ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅನಧಿಕೃತ ಪಾಸ್‌ ಬಳಕೆ: ವಾಹನ ವಶ

|
Google Oneindia Kannada News

ಮೈಸೂರು, ಏಪ್ರಿಲ್ 30: ಲಾಕ್‌ ಡೌನ್‌ ಇದ್ದಾಗಲೂ ಜನರು ಅದನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೋವಿಡ್-19 ಸಂಬಂಧ ಅನಧಿಕೃತ ಪಾಸನ್ನು ಹಾಕಿದ್ದ ಒಂದು ಟೊಯೊಟಾ ಇಟಿಯಸ್ ಕಾರ್ ಹಾಗೂ ಪಾಸ್ ಡೌನ್ ಲೋಡ್ ಮಾಡಿದ್ದ ವಿವೋ ಮೊಬೈಲ್ ಫೋನ್ ನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸರು ತಪಾಸಣೆ ನಡೆಸುತಿದ್ದಾಗ ಫೌಂಟೇನ್ ವೃತ್ತದ ಬಳಿ ಅನಧಿಕೃತ ಪಾಸ್‌ ಅಳವಡಿಸಿಕೊಂಡಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕೆಎ 02 ಎಂಜಿ 0661 ಇರುವ ನಂಬರಿನ ಟೊಯೊಟಾ ಇಟಿಯಸ್ ಕಾರನ್ನು ತಡೆದು ಚೆಕ್ ಮಾಡಿದಾಗ, ಕಾರಿನ ಮುಂಭಾಗದ ಗ್ಲಾಸ್ ನಲ್ಲಿ GOVERNMENT OF KARNATAKA COVID-19 VEHICLE PASS AAA (ALL AREA ACCESS) ಎಂದು ನಮೂದಾಗಿದ್ದು, ಕಾರಿನಲ್ಲಿ ಇದ್ದ ಎನ್‌.ಆರ್‌ ಮೊಹಲ್ಲ ನಿವಾಸಿ ನಿರ್ಮಲ್ ಕುಮಾರ್ ಸಿಂಘ್ವಿ ಎಂಬವರನ್ನು ವಿಚಾರ ಮಾಡಲಾಯಿತು.

Unauthorized Pass Use In Mysuru: Vehivle Sieze

ತಾವು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ತಮ್ಮ ಅಕ್ಕನವರ ಮನೆಗೆ ಹೋಗಬೇಕಾದ್ದರಿಂದ ತಮ್ಮ ಸ್ನೇಹಿತರೊಬ್ಬರು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಪಾಸನ್ನು ಡೌನ್‍ಲೋಡ್ ಮಾಡಿ, ಕಲರ್ ಪ್ರಿಂಟ್ ಹಾಕಿಸಿ ತಮ್ಮ ಕಾರಿಗೆ ಅಳವಡಿಸಿಕೊಂಡಿರುವುದಾಗಿ ತಿಳಿಸಿದರು.

Unauthorized Pass Use In Mysuru: Vehivle Sieze

ಈ ಸಂಬಂಧ ನರಸಿಂಹರಾಜ ಠಾಣೆಯ ಪೊಲೀಸರು ಕಾರು ಹಾಗೂ ಪಾಸನ್ನು ಡೌನ್ ಲೋಡ್ ಮಾಡಿದ್ದ ಒಂದು ವಿವೋ ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

English summary
A car with an unauthorized pass And seized by Narasimharaja Police in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X