• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಅರಮನೆ ಆವರಣದಲ್ಲಿ ಡಿ. 22 ರಿಂದ ವೈಭವೋಪೇತ ಫಲಪುಷ್ಪ ಪ್ರದರ್ಶನ

|

ಮೈಸೂರು, ಡಿಸೆಂಬರ್ 20 : ಡಿಸೆಂಬರ್ 22 ರಿಂದ 31ರವರೆಗೆ ನಗರದ ಅರಮನೆ ಆವರಣದಲ್ಲಿ ವೈಭವೋಪೇತ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ.

ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಫಲಪುಷ್ಪಪ್ರದರ್ಶನ ಈ ವರ್ಷವೂ ಹಲವು ವಿಶೇಷಗಳನ್ನು ಹೊಂದಿರಲಿದೆ. ಇದಕ್ಕಾಗಿ ಬಗೆ ಬಗೆಯ ಹೂವುಗಳನ್ನು ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳಿಂದ ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲಾಲ್‌ಬಾಗ್‌ ತೋಟದಲ್ಲಿ ಹೂಗಳ ಬೆಡಗು ಬಿನ್ನಾಣ!

ಪ್ರಸ್ತುತ ಫಲಪುಷ್ಪ ಪ್ರದರ್ಶನದಲ್ಲಿ 20 ಸಾವಿರ ವಿಭಿನ್ನ ಅಲಂಕಾರಿಕ ಹೂವಿನ ಕುಂಡಗಳು, ಬೋನ್ಸಾಯ್ ಗಿಡಗಳು, ಅಂದಾಜು 4 ಲಕ್ಷ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲ ವರ್ ಗಳಿಂದ ಅಲಂಕರಿಸಲಾಗುತ್ತದೆ. ನಗರದ ಪ್ರಸಿದ್ಧ ಅರಮನೆಗಳಲ್ಲಿ ಒಂದಾದ ಲಲಿತ ಮಹಲ್ ಅರಮನೆಯನ್ನು ಹೋಲುವ ಮಾದರಿ ವಿನ್ಯಾಸವನ್ನು ವಿವಿಧ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗುತ್ತದೆ ಎಂದರು.

ಹಾಗೆಯೇ, ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ 100ನೇ ವರ್ಷದ ಜಯಂತೋತ್ಸವ ಅಂಗವಾಗಿ ಅವರ ಆಕೃತಿಯನ್ನು 17 ಅಡಿ ಎತ್ತರದ ಹೂವುಗಳಿಂದ ಅಲಂಕರಿಸಲಾಗುತ್ತದೆ. ದಸರಾ ಆಚರಣೆಗೆ ಬರುವ ಗಜಪಡೆ ಮಾದರಿಯನ್ನು 9 ಅಡಿ ಎತ್ತರದಲ್ಲಿ ಪಿಂಗ್ ಪಾಂಗ್ ಹೂವುಗಳಿಂದ, ನಾಡಿನ ಸಂಸ್ಕೃತಿ ಬಿಂಬಿಸುವ 2 ಜನರ ಜಟ್ಟಿ ಕಾಳಗ ಮತ್ತು ಒಬ್ಬರು ತೀರ್ಪುಗಾರರು ಇರುವ ಮಾದರಿ ಚಿತ್ರಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ ಎಂದರು.

ಪ್ರಾಣಿಗಳ ಅಲಂಕಾರ

ಪ್ರಾಣಿಗಳ ಅಲಂಕಾರ

ಈ ಬಾರಿ ಮಕ್ಕಳ ಆಕರ್ಷಣೆಗಾಗಿ ಕೀಲುಕುದುರೆ, ಸೈಕಲ್ ತುಳಿಯುತ್ತಿರುವ ಅಳಿಲು ಚಿತ್ರದ ಮಾದರಿ, ಮಿ.ಬೀನ್ ವ್ಯಕ್ತಿಯ ಮಾದರಿ, ಬಾಹುಬಲಿ ಭಾಗ-2 ಚಿತ್ರದ ಮಾದರಿಯ ಹಡಗನ್ನು ಹೂವುಗಳಿಂದ ಅಲಂಕರಿಸಲಾಗುವುದು. ವಿಂಟೇಜ್ ಕಾರನ್ನು, ಕುಳಿತ ಭಂಗಿಯಲ್ಲಿರುವ ಎರಡು ನವಿಲುಗಳನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡುವುದು, ಪ್ರಾಣಿ ಸಂಗ್ರಹಾಲಯವನ್ನು ಹೋಲುವ ರೀತಿ ನವಿಲು, ಆನಕೊಂಡ, ಹುಲಿ, ಜಿಂಕೆ, ಮರಿ ಆನೆ ,ಜೀಬ್ರಾ, ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳನ್ನು ಅಲಂಕರಿಸಲಾಗುತ್ತಿದೆ.

ತುಳಸಿ, ವೀಳ್ಯೆದೆಲೆ ವಿತರಣೆ

ತುಳಸಿ, ವೀಳ್ಯೆದೆಲೆ ವಿತರಣೆ

ಪುಷ್ಪಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರು, ಪ್ರವಾಸಿಗರಿಗೆ ಕೊನೆಯ ಭಾಗದಲ್ಲಿ ಔಷಧಿಯುಕ್ತ ಗಿಡಗಳಾದ ಅಲೋವೆರ, ತುಳಸಿ, ವೀಳ್ಯೆದೆಲೆ ವಿತರಿಸಲಾಗುವುದು. ಪ್ರದರ್ಶಿಸುವ ಮಾದರಿ ಚಿತ್ರಗಳನ್ನು ಪ್ರದರ್ಶನ ಮುಗಿಯುವವರೆಗೆ ತಾಜಾತನ ಕಾಪಾಡಲು ಒಂದು ಬಾರಿ ಹೂವು ಮತ್ತು ತರಕಾರಿ ಬದಲಾಯಿಸಲಾಗುತ್ತದೆ.

ನೋಡುಗರ ಕಣ್ಣಲ್ಲಿ ಯೋಧರಿಗೆ ಸಮರ್ಪಿತ ಲಾಲ್‌ಬಾಗ್‌ ಪುಷ್ಪಪ್ರದರ್ಶನ

ಜಿ.ಟಿ.ದೇವೇಗೌಡ ಉದ್ಘಾಟನೆ

ಜಿ.ಟಿ.ದೇವೇಗೌಡ ಉದ್ಘಾಟನೆ

ಫಲಪುಷ್ಪ ಪ್ರದರ್ಶನವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಶಾಸಕ ಎಸ್‌.ಎ.ರಾಮದಾಸ್ ಭಾಗವಹಿಸಲಿದ್ದಾರೆ. ಇವುಗಳ ಜತೆಗೆ ಡಿ. 31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ಮತ್ತು ಇಂಗ್ಲಿಂಷ್ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ.

ದಸರಾ ಛಾಯಾಚಿತ್ರ ಪ್ರದರ್ಶನ

ದಸರಾ ಛಾಯಾಚಿತ್ರ ಪ್ರದರ್ಶನ

ಅಂದು ರಾತ್ರಿ 12ರಿಂದ 12.15ರವರೆಗೆ ಬಹುವರ್ಣಗಳ ಬಾಣ - ಬಿರುಸು ಸಿಡಿಸಲಾಗುವುದು. ಇದೇ ಆವರಣದಲ್ಲಿ ದಸರಾ ಅಂದು - ಇಂದು ಛಾಯಾಚಿತ್ರ ಹಾಗೂ ವೀಡೀಯೊ ಪ್ರದರ್ಶನ ಇರಲಿದೆ. ನವರಾತ್ರಿಯಲ್ಲಿ ಕೂರಿಸುವ ಬೊಂಬೆಗಳನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದು ವಿವರಿಸಿದರು

English summary
Fourth Annual Flower Show organised by the Mysore Palace Board near Varahaswamy Temple inside the Palace will be held from Dec. 22 to Dec. 31. Palace Board will display 20,000 ornamental flower pots, varieties of bonsai plants, exhibit replicas decorated with four lakh ornamental and Ooty cut flowers at the flower show this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X