ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಗೆ ಬೆಂಕಿ:ತಪ್ಪಿದ ಅನಾಹುತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 19: ಮತದಾನ ಮುಗಿದ ಬಳಿಕ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಸಾಗಿಸುತ್ತಿದ್ದ ಮೈಸೂರಿನ ಬಸ್‌ವೊಂದರಲ್ಲಿ ಗುರುವಾರ ತಡರಾತ್ರಿ (ಏಪ್ರಿಲ್ 18) ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಆದರೆ ಚಾಲಕನ ಸಮಯ ಪ್ರಜ್ಞೆ ಮೆರೆಯಿಂದ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ಕೇಬಲ್ ವೈರ್ ಕತ್ತರಿಸಿ ಬೆಂಕಿ ಹರಡುವುದನ್ನು ತಡೆಗಟ್ಟಿದ್ದಾರೆ. ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಬಸ್‌ನಲ್ಲಿ ತರುತ್ತಿದ್ದ ವೇಳೆ ಗೌರಿಶಂಕರ ನಗರದ ಗವಿಮಠ ರಸ್ತೆಯಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡಿವೆ.

 ಕರ್ತವ್ಯದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ:ಅಸಲಿ ಕಾರಣವೇನು? ಕರ್ತವ್ಯದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ:ಅಸಲಿ ಕಾರಣವೇನು?

ಬಸ್ ನಲ್ಲಿ ಗೌರಿಶಂಕರ ನಗರ ಸರ್ಕಾರಿ ಶಾಲೆಯ ಮತಯಂತ್ರಗಳನ್ನು KA 09 F -3650 ನೋಂದಣಿಯ ನಗರ ಸಾರಿಗೆ ಬಸ್ ನಲ್ಲಿ ಸಾಗಿಸುತ್ತಿದ್ದು, ಚಾಲಕ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ತಕ್ಷಣ ಕೇಬಲ್ ವೈರ್ ಕತ್ತರಿಸಿದ್ದಾರೆ. ಇದರಿಂದ ಬೆಂಕಿ ಹರಡಿಲ್ಲ.

Fire was found in the bus carrying electronic voting machines

 ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಯೂಸೂಫ್ ಖಾನ್ ನಾಪತ್ತೆ? ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಯೂಸೂಫ್ ಖಾನ್ ನಾಪತ್ತೆ?

ನಂತರ, ಸ್ಥಳಕ್ಕೆ ಬಂದ ಕೆ.ಆರ್.ಠಾಣೆಯ ಇನ್‌ಸ್ಪೆಕ್ಟರ್ ವಿ.ನಾರಾಯಣ ಸ್ವಾಮಿ ಬೇರೊಂದು ಬಸ್ ತರಿಸಿ ಅದರಲ್ಲಿ ಮತಯಂತ್ರಗಳನ್ನು ಕಳುಹಿಸಿದರು.

English summary
Lok Sabha Election 2019:Fire was found in the bus carrying electronic voting machines. Incident occurred yesterday at Gavimat road, Gaurishankar nagar in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X