ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಲು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ: ರೈತರು ಆಕ್ರೋಶ

|
Google Oneindia Kannada News

ಮೈಸೂರು ಜು. 3: ಪ್ಯಾಕೇಟ್ ಉತ್ಪನಗಳ ಮೇಲೆ ಜಿಎಸ್‌ಟಿ ವಿಧಿಸಿದ ಪರಿಣಾಮ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಪ್ಯಾಕೇಟ್ ಮಾಡಿದ ತನ್ನ ಉತ್ಪನ್ನಗಳ ಬೆಲೆ ಏರಿಸಲು ಯೋಜಿಸಿದೆ. ಇದರಿಂದ ರೈತರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ಯಾಕೇಟ್ ಮಾಡಿದ ವಸ್ತುಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತುರುವುದಾಗಿ ತಿಳಿಸಿತ್ತು. ಪ್ಯಾಕೇಟ್ ಮಾಡಿದ ಆಹಾರಧಾನ್ಯಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಶೇ.5ರಷ್ಟು ತೆರಿಗೆ ಹೇರಲಾಗಿದೆ. ಅದರಂತೆ ಪ್ಯಾಕೇಟ್ ಮಾಡಲಾದ ಹಾಲಿನ ಉತ್ಪನ್ನಗಳಾದ ಪನ್ನೀರ್, ಹಾಲು, ಮೊಸಲು, ಲಸ್ಸಿ, ಮಜ್ಜಿಗೆ ಇನ್ನಿತರ ಹೈನುಗಾರಿಕೆ ಆಧಾರಿತ ವಸ್ತುಗಳ ಮೇಲೆ ಶೇ.5ರಷ್ಟು ಅಧಿಕ ತೆರಿಗೆ ಬೀಳಲಿದೆ. ಕೇಂದ್ರ ಈ ನಿರ್ಧಾರಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ತೆರಿಗೆ ಹೇರಿಕೆ ನಿರ್ಧಾರಿಂದ ರಾಜ್ಯದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಅತೀ ದೊಡ್ಡ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮೊಸರು ದರವನ್ನು ಲೀಟರ್‌ಗೆ 2.2 ರೂ, ಲಸ್ಸಿ ಲೀಟರ್‌ಗೆ 3.75 ರೂ. ಹಾಗೂ ಮಜ್ಜಿಗೆ ಲೀಟರ್‌ಗೆ 3 ರೂ. ಹೆಚ್ಚಿಸಲು ಚಿಂತನೆ ನಡೆಸಿದೆ. ಇನ್ನು ಪನ್ನೀರ್ ಕೇಜಿಗೆ 15 ರೂ. ಹೆಚ್ಚಾಗುವ ಸಾಧ್ಯತೆ ಇದೆ. ಇದು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೊರೆ ಆಗಲಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.

Farmers Anguish Over GST Tax on Milk and Dairy Products

ಕೆಎಂಎಫ್ ನಿತ್ಯ 22 ಲಕ್ಷ ತೆರಿಗೆ ಪಾವತಿ ಸಾಧ್ಯತೆ:

ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ ಕೆಎಂಎಫ್ ನಿತ್ಯ ಮೊಸರು, ಲಸ್ಸಿ, ಮಜ್ಜಿಗೆ ಮತ್ತು ಪನ್ನೀರ್ ಸಂಪೂರ್ಣ ವಹೀವಾಟಿನಲ್ಲಿ ದಿನಕ್ಕೆ ಅಂದಾಜು 22 ಲಕ್ಷ ರು, ಹಣವನ್ನು ಜಿಎಸ್‌ಟಿ ರೂಪದಲ್ಲಿ ಸರ್ಕಾರಕ್ಕೆ ಪಾವತಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಕೆಎಂಎಫ್ ಕೆಎಂಎಫ್ ನಿತ್ಯ ಅಂದಾಜು 5,000 ಕೇಜಿ ಪನ್ನೀರ್, 15,000 ಲೀ. ಮಜ್ಜಿಗೆ, 15,000 ಲೀ. ಲಸ್ಸಿ ಹಾಗೂ 9ಲಕ್ಷ ಲೀ. ಮೊಸರನ್ನು ಮಾರಾಟ ಮಾಡುತ್ತದೆ ಎಂದು ತಿಳಿದು ಬಂದಿದೆ. ದರ ಏರಿಕೆ ಕುರಿತು ಕೆಎಂಎಫ್ ಸ್ಪಷ್ಟ ಮಾಹಿತಿ ನೀಡಬೇಕಿದೆ.

ಕೃಷಿ, ಹೈನುಗಾರಿಕೆ ಕೇಂದ್ರದ ಗುರಿ: ವಾಗ್ದಾಳಿ:

ಪ್ಯಾಕೇಟು ಪದಾರ್ಥಗಳ ಮೇಲಿನ ಜಿಎಸ್ ಟಿಯಿಂದಾಗಿ ಹಾಲಿನ ಉತ್ಪನ್ನ ದರ ಏರಿಕೆ ಸಂಭವ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಜೂಜು, ರೇಸ್ ಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲ್ಲ. ಬದಲಾಗಿ ಕೃಷಿ, ಹಾಲು ಉತ್ಪಾದಕರನ್ನು ಗುರಿಯಾಗಿಸಿಕೊಂಡು ಜಿಎಸ್ ಟಿ ಹೇರಿದೆ.

Farmers Anguish Over GST Tax on Milk and Dairy Products

ನೀರಾವರಿ ಕೃಷಿಗೆ ಅಗತ್ಯವಾದ ಪಂಪ್ ಸೆಟ್, ಸ್ಪ್ರೇಯರ್‌ಗಳು ಹಾಗೂ ಇತರ ಸಲಕರಣೆಗಳಿಗೆ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರ ಸ್ವಾಮಿನಾಥನ್ ಸಮಿತಿಯ ವರದಿ ಜಾರಿಗೆ ತರುವುದಾಗಿ ನೀಡಿದ್ದ ಮಾತನ್ನು ನೆರವೇರಿಸದೇ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೃಷಿ ಉತ್ಪನಗಳಿಗೆ ಸರಿಯಾಗಿ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ, ಉತ್ಪಾದನಾ ವೆಚ್ಚಾಗಿದ್ದು, ಆದಾಯ ಕಡಿಮೆ ಆಗಿದೆ. ಇದರತ್ತ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅವರು ಕಿಡಿ ಕಾರಿದರು.

Recommended Video

Miss India ಪ್ರಶಸ್ತಿ ಗೆದ್ದ Sini Shetty ಯಾರು | *Entertainment | OneIndia Kannada

ನಂದಿನಿ ಸರಕುಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ರೈತರೊಂದಿಗೆ ನಿಯೋಗ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಈ ಕುರಿತು ಒತ್ತಾಯಿಸುತ್ತೇವೆ ಎಂದು ಶಾಂತಕುಮಾರ್ ತಿಳಿಸಿದ್ದಾರೆ.

English summary
Farmer Kuruburu Shantakumar opposed Central government's decision to bring Dairy, Milk products and other pre-packed labelled Food Items under Goods and services tax (GST).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X