ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತ್ತಿಗೆಹುಂಡಿ ಸಮೀಪ ಮಾವುತರನ್ನೇ ಬೀಳಿಸಿ 15 ಕಿ.ಮೀ ಓಡಿದ ಸಾಕಾನೆಗಳು

|
Google Oneindia Kannada News

ಮೈಸೂರು, ನವೆಂಬರ್. 23: ಹುಲಿ ಸೆರೆ ಕಾರ್ಯಾಚರಣೆಗೆ ಆಗಮಿಸಿದ 2 ಸಾಕಾನೆಗಳು ಮಾವುತರನ್ನು ಬೀಳಿಸಿ, ನಾಡಿನತ್ತ ಓಡಿದ ಘಟನೆ ಎಚ್.ಡಿ. ಕೋಟೆ ತಾಲ್ಲೂಕಿನ ಸತ್ತಿಗೆಹುಂಡಿ ಸಮೀಪ ನಡೆದಿದೆ.

ಫಸಲಿನ ರುಚಿ ಕಂಡು ಮಂಡ್ಯ ರೈತರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳುಫಸಲಿನ ರುಚಿ ಕಂಡು ಮಂಡ್ಯ ರೈತರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು

ನಾಗರಹೊಳೆ ಅಭಯಾರಣ್ಯದ ತಾರಕ ಜಲಾಶಯ ಸಮೀಪದಲ್ಲಿರುವ ಪೆಂಜಳ್ಳಿಮತ್ತು ಸತ್ತಿಗೆಹುಂಡಿ ಗ್ರಾಮಗಳಲ್ಲಿ ಒಂದು ವಾರದಿಂದ ಹುಲಿಯೊಂದು ರೈತರ ಜಮೀನುಗಳಲ್ಲಿ ಪ್ರತ್ಯಕ್ಷವಾಗಿ ದನಕರುಗಳ ಮೇಲೆ ದಾಳಿ ನಡೆಸಿ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

 ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಸುತ್ತಾಡಿ ಭಯ ಹುಟ್ಟಿಸಿದ ಒಂಟಿ ಸಲಗ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಸುತ್ತಾಡಿ ಭಯ ಹುಟ್ಟಿಸಿದ ಒಂಟಿ ಸಲಗ

ಹುಲಿಯನ್ನು ಸೆರೆಹಿಡಿಯಬೇಕೆಂದು ಮತ್ತಿಗೋಡು ಸಾಕಾನೆ ಶಿಬಿರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ದ್ರೋಣ ಮತ್ತು ಅಶೋಕ ಎಂಬ ಸಾಕಾನೆಗಳನ್ನು ಕರೆತಂದು ಗುರುವಾರ ಬೆಳಗ್ಗೆ ರತ್ನಮ್ಮ ಅವರ ಜಮೀನಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದರು.

Elephants were scared in Sattigehundi

ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು ಹುಲಿಯನ್ನು ಓಡಿಸಲು ಪಟಾಕಿ ಸಿಡಿಸಲು ಮುಂದಾಗುತ್ತಿದ್ದಂತೆ ಗಾಬರಿಗೊಂಡ ಆನೆಗಳು ಮಾವುತರಾದ ನಂಜುಂಡ ಮತ್ತು ಗುಂಡ ಎಂಬುವವರನ್ನು ಕೆಳಗೆ ಬೀಳಿಸಿ ಕೊತ್ತನಹಳ್ಳಿ, ಹಿರೇಹಳ್ಳಿ, ಜೀಹಾರ, ನಾಗನಹಳ್ಳಿ ಗ್ರಾಮಗಳ ಜಮೀನುಗಳತ್ತ ತೆರಳಿದವು. ಜತೆಗೆ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿದವು.

 ಬಿಸಿಲೆ ಘಾಟಿಯ ಕಾಡಾನೆ ದಾಳಿಯಲ್ಲಿ ವಾಹನದಲ್ಲಿದ್ದವರು ಅಪಾಯದಿಂದ ಪಾರು, ಬಚಾವ್ ಮಾಡಿದ್ದು ಯಾರು?! ಬಿಸಿಲೆ ಘಾಟಿಯ ಕಾಡಾನೆ ದಾಳಿಯಲ್ಲಿ ವಾಹನದಲ್ಲಿದ್ದವರು ಅಪಾಯದಿಂದ ಪಾರು, ಬಚಾವ್ ಮಾಡಿದ್ದು ಯಾರು?!

ಇದರಿಂದ ರೈತರು, ಸಾರ್ವಜನಿಕರು ಗಾಬರಿಗೊಂಡರು. ಅಧಿಕಾರಿಗಳಾದ ಕೇಶವಗೌಡ, ವಿನಯ್ ಹಾಗೂ ಪೊಲೀಸರು ಹಿರೇಹಳ್ಳಿ ಸಮೀಪ ಸಂಜೆ 5 ಗಂಟೆ ವೇಳೆಗೆ ಹರಸಾಹಸ ಪಟ್ಟು ಆನೆಗಳನ್ನು ಹಿಡಿದು ಶಿಬಿರಕ್ಕೆ ಕರೆತಂದರು.

English summary
Two elephants were came with mavutha to Sattigehundi for tiger capture operation. In this time elephants were scared when officers cracked firecrackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X