• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಜನಮನ ಸೆಳೆಯುತ್ತಿದೆ ರೈಲ್ವೆ ವಸ್ತು ಸಂಗ್ರಹಾಲಯದ ಕೆಫೆಟೇರಿಯ

|

ಮೈಸೂರು, ಜೂನ್ 23: ಮೈಸೂರಿನ ರೈಲ್ವೆ ವಸ್ತು ಸಂಗ್ರಹಾಲಯವು ನವೀಕರಣಗೊಂಡು ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರದರ್ಶಿತ ವಸ್ತುಗಳು ಮತ್ತು ವಿನ್ಯಾಸಗಳಲ್ಲಿ ಮಾತ್ರವಲ್ಲದೆ ಅದರ ಸಂಗ್ರಹ ಮತ್ತು ಮರು ಕಲ್ಪಿತ ಭೂದೃಶ್ಯದ ವಿಷಯಗಳಲ್ಲೂ ಗುಣಾತ್ಮಕ ಮಾನದಂಡವನ್ನು ಹೆಚ್ಚಿನ ಸ್ತರದಲ್ಲಿ ನಿಗದಿಪಡಿಸುವ ಗುರಿಯತ್ತ ಸಾಗುತ್ತಿದೆ.

   ಗ್ರಹಣದ ದಿನ ಕಾವೇರಿ ನದಿಯಲ್ಲಿ ಮಿಂದು ತಂದೆಯನ್ನು ಸ್ಮರಿಸಿದ ಡಿಕೆಶಿ | DK ShivaKumar | Oneindia Kannada

   ಇತ್ತೀಚಿನ ದಿನಗಳಲ್ಲಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಸ್ಥಿರತೆಯಿದ್ದು, ಭಾರತೀಯ ರೈಲ್ವೆಯ ವಿಕಾಸದ ಕಥೆಯನ್ನು ಜೀವಂತವಾಗಿ ಹೊರತಂದಿರುವ ರೀತಿಗೆ ಹಲವು ಸಂದರ್ಶಕರು ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿ ಸೃಷ್ಟಿಸಿರುವ ಮನಸೆಳೆಯುವ ಅದ್ಭುತ ವಾತಾವರಣಕ್ಕೆ ಪಾರಂಪರಿಕ ಬೋಗಿ ಮತ್ತು ರೈಲುಗಾಡಿಗಳಿಗೆ ಸಮಕಾಲೀನ ಕಲೆ, ಬಹುಮಾಧ್ಯಮ, ವಿಡಿಯೋ ಮತ್ತು ಧ್ವನಿಯನ್ನು ಅಳವಡಿಸಿರುವುದು ಅದರ ಅಂದವನ್ನು ಹೆಚ್ಚಿಸಿದೆ.

   ಆಟ ನಿಲ್ಲಿಸಿದ ಮೈಸೂರಿನ ಹಳೆಯ ಶಾಂತಲಾ ಚಿತ್ರಮಂದಿರ

   ಪರಿಷ್ಕರಿಸಿದ ರೈಲ್ವೆ ಸಂಗ್ರಹಾಲಯದ ಹಲವು ಹೊಸ ವೈಶಿಷ್ಟ್ಯಗಳಲ್ಲಿ ಕೋಚ್ ರೆಸ್ಟೋರೆಂಟ್ ಸಹ ಒಂದಾಗಿದೆ. ಹಿಂದಿನ ಯುಗದ ಉಗಿ ಲೋಕೋಮೋಟಿವ್ ಗಳು, ಪುರಾತನ ಹೆಂಚಿನ ಹೊದಿಕೆಯ ಶೈಲಿಯಲ್ಲಿ, ಅಪ್ರತಿಮವಾದ, ದಾರಿಪಕ್ಕದ ರೈಲ್ವೆ ನಿಲ್ದಾಣದ ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ಗಳ ಭಾವನೆಯೊಂದಿಗೆ, ಹಸಿರು ಸುರಂಗಮಾರ್ಗ ಮತ್ತು ಸೊಂಪಾದ ಹಸಿರಿನ ಹಿನ್ನೆಲೆಯಲ್ಲಿ ಸುಂದರವಾದ ಆಂಫಿ ಥಿಯೇಟರ್ ನಂತಹ ಹಲವಾರು ಹೊರಾಂಗಣ ಪ್ರದರ್ಶನಗಳ ಅದ್ಭುತ ನೋಟವನ್ನು ಪ್ರವಾಸಿಗರು ಆನಂದಿಸಲಿದ್ದಾರೆ.

   ಮೈ ಮರೆಸುವ ನೋಟವುಳ್ಳ ಒಳಾಂಗಣವನ್ನು ಹೊಂದಿದ್ದು, ಹೇಳಿ ಮಾಡಿಸಿದಂತಿರುವ ಕೋಚ್ ರೆಸ್ಟೋರೆಂಟ್ ಒಂದು ಬಾರಿಗೆ ಮೂರರಿಂದ ನಾಲ್ಕು ಕುಟುಂಬಗಳಿಗೆ ಆತಿಥ್ಯ ನೀಡುವಷ್ಟು ವಿಶಾಲವಾಗಿದೆ. ಶುಚಿಯಾಗಿ, ಆರೋಗ್ಯಕರವಾಗಿ ತಯಾರಿಸಿದ ತಿಂಡಿಗಳು/ ಲಘು ಉಪಹಾರಗಳು ಮತ್ತು ಇಲ್ಲಿ ನೀಡಲಾಗುವ ಕಾಫಿ ಮತ್ತು ಚಹಾದಂತಹ ಪಾನೀಯಗಳನ್ನು ಆನಂದಿಸಲು ಪ್ರವಾಸಿಗರಿಗೆ ಇದೊಂದು ಹೊರ ಪ್ರಪಂಚದ ಅನುಭವ ನೀಡುತ್ತದೆ.

   ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮತ್ತು ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ (ಎಸ್‌.ಡಬ್ಲ್ಯು.ಆರ್‌.ಡಬ್ಲ್ಯು.ಡಬ್ಲ್ಯು.ಒ)ಯ ಅಧ್ಯಕ್ಷರಾದ ಅಪರ್ಣ ಗರ್ಗ್ ಅವರು ಸೋಮವಾರವಷ್ಟೆ ಕೋಚ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದರು. ಈ ಕೋಚ್ ರೆಸ್ಟೋರೆಂಟ್ ಎಸ್‌.ಡಬ್ಲ್ಯು.ಆರ್‌.ಡಬ್ಲ್ಯು.ಡಬ್ಲ್ಯು.ಒ ನ ಪದಾಧಿಕಾರಿಗಳ ಆಶ್ರಯದಲ್ಲಿ 'ಲಾಭರಹಿತ, ನಷ್ಟವಿಲ್ಲದ' ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

   English summary
   The Mysuru Railway Museum has been renovated and it is attracting a large number of people.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more