ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನಲ್ಲಿ ನಾಳೆ ನಡೆಯಬೇಕಿದ್ದ ಪ್ರಸಿದ್ಧ ಪಂಚಮಹಾರಥೋತ್ಸವ ರದ್ದು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 03: ನಾಳೆ ನಂಜನಗೂಡಿನಲ್ಲಿ ನಡೆಯಬೇಕಾದ ಪಂಚ‌ ಮಹಾರಥೋತ್ಸವವು ನಡೆಯುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಇಂದು ಮಾಹಿತಿ ನೀಡಿದ ಅವರು, "ಧಾರ್ಮಿಕ ಕಾರ್ಯಕ್ರಮಕ್ಕೆ ಸೂಚನೆ ಕೊಡಲಾಗಿದೆ. ದೇವಾಲಯದ ಒಳಗೆ ಯಾವುದೇ ಪೂಜೆ ಇದ್ದರೂ ಅರ್ಚಕರ ಸಾಮಾಜಿಕ ಅಂತರದಲ್ಲಿ ನೆರವೇರಲಿದೆ. ಆದರೆ ರಥ ಎಳೆಯುವುದು ಅಥವಾ ರಥಕ್ಕೆ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಎಲ್ಲರೂ ಮನೆಯಿಂದಲೇ ದೇವರನ್ನು ಪ್ರಾರ್ಥಿಸಿ. ಯಾರೂ ದೇವಾಲಯದ ಬಳಿ ಬರದೆ ಹೊರಗೆ ಓಡಾಡದೇ ಇರಿ" ಎಂದಿದ್ದಾರೆ.

 ನಂಜನಗೂಡು ವಿಷಕಂಠನಿಗೂ ತಟ್ಟಿತು ಕೊರೊನಾ ಬಿಸಿ ನಂಜನಗೂಡು ವಿಷಕಂಠನಿಗೂ ತಟ್ಟಿತು ಕೊರೊನಾ ಬಿಸಿ

Famous Panchamaharathotsava Cancelled Due To Corona In Nanjanagudu

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪಂಚಮಹಾರಥೋತ್ಸವ ಅದ್ಧೂರಿಯಿಂದ ನಡೆಯುತ್ತಿತ್ತು. ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಪರಿಣಾಮದಿಂದಾಗಿ ಎಲ್ಲವೂ ತಲೆಕೆಳಗಾಗಿದೆ. ಕೊರೊನಾ ಕಾರಣದಿಂದಾಗಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಪಂಚ ಮಹಾರಥೋತ್ಸವ ನಡೆಯುವ ಬಗ್ಗೆಯೂ ಅನುಮಾನ ವ್ಯಕ್ತಗೊಂಡಿತ್ತು.

ಇದೀಗ ರಥೋತ್ಸವ ರದ್ದಾಗಿರುವ ಕುರಿತು ಮೈಸೂರು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

English summary
Famous Nanjanagudu srikanteshwara Panchamaharathotsava Cancelled Due To Corona, clarified dc abhiram g shankar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X