ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯವರೇನು ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಾ:ಸಿದ್ದರಾಮಯ್ಯ ಪ್ರಶ್ನೆ

|
Google Oneindia Kannada News

Recommended Video

Lok Sabha Elections 2019: ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಸಿದ್ದು ಗರಂ | Oneindia Kannada

ಮೈಸೂರು, ಏಪ್ರಿಲ್ 16: ಬಿಜೆಪಿ ಪ್ರಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ನಲ್ಲಿ ಇದ್ದ ಹಾಗಿದೆ. ಅದರಲ್ಲಿ ಯಾವ ಹೊಸ ಯೋಜನೆಗಳು ಜನ ಪರವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾ? ಅವರ ಮೇಲೆ ಐಟಿ ದಾಳಿ ಏಕಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದುವರೆಗೂ ರಾಮ ಮಂದಿರ ಕಟ್ಟಲು ಸಾಧ್ಯವಾಗಿಲ್ಲ. ಮೋದಿ ಹೇಳೋದೆಲ್ಲ ಸುಳ್ಳು. ಲೋಕ್ ಪಾಲ್ ಆಗಿದ್ದು ಯಾವಾಗ, ಕಳೆದ 5 ವರ್ಷ ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದರು.

 ಐಟಿ ಇಲಾಖೆ ನೊಟೀಸ್‌ಗೆ ಉತ್ತರ ನೀಡಿದ ಸಿದ್ದರಾಮಯ್ಯ ಐಟಿ ಇಲಾಖೆ ನೊಟೀಸ್‌ಗೆ ಉತ್ತರ ನೀಡಿದ ಸಿದ್ದರಾಮಯ್ಯ

ನಾನು 5 ವರ್ಷ ಆಡಳಿತ ಮಾಡಿದ್ದೇನೆ. ನಾನು ಮಾಡಿದ ಯೋಜನೆಯನ್ನ ನಾನು ಹೇಳಿಕೊಳ್ಳುತ್ತೇನೆ. ನಮ್ಮ ಸರ್ಕಾರದಲ್ಲಿ 7 ಕೆಜಿ ಅಕ್ಕಿ ಕೊಡುವ ಯೋಜನೆ ಜಾರಿಗೆ ತಂದೆವು. ನಮ್ಮ ಸರ್ಕಾರ ಸಾಲ ಮನ್ನಾ ಮಾಡಿದೆ. ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಿ ಎಂದರೆ ನಾವೇನು ಹಣ ಪ್ರಿಂಟ್ ಮಾಡೋ ಮಿಷನ್ ಇಟ್ಟಿದ್ದೀವಾ? ಅಂದ್ದಿದರು ಎಂದು ಆರೋಪಿಸಿದರು.

Ex CM Siddaramaih slams on BJP government

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿರಲಿಲ್ಲ. ಆದ್ರೆ ನಾನು ಸ್ವಾತಂತ್ರ್ಯ ಬರುವ ಮೊದಲು ಹುಟ್ಟಿದ್ದೇನೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ದೇಶದ ಸೈನ್ಯವನ್ನು ನರೇಂದ್ರ ಮೋದಿ ಸೈನ್ಯ ಎಂದು ಭಟ್ಟಂಗಿತನ ಪ್ರದರ್ಶಿಸಿದ್ದಾರೆ. ಇಂತಹವರಿಂದ ದೇಶ ರಕ್ಷಣೆ ಸಾಧ್ಯವೇ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು.

 ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್ ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್

ಚುನಾವಣೆಯಲ್ಲಿ ಸೈನ್ಯವನ್ನ ಬಳಸಬೇಡಿ. 'ಉರಿ' ಚಿತ್ರದಿಂದ ಕಾಂಗ್ರೆಸ್ ದೇಶ ಭಕ್ತಿ ಕಲಿಯಬೇಕು ಎಂದ ಸಿದ್ದರಾಮಯ್ಯ, ಮೈತ್ರಿ ಸರ್ಕಾರ ಉತ್ತಮವಾಗಿರುತ್ತದೆ. 14 ಬಾರಿ ಚುನಾವಣೆಗೆ ನಿಂತು ಕೊಂಡಿದ್ದೇನೆ. ಲೋಕಸಭಾ ಚುನಾವಣೆ ಬಗ್ಗೆ ನನಗ್ಯಾವ ಭಯ ಇಲ್ಲ. ಚುನಾವಣೆ ಸಮಯದಲ್ಲಿ ಐಟಿ ರೈಡ್ ಮಾಡಿದ್ದು ಏಕೆ? ಬಿಜೆಪಿಯವರು 25 ರಿಂದ 30 ಕೋಟಿ ಆಫರ್ ಕೊಟ್ಟಿದ್ದಾರೆ. ಅವರಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಐಟಿ ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

English summary
Lok Sabha Elections 2019:Ex CM Siddaramaiah slams on BJP Government and IT department. He said that, I'm not against IT raid. But raid is only on congress and jds. Why not in BJP?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X