಸಿಕೊಂಡ ಆನೆಮರಿ ಆರೈಕೆ ಮಾಡಿದ ಅರಣ್ಯ ಇಲಾಖೆ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 06: ಆನೆಗಳ ಗುಂಪಿನಿಂದ ಅಕಸ್ಮಾತ್ ಆಗಿ ಬೇರ್ಪಟ್ಟಿರುವ ಪುಟ್ಟ ಆನೆ ಮರಿಯೊಂದು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಘಟನೆ ಬುಧವಾರ ನಡೆದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿಯಿರುವ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಆಹಾರ ಅರಸಿ ತಾಯಿ ಆನೆಯೊಂದಿಗೆ ಬಂದ ಮರಿಯೊಂದು ಗುಂಪಿನಿಂದ ಬೇರ್ಪಟ್ಟಿತ್ತು.

 ಹುಣಸೂರಿನಲ್ಲಿ ಜಮೀನಿಗೆ ಬಂದಿದ್ದ ಚಿರತೆ ಕಟ್ಟಿಹಾಕಿದ ರೈತರು ಹುಣಸೂರಿನಲ್ಲಿ ಜಮೀನಿಗೆ ಬಂದಿದ್ದ ಚಿರತೆ ಕಟ್ಟಿಹಾಕಿದ ರೈತರು

ಈ ಆನೆ ಮರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ ಮಾಡಿದ್ದಾರೆ. ನಿನ್ನೆ ಮೂರು ಆನೆಗಳು ತಮ್ಮ ಮರಿಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ವೀರನಹೊಸಹಳ್ಳಿಯ ಕಾಡಂಚಿನ ಗ್ರಾಮಗಳಿಗೆ ಆಹಾರ ಅರಸಿ ಬಂದಿದ್ದವು.

ಪುನಃ ವಾಪಸ್ ಕಾಡಿಗೆ ಹೋಗುವಾಗ ಕೇವಲ 15 ದಿನಗಳ ಗಂಡು ಆನೆ ಮರಿಯೊಂದು ಈ ಗುಂಪಿನಿಂದ ಬೇರ್ಪಟ್ಟಿತ್ತು,ಇದು ಭರತವಾಡಿ ಗ್ರಾಮದ ಬಳಿ ರಸ್ತೆಯಲ್ಲಿ ಒಂಟಿಯಾಗಿ ನಿಂತಿತ್ತು.

 ಕಬ್ಬಿನ ಗದ್ದೆಯಲ್ಲಿ ಕಂಡ ಚಿರತೆ ಮರಿ ಮುದ್ದಾಡಿದ ಗ್ರಾಮಸ್ಥರು ಕಬ್ಬಿನ ಗದ್ದೆಯಲ್ಲಿ ಕಂಡ ಚಿರತೆ ಮರಿ ಮುದ್ದಾಡಿದ ಗ್ರಾಮಸ್ಥರು

ಈ ಆನೆ ಮರಿಯನ್ನು ಕಂಡ ಭರತವಾಡಿ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಆನೆಮರಿಯನ್ನು ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯದ ಸಮೀಪಕ್ಕೆ ಬಿಟ್ಟು ತಾಯಿಯೊಂದಿಗೆ ಸೇರಿಕೊಳ್ಳಲಿದೆಯೇ ಎಂಬುದನ್ನು ನೋಡಲು ಕಾವಲು ಹಾಕಿದ್ದಾರೆ.

English summary
Three elephants, along with their cubs, came to search for food in the forested villages of Veeranhosahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X