ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ ಕೋಟೆ ಬಳಿ ಅನುಮಾನಾಸ್ಪದವಾಗಿ ಆನೆ, ಚಿರತೆ ಸಾವು

|
Google Oneindia Kannada News

ಮೈಸೂರು, ಜುಲೈ 9: ಎಚ್.ಡಿ. ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ಡಿಬಿ ಕುಪ್ಪೆ ವಲಯದಲ್ಲಿ ಆನೆ ಮತ್ತು ಚಿರತೆ ಪ್ರತ್ಯೇಕ ಪ್ರದೇಶದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಗಡಿ ಭಾಗದ ಕಾಡಂಚಿನ ಆನೆಮಾಳ ಗ್ರಾಮದ ಬಳಿ ಸುಬ್ರಹ್ಮಣ್ಯ ಎಂಬುವರ ಜಮೀನಿನ ಬಾಳೆ ತೋಟಕ್ಕೆ ಕಾಡಿನಿಂದ ಬಂದಿದ್ದ ಭಾರಿ ಗಾತ್ರದ 35 ವರ್ಷದ ಹೆಣ್ಣಾನೆ, ಅಕ್ರಮವಾಗಿ ಸಂಪರ್ಕಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ. ತೋಟದ ಮಾಲೀಕ ಸುಬ್ರಹ್ಮಣ್ಯ ಪರಾರಿಯಾಗಿದ್ದಾನೆ.

 ಕೊಡಗಿನಲ್ಲಿ ಕಾಡಾನೆ ದಾಳಿ; ವಿದ್ಯಾರ್ಥಿ, ಇಬ್ಬರು ಮಹಿಳೆಯರಿಗೆ ಗಾಯ ಕೊಡಗಿನಲ್ಲಿ ಕಾಡಾನೆ ದಾಳಿ; ವಿದ್ಯಾರ್ಥಿ, ಇಬ್ಬರು ಮಹಿಳೆಯರಿಗೆ ಗಾಯ

ಜೊತೆಗೆ ಡಿಬಿ ಕುಪ್ಪೆ ಅರಣ್ಯ ಪ್ರಾರಂಭದ ಉದ್ದೂರು ಹಾಡಿ ಗೇಟ್ ಸಮೀಪ ಮೂರು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿದೆ. ಚಿರತೆ ಬೇರೆ ಪ್ರಾಣಿ ಜೊತೆ ಕಾದಾಡಿ ಸಾವನ್ನಪ್ಪಿದೆಯೇ ಅಥವಾ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದೆಯೇ ಎಂಬುದರ ಬಗ್ಗೆ ಅನುಮಾನ ಉಂಟಾಗಿದೆ. ಆನೆ ಮತ್ತು ಚಿರತೆ ಸಾವಿನ ಸಂಬಂಧ ಸಿಸಿಎಫ್ ನಾರಾಯಣಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Elephant and Leopard death in HD Kote talluk

2018ರ ಮೇ ತಿಂಗಳಿನಿಂದ 2019ರ ಮಾರ್ಚ್‌ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 11 ಆನೆಗಳು ನಾನಾ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಚಾಮರಾಜನಗರ, ಮಡಿಕೇರಿ ಭಾಗದಲ್ಲಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಿ ಕಾಲಕಳೆಯುತ್ತಿದ್ದಾರೆ.

English summary
Elephant and Leopard death in H D Kote talluk. Day by day animals are coming from forest to villages in Madikere and Chamrajnagara border places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X