ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 10 ಕಡೆ ತೆರೆದಿದೆ ವಿಶೇಷ "ಫೀವರ್ ಕ್ಲಿನಿಕ್"

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 17: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ನಗರದಲ್ಲಿ ಹತ್ತು ಕಡೆ, ನಂಜನಗೂಡಿನಲ್ಲಿ ಒಂದು ಕಡೆ ಫೀವರ್ ಕ್ಲಿನಿಕ್ ಸ್ಥಾಪನೆ ಮಾಡಲಾಗಿದ್ದು, ಜ್ವರ, ನೆಗಡಿ, ಒಣಕೆಮ್ಮು ಇರುವವರು ಅಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ವಾರ್ತಾ ಮತ್ತು ಸಂಪರ್ಕಾಧಿಕಾರಿಗಳ ಫೇಸ್ ಬುಕ್ ಪುಟದಲ್ಲಿ ನೇರ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಒಟ್ಟು 3638 ಮಂದಿ ಮೇಲೆ ನಿಗಾ ಇರಿಸಲಾಗಿದೆ. 1564 ಜನರು ಹೋ ಕ್ವಾರೆಂಟೈನ್ ನಲ್ಲಿದ್ದಾರೆ. 2025 ಜನ ಕ್ವಾರಂಟೈನ್ ಮುಗಿಸಿದ್ದಾರೆ. ಒಟ್ಟು 61 ಪಾಸಿಟಿವ್ ಬಂದಿದೆ. 12 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 61ರಲ್ಲಿ 49 ಜುಬಿಲಿಯಂಟ್ ಕಾರ್ಖಾನೆಗೆ ಸಂಬಂಧಪಟ್ಟದ್ದಾಗಿದ್ದರೆ, 8 ತಬ್ಲಿಘಿ ಜಮಾತ್ ನವರು. ಇಬ್ಬರು ವಿದೇಶದಿಂದ ಬಂದಿರುವವರು, ಒಬ್ಬರು ಫಾರಿನ ರಿಟರ್ನ್ ಸಂಬಂಧಿ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

ಮೈಸೂರಿನಲ್ಲಿ ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ಡಿಸಿಪಿಗೆ ಅವಾಜ್ಮೈಸೂರಿನಲ್ಲಿ ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ಡಿಸಿಪಿಗೆ ಅವಾಜ್

ನಂಜನಗೂಡಿನಲ್ಲಿ ಸೆಕೆಂಡರಿ ಕಾಂಟಾಕ್ಟ್ ನಲ್ಲಿ ರುವವರನ್ನು ನಿಗಾದಲ್ಲಿರಿಸಿ ಮಾದರಿ ತೆಗೆದು ಕಳಿಸಲಾಗಿದೆ. ಫೀವರ್ ಕ್ಲಿನಿಕ್ ಅನ್ನು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸ್ಥಾಪಿಸಿದೆ. ಮೈಸೂರು ನಗರದ 10 ಕಡೆ ಮತ್ತು ನಂಜನಗೂಡಿನಲ್ಲಿ ಒಂದು ಕಡೆ ಸ್ಥಾಪಿಸಲಾಗಿದೆ. ಇದು ಬರಿ ಸ್ಕ್ರೀನಿಂಗ್ ಮಾತ್ರ. ಕೋವಿಡ್ ಇದೆ ಎಂದಲ್ಲ. ಫೀವರ್ ಕ್ಲಿನಿಕ್ ಗೆ ಬಂದಾಗ ಬೇರೆ ಏನು ಸೋಂಕು ಇದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ನುರಿತ ವೈದ್ಯರು ಅದಕ್ಕೆ ಬೇಕಾದ ಪಿಪಿಇ ಕಿಟ್ ಹಾಕಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಾರೆ.

Fever Clinics Opened In 10 Places In Mysuru And 1 In Nanjanagudu

ಕೊರೊನಾ ಶಂಕೆ ಇದ್ದರೆ, ಒಣಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಇದ್ದರೆ ಹೊಸ ಜಿಲ್ಲಾಸ್ಪತ್ರೆಗೆ ಕಳಿಸಿ ಪರೀಕ್ಷೆ ನಡೆಸಲಾಗುತ್ತದೆ. ನಾವು ಪರೀಕ್ಷೆ ಮಾಡಿಸಿಕೊಳ್ಳೋಣ ಎಂದು ಸಾರ್ವಜನಿಕರು ಗುಂಪುಗುಂಪಾಗಿ ಫೀವರ್ ಕ್ಲಿನಿಕ್ ಗೆ ಬರಬೇಡಿ ಎಂದರು. ನಂಜನಗೂಡನ್ನು ಕಂಟೋನ್ಮೆಂಟ್ ಜೋನ್ ಎಂದು ಮಾಡಲಾಗಿದೆ. ಇಡೀ ನಗರವನ್ನು ಈ ರೀತಿ ಮಾಡಲು ಕಷ್ಟ. 20ನೇ ತಾರೀಕಿನ ನಂತರ ಕೆಲವು ಕಡೆ ರಿಲ್ಯಾಕ್ಸೇಶನ್ ಸಿಗಲಿದೆ ಎಂದರು.

English summary
As corona cases are increasing in mysuru district, fever clinics opened in 10 places in mysuru and one in nanjanagudu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X