ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ರಸ್ತೆಗಿಳಿಯಲಿವೆ ಹೆಚ್ಚುವರಿ 100 ಬಸ್ ಗಳು

|
Google Oneindia Kannada News

ಮೈಸೂರು, ಜೂನ್ 6: ನಗರದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರು ನಗರ ವ್ಯಾಪ್ತಿಯಲ್ಲಿ ಹಲವು ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಇದಕ್ಕಾಗಿ ಮೈಸೂರಿಗೆ ಹೆಚ್ಚುವರಿಯಾಗಿ 100 ಬಸ್ ಗಳು ಹೊಸದಾಗಿ ಸೇರ್ಪಡೆಗೊಳ್ಳಲಿದೆ.

ನಗರದ ಹೊರವರ್ತುಲ ರಸ್ತೆ, ಸುತ್ತಮುತ್ತಲಿನ ಬಡಾವಣೆಗಳು ಮತ್ತು ಗ್ರಾಮ ಪಂಚಾಯಿತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂಪರ್ಕ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ನಗರ ಸಾರಿಗೆ ಇದೀಗ 100 ಹೊಸ ಸಿಟಿ ಬಸ್ ಗಳನ್ನು ಓಡಿಸಲು ಮುಂದಾಗಿದೆ. ನಗರ ವ್ಯಾಪ್ತಿಯಲ್ಲಿ ನಾನಾ ಕಾರ್ಖಾನೆಗಳಿಗೆ ದಿನವೂ ಸಾವಿರಾರು ಕಾರ್ಮಿಕರು ಆಗಮಿಸುತ್ತಾರೆ. ಅವರಿಗೆ ಗೂಡ್ಸ್ ವಾಹನವೇ ಜೀವಾಳ. ಇದರಿಂದಾಗಿ ಅಪಘಾತ ಮತ್ತು ಟ್ರಾಫಿಕ್ ಜಾಮ್ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ನಗರ ಸಾರಿಗೆ ನಿಗಮ ಸದ್ಯ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

 ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು! ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!

ನಗರದ ಸುತ್ತಮುತ್ತಲಿರುವ ರಿಂಗ್ ರಸ್ತೆ ವ್ಯಾಪ್ತಿಯನ್ನು ನಾಲ್ಕು ಭಾಗವಾಗಿ ವಿಂಗಡಿಸಿದ್ದು, ಅಲ್ಲಿಗೆ ನಗರ ಸಾರಿಗೆ ಸಂಚಾರವನ್ನು ವಿಸ್ತರಿಸಿದೆ. ಈ ಹಿಂದೆ ನಗರ ಪ್ರದೇಶ ವ್ಯಾಪ್ತಿಗೆ ಸೀಮಿತವಾಗಿದ್ದ ನಗರ ಸಾರಿಗೆ ಇದೀಗ ಗ್ರಾಮಾಂತರ ಭಾಗಕ್ಕೂ ವಿಸ್ತರಣೆಗೊಳ್ಳಲಿದೆ. ಕಾಲೇಜು ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಇದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳುತ್ತಾರೆ.

Extra 100 buses will run in Mysuru city

ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ಹೊರವಲಯದ ಪ್ರದೇಶಗಳನ್ನು ಜೋಡಿಸುವ ಸಲುವಾಗಿ 100 ನೂತನ ಬಸ್ ಗಳಿಗೆ ಈಗಾಗಲೇ ಬೇಡಿಕೆ ಇಡಲಾಗಿದೆ. ನಗರ ಸಾರಿಗೆ ವಿಭಾಗದಿಂದ ಸರಕಾರಕ್ಕೆ ಈಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

 ವಿದ್ಯಾರ್ಥಿ ಬಸ್ ಪಾಸ್‌ ಅವಧಿ ವಿಸ್ತರಿಸಿದ ಕೆಎಸ್ಆರ್ ‌ಟಿಸಿ ವಿದ್ಯಾರ್ಥಿ ಬಸ್ ಪಾಸ್‌ ಅವಧಿ ವಿಸ್ತರಿಸಿದ ಕೆಎಸ್ಆರ್ ‌ಟಿಸಿ

ಟಿ ನರಸೀಪುರ, ಬನ್ನೂರು, ನಂಜನಗೂಡು, ಹ್ಯಾಂಡ್ ಪೋಸ್ಟ್, ಗದ್ದಿಗೆ, ಕಾಮೇನಹಳ್ಳಿ, ಸುತ್ತೂರು ಸೇರಿದಂತೆ ಹಲವೆಡೆ ಈಗಾಗಲೇ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನಷ್ಟು ಬಸ್ ಗಳು ಈ ಮಾರ್ಗದಲ್ಲಿ ಮುಂದೆಯೂ ಸಂಚಾರ ನಡೆಸಲಿವೆ. ನೂತನ ಬಡಾವಣೆಗಳಿಗೂ ಸಂಪರ್ಕ ವಿಸ್ತರಿಸಲು ಬಸ್ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

 ಫ್ಲೈ ಬಸ್‌ಗಾಗಿ ಕಣ್ಣೂರು ಏರ್‌ಪೋರ್ಟ್‌ನಿಂದ ಕೆಎಸ್ಆರ್‌ಟಿಸಿಗೆ ಪತ್ರ ಫ್ಲೈ ಬಸ್‌ಗಾಗಿ ಕಣ್ಣೂರು ಏರ್‌ಪೋರ್ಟ್‌ನಿಂದ ಕೆಎಸ್ಆರ್‌ಟಿಸಿಗೆ ಪತ್ರ

ಮೈಸೂರು ಸುತ್ತಮುತ್ತ ಇರುವ ನಿರ್ಮಾಣ ಕಾರ್ಮಿಕರಿಗೆ ವರ್ಷಕ್ಕೆ ಕೇವಲ 1050ರೂಗಳಂತೆ ಬಸ್ ಪಾಸ್ ಗೆ ದರ ನಿಗದಿ ಮಾಡಲಾಗಿದ್ದು, ಇದನ್ನು ಕಾರ್ಮಿಕ ಇಲಾಖೆ ನೇರವಾಗಿ ಸಾರಿಗೆ ನಿಯಮಕ್ಕೆ ಸಂದಾಯ ಮಾಡಲಿದೆ. ಇದರ ಪರಿಣಾಮ ನಗರ ಸಾರಿಗೆ ಬಸ್ ಗಳಲ್ಲಿ ನಿರ್ಮಾಣ ಕಾರ್ಮಿಕರು ಎಲ್ಲಿಗೆ ಬೇಕಾದರೂ ಉಚಿತವಾಗಿ ತಲುಪಬಹುದಾಗಿದೆ ಎನ್ನುತ್ತಾರೆ ನಗರ ಸಾರಿಗೆ ವಿಭಾಗೀಯ ಅಧಿಕಾರಿ ಸತೀಶ್ ಕುಮಾರ್.

English summary
The Karnataka State Road Transport Corporation (KSRTC) is planning to set up several projects in Mysuru city for the convenience of increasing passengers. Additionally, 100 buses will be added in few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X