ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ನಡುವೆಯೂ ಮೈಸೂರಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಜೋರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 29: ಕೋವಿಡ್ 19 ಸೋಂಕಿನ ಭೀತಿಯ ನಡುವೆಯೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಜೆ.ಕೆ.ಮೈದಾನದಲ್ಲಿ ಹೂವಿನ ಖರೀದಿ ಪ್ರಾರಂಭವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆಯೂ ಏರಿಕೆಯಾಗಿದೆ. ಆದರೂ ಸಾರ್ವಜನಿಕರು ಹಬ್ಬದ ಆಚರಣೆಗೆ ಹೂಗಳನ್ನು ಖರೀದಿಸುತ್ತಿದ್ದಾರೆ.

ಇಂದಿನಿಂದ ಜೆ.ಕೆ.ಮೈದಾನದಲ್ಲಿ ಹೂವಿನ ವ್ಯಾಪಾರ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಬಂದಿರಲಿಲ್ಲ. ಆದರೆ ಸಂಜೆ ವೇಳೆಗೆ ವ್ಯಾಪಾರ ಜೋರಾಗುವ ಸಾಧ್ಯತೆ ಹೆಚ್ಚಿದೆ.

Flower Market Starts At JK Ground In Mysuru for Varamahalakshmi festival

 ಮೈಸೂರು ದೇವರಾಜ ಮಾರುಕಟ್ಟೆ ಹೂವಿನ ಅಂಗಡಿಗಳು ಬಂದ್ ಮೈಸೂರು ದೇವರಾಜ ಮಾರುಕಟ್ಟೆ ಹೂವಿನ ಅಂಗಡಿಗಳು ಬಂದ್

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಹೆಚ್ಚಿನ ಸಾರ್ವಜನಿಕರು ಹೂ ವ್ಯಾಪಾರಕ್ಕಾಗಿ ದೇವರಾಜ ಮಾರುಕಟ್ಟೆಗೆ ಹೋಗುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗುವ ಸಂಭವವಿದ್ದು, ಕೋವಿಡ್ 19 ಸೋಂಕು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಇಂದಿನಿಂದ ಜು.31 ರವರೆಗೆ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶಿಸಿ ನಗರಪಾಲಿಕೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದರು.

Flower Market Starts At JK Ground In Mysuru for Varamahalakshmi festival

ನಗರಪಾಲಿಕೆ, ಬದಲಿ ವ್ಯವಸ್ಥೆಯಾಗಿ ಜೆಕೆ ಮೈದಾನದಲ್ಲಿ ಹೂ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಅದರಂತೆ ಇಂದಿನಿಂದ ಜೆ.ಕೆ.ಮೈದಾನದಲ್ಲಿ ಹೂವಿನ ವ್ಯಾಪಾರ ಪ್ರಾರಂಭವಾಗಿದೆ.

English summary
In between coronavirus fear, flower market has begun at the JK ground in mysuru for Varamahalakshmi festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X