ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂಬೆಳಗ್ಗೆ ಮೈಸೂರಿನ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಬೆಂಕಿ: ಅಪಾರ ಹಾನಿ

|
Google Oneindia Kannada News

ಮೈಸೂರು, ಫೆಬ್ರವರಿ 27: ಮೈಸೂರಿನ ಪ್ರತಿಷ್ಠಿತ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯಲ್ಲಿ ಇಂದು ಬುಧವಾರ ಬೆಳಗಿನ ಜಾವ ಹೂವಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು, ಹೂವಿನ ಅಂಗಡಿಯ ಅಕ್ಕಪಕ್ಕದ ಮಳಿಗೆಗೂ ಬೆಂಕಿಯ ಜ್ವಾಲೆ ತಗುಲಿದೆ.

Fire broke out in Devaraja Market at Mysore

ಚಾಮುಂಡಿಬೆಟ್ಟದಲ್ಲೂ ಕಾಣಿಸಿಕೊಂಡ ಬೆಂಕಿ, 30 ಎಕರೆ ಪ್ರದೇಶ ಬೆಂಕಿಗಾಹುತಿಚಾಮುಂಡಿಬೆಟ್ಟದಲ್ಲೂ ಕಾಣಿಸಿಕೊಂಡ ಬೆಂಕಿ, 30 ಎಕರೆ ಪ್ರದೇಶ ಬೆಂಕಿಗಾಹುತಿ

ಬೆಳಗ್ಗೆ 7 ಗಂಟೆ ಸುಮಯದಲ್ಲಿ ಬೆಂಕಿ ಕಾಣಿಸಿಕೊಂಡ ತತ್ ಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಇದೇ ವೇಳೆ ಸುಮಾರು 1.5 ಲಕ್ಷ ಮೌಲ್ಯದ ಹೂ ಸೇರಿದಂತೆ ಇತರೆ ವಸ್ತುಗಳು ನಾಶಗೊಂಡಿವೆ.

ಬೆಳಗಿನ ಜಾವವಾದ ಕಾರಣ ಅಂಗಡಿಗಳಲ್ಲಿ ಯಾರೂ ಇರದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಈ ಹಿಂದೆ ಬೆಂಕಿಯ ಅವಘಡ ಇಲ್ಲಿ ಸಂಭವಿಸಿದ್ದರೂ ಇಷ್ಟು ಪ್ರಮಾಣದ ನಾಶವಾಗಿರಲಿಲ್ಲ. ಕೇವಲ ಕೆಲವೇ ಘಂಟೆಗಳ ಅವಧಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ಅಂದಾಜು 4, 5 ಹೂವಿನ ಮಳಿಗೆಗಳು ಈ ಬೆಂಕಿಯ ಕೆನ್ನಾಲಿಗೆ ಭಾಗಶಃ ನಾಶಗೊಂಡಿವೆ.

English summary
Fire broke out in Devaraja Market at Mysore. At this time around 1.5 lakh worth of flowers, including other materials have been destroyed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X