ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರ್‌ ಘರ್ ತಿರಂಗಾ: 118 ರೈಲು ನಿಲ್ದಾಣಗಳಲ್ಲಿ ರಾಷ್ಟ್ರಧ್ವಜ ಹಾರಾಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 14: ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಮೈಸೂರು ವಿಭಾಗದ ಸಿಬ್ಬಂದಿ ತಮ್ಮ ಮನೆಗಳಲ್ಲಿ ಹಾಗೂ ಮೈಸೂರು ವಿಭಾಗದಾದ್ಯಂತ ಇರುವ ಎಲ್ಲಾ 118 ರೈಲು ನಿಲ್ದಾಣಗಳಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಾರೆ.

ಮೈಸೂರು ವಿಭಾಗದ ಸಿಬ್ಬಂದಿ ಶಾಖೆಯಿಂದ, ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೈಲ್ವೆ ನೌಕರರಿಗೆ ಸುಮಾರು 6500 ತ್ರಿವರ್ಣ ಧ್ವಜ ವಿತರಿಸಲಾಯಿತು. ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರೈಲ್ವೆ ನಿಲ್ದಾಣಗಳಲ್ಲಿ ಘೋಷಣೆಗಳನ್ನು ಕೂಗಲಾಯಿತು. ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ವಿವಿಧ ರೈಲು ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಯಾವುದೇ ವಾಹನದ ಮೇಲೆ ಭಾರತದ ಧ್ವಜ ಹೊದಿಸಿದರೆ ಜೈಲು ಶಿಕ್ಷೆಯಾವುದೇ ವಾಹನದ ಮೇಲೆ ಭಾರತದ ಧ್ವಜ ಹೊದಿಸಿದರೆ ಜೈಲು ಶಿಕ್ಷೆ

ಮೈಸೂರು ವಿಭಾಗದ 10 ಪ್ರಮುಖ ರೈಲು ನಿಲ್ದಾಣಗಳಾದ ಮೈಸೂರು, ಹಾಸನ, ಸುಬ್ರಹ್ಮಣ್ಯ ರೋಡ್, ಅರಸೀಕೆರೆ, ಶಿವಮೊಗ್ಗ ಟೌನ್, ದಾವಣಗೆರೆ, ಹರಿಹರ, ಚಿತ್ರದುರ್ಗ ಮತ್ತು ಮೈಸೂರಿನ ವಿಭಾಗೀಯ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತಾದ ಸೆಲ್ಫಿ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. ರೈಲ್ವೆ ಎಂಜಿನ್‌ ಮತ್ತು ಬೋಗಿಗಳ ಮೇಲೆ ಭಿತ್ತಿಪತ್ರಗಳನ್ನು ಕೂಡ ಅಂಟಿಸಲಾಗಿದೆ.

 Flag Hosted at 118 Railway Stations of Mysuru Division

ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ನೆನೆಯಲು ಮತ್ತು ದೇಶದ ಬಾವುಟವನ್ನು ಮನೆಮನೆಗಳಲ್ಲಿ ಹಾರಿಸುವಂತೆ ಉತ್ತೇಜಿಸಲು ಕೇಂದ್ರ ಸರಕಾರ ಈ ಅಭಿಯಾನವನ್ನು ಪ್ರಾರಂಭಿಸಿದೆ. ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವುದು ಮತ್ತು ನಮ್ಮ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

20 ಸಾವಿರಕ್ಕೂ ಅಧಿಕರ ಶಿಕ್ಷಕರಿಂದ ಅಭಿಯಾನಕ್ಕೆ ಸಾಥ್; ಹರ್‌ಘರ್‌ ತಿರಂಗ ಅಭಿಯಾನಕ್ಕೆ ಮೈಸೂರಿನ ಶಿಕ್ಷಕರು, ವಿದ್ಯಾರ್ಥಿಗಳು ಕೂಡ ಹರ್‌ ಘರ್ ತಿರಂಗ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

 Flag Hosted at 118 Railway Stations of Mysuru Division

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಅಭಿಯಾನದಲ್ಲಿ ಮೈಸೂರಿನ 20 ಸಾವಿರಕ್ಕೂ ಹೆಚ್ಚು ಶಿಕ್ಷಕರು, 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ.

English summary
Mysuru Division of South Western Railway hosted the national flag in all 118 railway stations across the division on the vocation of the Har Ghar tiranga campaign,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X