• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಇಳಿಮುಖವಾಗಿದೆ ಹೆಣ್ಣು ಮಕ್ಕಳ ಜನನ ಪ್ರಮಾಣ

|

ಮೈಸೂರು, ಡಿಸೆಂಬರ್ 4 : ಕಳೆದ ನಾಲ್ಕು ವರ್ಷಗಳಿಂದಲೂ ಮೈಸೂರಿನಲ್ಲಿ ಗಂಡು - ಹೆಣ್ಣು ಲಿಂಗಾನುಪಾತದಲ್ಲಿ ಕುಸಿತ ಕಂಡುಬರುತ್ತಿದ್ದು, ಆರೋಗ್ಯ ನಿರ್ವಹಣಾ ಮಾಹಿತಿ ಸಂಸ್ಥೆ ಈ ಕುರಿತು ವರದಿಯೊಂದನ್ನು ನೀಡಿದೆ. ಏಪ್ರಿಲ್ - ಸೆಪ್ಟೆಂಬರ್ 2018ರವರೆಗೆ ಜಿಲ್ಲೆಯಲ್ಲಿ 1000 ಗಂಡು ಮಕ್ಕಳಿಗೆ 919 ಹಣ್ಣು ಮಕ್ಕಳ ಜನನ ಪ್ರಮಾಣ ದಾಖಲಾಗಿದೆ.

ಅಂದಹಾಗೆ ಕಳೆದ 2017-18ರ ಅವಧಿಯಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ 941 ಇತ್ತು. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಹೆಣ್ಣುಮಕ್ಕಳ ಜನನ ಪ್ರಮಾಣ ಕುಸಿಯುತ್ತಲೇ ಇರುವುದನ್ನು ವರದಿಯಲ್ಲಿ ತೋರಿಸಲಾಗಿದೆ. 2014-15 ರಲ್ಲಿ 961 ಇದ್ದ ಹೆಣ್ಣುಮಕ್ಕಳ ಜನನ ಪ್ರಮಾಣ 2015-16 ರಲ್ಲಿ 952ಕ್ಕೆ ಇಳಿಕೆಯಾಗಿತ್ತು.

ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ವರದಿಯ ಸತ್ಯಾಸತ್ಯತೆಯನ್ನು ಕುರಿತು ಪ್ರಶ್ನಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಡೆದ ಹೆರಿಗೆಗಳನ್ನು ಪರಿಗಣಿಸದೆ, ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ಹೆರಿಗೆಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ವರದಿ ಸಿದ್ಧಪಡಿಸಲಾಗಿದೆ.

ಪ್ರಸವಪೂರ್ವ ಲಿಂಗ ಪತ್ತೆ ಜಾಹೀರಾತು ಹಾಕಲ್ಲ : ಗೂಗಲ್

ಜಿಲ್ಲೆಯ ಲಿಂಗಾನುಪಾತದ ಸಮಗ್ರ ಚಿತ್ರಣವನ್ನು ವರದಿಯಲ್ಲಿ ಕಾಣಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳನ್ನು ಗಣನೆಗೆ ತೆಗೆದುಕೊಂಡರಷ್ಟೇ ಲಿಂಗಾನುಪಾತದ ನಿಖರ ಮಾಹಿತಿ ಲಭ್ಯವಾಗಬಹುದು ಎಂಬುದು ಅಧಿಕಾರಿಗಳ ಮಾತು.

2011ರ ಜನಗಣತಿ ಪ್ರಕಾರ

2011ರ ಜನಗಣತಿ ಪ್ರಕಾರ

2011ರ ಜನಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 0-6 ವಯೋಮಾನದಲ್ಲಿ 1000 ಗಂಡುಮಕ್ಕಳಿಗೆ 961 ಹೆಣ್ಣುಮಕ್ಕಳಿದ್ದರು. 2001ರ ಜನಗಣತಿ ಪ್ರಕಾರ ಈ ಪ್ರಮಾಣ 962 ಆಗಿತ್ತು.ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಜನನ ಆಗಿದೆಯೋ ಆ ಮಾಹಿತಿಯ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗುತ್ತದೆ.

ಈ ವರದಿಯೇ ಅಂತಿಮವಲ್ಲ

ಈ ವರದಿಯೇ ಅಂತಿಮವಲ್ಲ

ಕೇರಳ, ತಮಿಳುನಾಡಿನ ಗಡಿ ಭಾಗಗಳಿಂದಲೂ ಹೆರಿಗೆಗಾಗಿ ಮೈಸೂರಿಗೆ ಬರುತ್ತಾರೆ. ಮೈಸೂರಿನ ಎಷ್ಟೋ ಮಂದಿ ಹೆರಿಗೆಗೆ ಬೇರೆ ಕಡೆ ಹೋಗುವರು. ಆದ್ದರಿಂದ ಈ ವರದಿಯೇ ಅಂತಿಮ ಎನ್ನಲಾಗದು. ಜಿಲ್ಲೆಯಲ್ಲಿರುವ ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಇಲಾಖೆಯು ನಿಗಾ ಇರಿಸಿದೆ. ಅಧಿಕಾರಿಗಳ ತಂಡ ಆಗಿಂದಾಗ್ಗೆ ದಾಳಿ ನಡೆಸುತ್ತಿರುತ್ತದೆ.

ಲಿಂಗ ಪತ್ತೆ ಹಚ್ಚುವ ಕೇಂದ್ರಗಳ ಮಾಹಿತಿ ನೀಡಿ 50,000 ರೂ. ಗೆಲ್ಲಿ

ವರದಿಯಿಂದ ಬಹಿರಂಗ

ವರದಿಯಿಂದ ಬಹಿರಂಗ

ಪ್ರಸವಪೂರ್ವ ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಎಲ್ಲೂ ವರದಿಯಾಗಿಲ್ಲ.ಮೈಸೂರು ಮಾತ್ರವಲ್ಲದೆ, ದಕ್ಷಿಣ ಕರ್ನಾಟಕದ ಇತರ ಕೆಲವು ಜಿಲ್ಲೆಗಳಲ್ಲೂಲಿಂಗಾನುಪಾತದಲ್ಲಿ ಕುಸಿತ ಉಂಟಾಗಿರುವುದು ವರದಿಯಿಂದ ಬಹಿರಂಗಗೊಂಡಿದೆ.

ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮೇಲಿನ ನಿಷೇಧ ತೆರವು

ದೂರುಗಳು ಕೇಳಿಬಂದಿವೆ

ದೂರುಗಳು ಕೇಳಿಬಂದಿವೆ

ಕೊಡಗಿನಲ್ಲಿ 1000 ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಪ್ರಮಾಣ 909, ಮಂಡ್ಯದಲ್ಲಿ 911 ಮತ್ತು ಹಾಸನ ಜಿಲ್ಲೆಯಲ್ಲಿ 921 ಇರುವುದಾಗಿ ವರದಿ ತಿಳಿಸಿದೆ. ಜಿಲ್ಲೆಯ ಗಡಿ ಭಾಗಗಳಲ್ಲಿರುವ ಕೆಲವು ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಲಿಂಗ ಪತ್ತೆ ಪರೀಕ್ಷೆ ನಡೆಯುತ್ತವೆ ಎಂಬ ದೂರುಗಳು ಕೇಳಿಬಂದಿವೆ.

ಆದರೆ ಸಾಕ್ಷ್ಯಗಳು ಸಿಗದ ಕಾರಣ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವೈದ್ಯರು, ಸ್ಕ್ಯಾನಿಂಗ್‌ ಸೆಂಟರ್‌ನ ಸಿಬ್ಬಂದಿ ಮತ್ತು ಪರೀಕ್ಷೆಗೆ ಒಳಗಾದ ಮಹಿಳೆ ಅಥವಾ ಅವರ ಮನೆಯವರು ಎಲ್ಲವನ್ನೂ ಮುಚ್ಚಿಡುವರು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For the last four years female birth rates are low in Mysore. Here's a brief report about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more