ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ಕೋಟೆಯಲ್ಲಿ ಮೂವರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆ

|
Google Oneindia Kannada News

ಮೈಸೂರು, ಫೆಬ್ರವರಿ 1 : ಕಳೆದ ಕೆಲ ದಿನಗಳಿಂದ ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹಾಗೂ ಮೂವರನ್ನು ಬಲಿ ತೆಗೆದುಕೊಂಡಿದ್ದ ನರಹಂತಕ ಹುಲಿ ಕಡೆಗೂ ಸೆರೆಯಾಗಿದೆ.

ಎಚ್.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಮೂರನೇ ಬಲಿ : ಕಂಡಲ್ಲಿ ಗುಂಡಿಕ್ಕಲು ಆದೇಶಎಚ್.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಮೂರನೇ ಬಲಿ : ಕಂಡಲ್ಲಿ ಗುಂಡಿಕ್ಕಲು ಆದೇಶ

ನಿನ್ನೆಯಷ್ಟೇ ಕೆಂಚ ಎಂಬುವವರನ್ನು ಹುಲಿ ಬಲಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಹುಲಿಯನ್ನು ಪತ್ತೆ ಹಚ್ಚಿ ಶಾರ್ಪ್ ಶೂಟರ್ ಅರವಳಿಕೆ ಚುಚ್ಚುಮದ್ದು ನೀಡಿದ್ದರಿಂದ ಸೆರೆಯಾಗಿದೆ. ಒಂದು ತಿಂಗಳಲ್ಲಿ ಮೂವರನ್ನ ಕೊಂದಿದ್ದ ಹುಲಿಯನ್ನು ಇಂದು ಕಾರ್ಯಚರಣೆ ನಡೆಸಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಬೆಂಗಳೂರಿನಿಂದ ಬಂದಿದ್ದ ಶಾರ್ಪ್ ಶೂಟರ್ ಗಳ ಕಾರ್ಯಕ್ಕೆ ಶ್ಲಾಘನೆ ಸಹ ವ್ಯಕ್ತವಾಗಿದೆ.

ಎಚ್. ಡಿ ಕೋಟೆಯಲ್ಲಿ ಹುಲಿ ಹಿಡಿಯಲು ಬಂತು ಆನೆಗಳ ತಂಡಎಚ್. ಡಿ ಕೋಟೆಯಲ್ಲಿ ಹುಲಿ ಹಿಡಿಯಲು ಬಂತು ಆನೆಗಳ ತಂಡ

Forest department officials captured tiger in HD Kote talluk

ಇತ್ತ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದ ವಲಯದಲ್ಲಿ ಇಂದು ಸೆರೆಯಾದ ನರಭಕ್ಷಕ ಹುಲಿಯನ್ನು ತೋರಿಸಲೇಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆದರೆ ಕಾರ್ಯಚರಣೆ ವೇಳೆ ಗಾಯಗೊಂಡಿರುವ ಹುಲಿಯನ್ನು ರೆಸ್ಕ್ಯೂ ಸೆಂಟರ್ ಗೆ ಕರೆಯೊದ್ದು ಚಿಕಿತ್ಸೆ ಕೊಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

English summary
Forest department sharp shooters captured a tiger in DB kuppe at HD kote talluk . This Tiger killed 3 tribal people since 10 days gap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X