ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಸಿಎಂ ಎಂಬುದನ್ನು ಮರೆತಂತಿದೆ: ಸುರೇಶ್ ಕುಮಾರ್

|
Google Oneindia Kannada News

Recommended Video

Lok Sabha Elections 2019 : ಮಗನಿಗಾಗಿ ತಾನು ಸಿಎಂ ಎಂದು ಮರೆಯುವುದು ಸರಿಯಲ್ಲ | Oneindia Kannada

ಮೈಸೂರು, ಏಪ್ರಿಲ್ 4:ಸಿಎಂ ಕುಮಾರಸ್ವಾಮಿ ತಾವು ಮುಖ್ಯಮಂತ್ರಿ ಎಂಬುದನ್ನು ಮರೆತು, ಕೇವಲ ಮಗನ ಗೆಲುವಿಗಾಗಿ ಪ್ರಚಾರದಲ್ಲಿಯೇ ಮುಳುಗಿ ಹೋಗಿರುವುದು ಬೇಸರ ಸಂಗತಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೈಸೂರು- ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮೈಸೂರಿನಲ್ಲಿ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು,ರಾಜ್ಯದಲ್ಲಿ ಮುಖ್ಯಮಂತ್ರಿ ಎಂಬುವವರು ಕಾಣೆಯಾಗಿದ್ದಾರೆ. ನಿಖಿಲ್ ತಂದೆಯಾಗಿರುವ ಕುಮಾರಸ್ವಾಮಿ ಸಿಎಂ ಎಂಬುದನ್ನು ಮರೆತಂತಿದೆ. ಕೇವಲ ನಿಖಿಲ್ ತಂದೆಯಾಗಿ ಮಂಡ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.

 ಗೌಡರ ಕುಟುಂಬ ವ್ಯಾಮೋಹಕ್ಕೆ ಟ್ವೀಟ್ ನಲ್ಲೇ ತಿವಿದ ಸುರೇಶ್ ಕುಮಾರ್! ಗೌಡರ ಕುಟುಂಬ ವ್ಯಾಮೋಹಕ್ಕೆ ಟ್ವೀಟ್ ನಲ್ಲೇ ತಿವಿದ ಸುರೇಶ್ ಕುಮಾರ್!

ಸುಮಲತಾ ಎಂಬ ಮಹಿಳೆಯ ಬಗ್ಗೆ ಉಪಯೋಗಿಸುತ್ತಿರುವ ಪದಗಳು, ವ್ಯಕ್ತಪಡಿಸುತ್ತಿರುವ ಭಾವನೆಗಳು ರಾಜಕೀಯ ಕ್ಷೇತ್ರಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸುರೇಶ್ ಕುಮಾರ್, ಚಿತ್ರನಟರು ನಮ್ಮ ಜೊತೆ ಇದ್ದರೆ ಜೋಡೆತ್ತುಗಳು. ನಮ್ಮ ಜೊತೆಯಲ್ಲಿ ಇಲ್ಲದಿದ್ದರೆ ಕಳ್ಳೆತ್ತುಗಳು ಎಂಬುದು ಸರಿ ಇಲ್ಲ ಎಂದು ತಿಳಿಸಿದರು.

Ex Minister Suresh Kumar slams CM Kumarswamy

ಕುಮಾರಸ್ವಾಮಿ ಪ್ರತಿಯೊಬ್ಬರನ್ನು ಗೌರವಿಸುವುದನ್ನು ಕಲಿಯಬೇಕು. ತಮ್ಮ ಜವಬ್ದಾರಿಯನ್ನು ಅವರು ಮರೆತಿದ್ದಾರೆ. ಜಾತ್ಯಾತೀತ ಜನತಾದಳ ಎಂಬ ಪಕ್ಷದ ಹೆಸರಿಟ್ಟುಕೊಂಡು ಜಾತಿ ಆಧಾರಿತ ಚಿಂತನೆ ನಡೆಸುತ್ತಿರುವುದನ್ನು ಜನ ನೋಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ತಂದೆ ಆಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕೂಡ ಕೆಲಸ ಮಾಡಿ. ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಆ ಕಡೆ ಗಮನ ಕೊಡಿ ಎಂದು ಸುರೇಶ್ ಕುಮಾರ್ ಆಗ್ರಹಿಸಿದರು.

 ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆಗೆ ಸುರೇಶ್ ಕುಮಾರ್ ಮತ್ತೆ ಟಾಂಗ್! ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆಗೆ ಸುರೇಶ್ ಕುಮಾರ್ ಮತ್ತೆ ಟಾಂಗ್!

ಬಿಜೆಪಿ ಪಕ್ಷ ಕಂಡರೆ ಮೈತ್ರಿ ಸರ್ಕಾರಕ್ಕೆ ಭಯ ಎಂದ ಸುರೇಶ್ ಕುಮಾರ್, ಮೈತ್ರಿ ಎಫೆಕ್ಟ್ ಅವರಿಗೆ ತೊಂದರೆ ಆಗುತ್ತಿದೆ. ಆದರೆ ನಮಗೆ ಮೈತ್ರಿ ಎಫೆಕ್ಟ್ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ರಿಗೆ ಸಮನ್ವಯ ಸಾಧಿಸಲಿಕ್ಕೆ ಆಗ್ತಿಲ್ಲ ಎಂದು ಟೀಕಿಸಿದರು. ಬೆಂಗಳೂರು ದಕ್ಷಿಣದಲ್ಲಿ ಯಾವುದೇ ಗೊಂದಲವಿಲ್ಲ. ತೇಜಸ್ವಿ ಸೂರ್ಯ ಒಬ್ಬ ಯುವ ನಾಯಕ ಅವರಿಗೆ ಜನ ಬೆಂಬಲವಿದೆ ಎಂದರು.

English summary
Former minister Suresh Kumar slams CM H D Kumaraswamy. He said that CM is only concentrating on his son election campaign, Kumaraswamy forgotten that he was the Chief Minister of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X