ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿಯಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದ್ದು ಹೀಗೆ...

|
Google Oneindia Kannada News

ಮೈಸೂರು, ಏಪ್ರಿಲ್ 11: ನಮ್ಮ ದೇಶದಲ್ಲೇ ಮೊದಲ ಬಾರಿಗೆ ಮತದಾನ ವ್ಯವಸ್ಥೆ ಜಾರಿಗೆ ತಂದಿದ್ದು ಸಾರ್ವತ್ರಿಕ ಚುನಾವಣೆ 1951ರಲ್ಲಿ ಎಂಬುದು ಮಾತು. ಆದರೆ ಅದಕ್ಕೂ ಮೊದಲು ಆರು ದಶಕಗಳ ಹಿಂದೆ ಮೈಸೂರಿನಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು.

ಲೋಕಸಭೆ ಚುನಾವಣೆ LIVE:ನಾಗ್ಪುರದಲ್ಲಿ ಮತ ಚಲಾಯಿಸಿದ ನಿತಿನ್ ಗಡ್ಕರಿಲೋಕಸಭೆ ಚುನಾವಣೆ LIVE:ನಾಗ್ಪುರದಲ್ಲಿ ಮತ ಚಲಾಯಿಸಿದ ನಿತಿನ್ ಗಡ್ಕರಿ

ಅಂದು ನಡೆದ ಮತದಾನದಲ್ಲಿ ಮತದಾರರ ವಿವರ ಮಾತ್ರ ಗೌಪ್ಯವಾಗಿತ್ತು. ಮೈಸೂರಿನ ಪುರಸಭೆಗೆ ಮೊದಲ ಬಾರಿಗೆ 1892ರಲ್ಲಿ ಮತದಾನ ನಡೆಯಿತು. ಆಗ ಅಲ್ಲಿ ಇದ್ದಿದ್ದು 250 ಜನರು ಮಾತ್ರ. ಮೈಸೂರಿನ ಮಹಾರಾಜರು, ಮಹಾರಾಜ ಕಾಲೇಜಿನ ಮುಖ್ಯಸ್ಥರು, ಮರಿಮಲ್ಲಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಅಧಿಕಾರಿಗಳು, ಬ್ರಿಟಿಷರು ನೇಮಿಸಿದ್ದ ಜಿಲ್ಲಾಧಿಕಾರಿ ಹಾಗೂ ಕೆಲ ಗಣ್ಯರಷ್ಟೇ ಮತದಾನದ ಹಕ್ಕನ್ನು ಹೊಂದಿದ್ದರು.

 ಮೈಸೂರಿನಲ್ಲಿ ಈ ಬಾರಿ 25.09 ಲಕ್ಷ ಮಂದಿಗೆ ಮತದಾನದ ಹಕ್ಕು ಮೈಸೂರಿನಲ್ಲಿ ಈ ಬಾರಿ 25.09 ಲಕ್ಷ ಮಂದಿಗೆ ಮತದಾನದ ಹಕ್ಕು

ಮೈಸೂರಿನ ರಾಜ್ಯ ಪತ್ರಗಳು ಹಾಗೂ ಕರ್ನಾಟಕ ಗೆಜಿಟೇರಿಯನ್ ಗಳಲ್ಲಿ ಇಂತಹ ಆಶ್ಚರ್ಯಕರ ಮಾಹಿತಿ ಲಭ್ಯವಿದೆ. ಮೂಲಸೌಕರ್ಯ ಹಾಗೂ ನಾಗರಿಕ ಸೇವೆ ಕಲ್ಪಿಸಲು ಎಲ್ಲಾ ಸಂಸ್ಥಾನಗಳು ಪೌರ ಸಭೆಗಳನ್ನು ಸ್ಥಾಪಿಸಬೇಕೆಂದು ಬ್ರಿಟಿಷ್ ಆಡಳಿತ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿಯೇ ಮೈಸೂರಿನಲ್ಲಿ 1862ರ ಜುಲೈ 8ರಂದು ಪೌರಸಭೆ ಜಾರಿಗೆ ಬಂದಿತ್ತು.

First time polling system started Mysuru Kingdom at 1892

ಅದಾಗಿ 20 ವರ್ಷಗಳ ಬಳಿಕ ಆಡಳಿತ ನಡೆಸುತ್ತಿದ್ದ ಮಹಾರಾಜ ಚಾಮರಾಜ ಒಡೆಯರ್ ಗೆ ಹೊಸ ಆಲೋಚನೆ ಬಂತು. ಅವರು ಪೌರಸಭೆಗೆ ತಾವೇ ನೇಮಕ ಮಾಡುವ ಬದಲು ಗಣ್ಯರ ಮೂಲಕ ಆಯ್ಕೆ ಮಾಡಿಸಿದರೆ ಹೇಗೆ ಎಂದು ಚಿಂತಿಸಿದರು ಅದೇ ಮತದಾನದ ಪದ್ಧತಿ ಆರಂಭವಾದ ಸಮಯ.

 ಮೈಸೂರಿನಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ'ಗೆ ಭರ್ಜರಿ ರೆಸ್ಪಾನ್ಸ್ ಮೈಸೂರಿನಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ'ಗೆ ಭರ್ಜರಿ ರೆಸ್ಪಾನ್ಸ್

ಆಡಳಿತದ ಅನುಕೂಲಕ್ಕಾಗಿ ಮೈಸೂರು ನಗರವನ್ನು ದೇವರಾಜ, ಕೃಷ್ಣರಾಜ , ಚಾಮರಾಜ , ಲಷ್ಕರ್ , ಮಂಡಿ, ಪೋರ್ಟ್ ಮತ್ತು ನಜರಾಬಾದ್ ಎಂದು ಏಳು ವಿಭಾಗಗಳಾಗಿ ವಿಂಗಡಿಸಿ ಅದೇ ಸೆಪ್ಟೆಂಬರ್ ನಲ್ಲಿ ಮೊದಲಿಗೆ ಚುನಾವಣೆ ನಡೆಸಿದರು. ಹೀಗೊಂದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ರೂಪುಗೊಂಡಿತು ಎಂಬುದು ಇತಿಹಾಸ.

English summary
Lok Sabha Elections 2019:First time polling system started Mysuru kingdom at 1892.There was a voting process six decades ago by King Chamraja wadiyer. The voter's details were only confidential in that day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X