ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಿಲ್ಮ್‌ಸಿಟಿ ಮೈಸೂರಲ್ಲಲ್ಲ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ

|
Google Oneindia Kannada News

ಮೈಸೂರು, ಡಿಸೆಂಬರ್ 12: ಫಿಲ್ಮ್‌ಸಿಟಿ ಮೈಸೂರು ಬದಲಾಗಿ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಕೂಡ ಫಿಲ್ಮ್‌ ಸಿಟಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆದಿತ್ತು. ಇದೀಗ ಎರಡು ಸುತ್ತಿನ ಮಾತುಕತೆ ನಡೆದಿದ್ದು ಶೀಘ್ರವೇ ಸ್ಥಳಾಂತರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೈಸೂರಿನಲ್ಲಿ ಮತ್ತೆ ಚಿಗುರೊಡೆದಿದೆ ಫಿಲಂ ಸಿಟಿ ನಿರ್ಮಾಣದ ಕನಸುಮೈಸೂರಿನಲ್ಲಿ ಮತ್ತೆ ಚಿಗುರೊಡೆದಿದೆ ಫಿಲಂ ಸಿಟಿ ನಿರ್ಮಾಣದ ಕನಸು

ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರ ನಿರ್ಮಾಣಕ್ಕೆ ಬೇಕಾದ ಅರಮನೆ, ಚಾಮುಂಡಿಬೆಟ್ಟ, ಕೆಆರ್‌ಎಸ್‌, ಮೇಲುಕೋಟೆ ಸೇರಿದಂತೆ ಅನೇಕ ಸ್ಥಳಗಳಿವೆ ಎಂದು ಹೇಳಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಮೈಸೂರಿನಲ್ಲಿ ಈ ಯೋಜನೆ ನಿರ್ಮಿಸುವ ಕುರಿತು ಅಷ್ಟಾಗಿ ಆಸಕ್ತಿ ತೋರಲಿಲ್ಲ. ರಾಮನಗರಕ್ಕೆ ಈ ಯೋಜನೆ ಸ್ಥಳಾಂತರಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಬಳಿಕ ಈಗ ಆ ಆಲೋಚನೆ ದೊಡ್ಡಬಳ್ಳಾಪುರಕ್ಕೆ ಶಿಫ್ಟ್‌ ಆಗಿದೆ.

Film City Will Set Up In Doddaballapur

ದೊಡ್ಡ ಬಳ್ಳಾಪರದಲ್ಲಿ ಜಮೀನು ದರ ಗಗನಕ್ಕೇರಿದೆ. ಅಲ್ಲಿ ಸಿನಿಮಾ ನಗರಿ ನಿರ್ಮಿಸುವುದಾದರೆ ದುಪ್ಪಟ್ಟು ದರ ನೀಡಬೇಕು ಎನ್ನುವ ಗೊಂದಲವೂ ಇದೆ.ಆದರೆ ಮೈಸೂರಿನಲ್ಲಿ ಈಗಾಗಲೇ ಸಾವಿರಾರು ಎಕರೆ ಖರೀದಿ ಮಾಡಿರುವ ಜಮೀನು ಇದೆ ಅಲ್ಲೇ ಫಿಲ್ಮ್ ಸಿಟಿ ನಿರ್ಮಿಸುವ ಕುರಿತು ಕೂಡ ಆಲೋಚಿಸಲಾಗಿತ್ತು.

ಇದೀಗ ಅಂತಿಮ ಮುದ್ರೆ ಒತ್ತುವುದಷ್ಟೇ ಬಾಕಿ ಉಳಿದಿದೆ.ನಂಜನಗೂಡು ತಾಲೂಕು ಹಿಮ್ಮಾವು ಬಳಿ ಯೋಜನೆಗೆ ಅಗತ್ಯವಿರುವ 100ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ, ನಂತರ ಬಂದ ಸರ್ಕಾರಗಳ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಭಾಗದಿಂದ ಕೂಗು ಕೇಳಿಬಂದಿತ್ತು.

English summary
Film City Will Set up in Doddaballapur instead of Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X