ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳು, ಪಾಲಕರ ಸಂದರ್ಶನ ನಡೆಸಿದರೆ ಶಾಲೆಗೆ ದಂಡ

By Kiran B Hegde
|
Google Oneindia Kannada News

ಮೈಸೂರು, ಫೆ. 13: ಖಾಸಗಿ ಶಾಲೆಗಳು ದಾಖಲಾತಿ ಸಮಯದಲ್ಲಿ ಮಕ್ಕಳು ಹಾಗೂ ಪಾಲಕರನ್ನು ಪರೀಕ್ಷೆಗೊಳಪಡಿಸುತ್ತಾರೆ. ಮಕ್ಕಳೂ ಬುದ್ಧಿವಂತರಿರಬೇಕು ಹಾಗೂ ಅವರ ಪಾಲಕರಿಗೂ ಮನೆ ಪಾಠ ಮಾಡುವ ಸಾಮರ್ಥ್ಯವಿರಬೇಕು. ಆಗ ಮಾತ್ರ ಶಾಲೆ ಉತ್ತಮ ಫಲಿತಾಂಶ ಗಳಿಸಬಲ್ಲದು.

ಆದರೆ, ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಈ ತಂತ್ರಕ್ಕೆ ಬ್ರೇಕ್ ಹಾಕಿದೆ. ಶಾಲೆ ಪ್ರವೇಶ ಸಮಯದಲ್ಲಿ ಮಕ್ಕಳನ್ನಾಗಲಿ, ಪೋಷಕರನ್ನಾಗಲಿ ಪರೀಕ್ಷಿಸುವುದು ಹಾಗೂ ಸಂದರ್ಶನ ನಡೆಸುವುದು ಕಂಡುಬಂದರೆ ದೊಡ್ಡ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಮೊದಲ ಬಾರಿ ಉಲ್ಲಂಘನೆಗೆ 25,000 ರು. ಹಾಗೂ ನಂತರದ ಪ್ರತಿ ಉಲ್ಲಂಘನೆಗೆ 50,000 ರು. ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. [ತಂದೆ, ತಾಯಿ ಪೂಜಿಸಿ]

ಈ ಕುರಿತು ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪ್ರವೇಶ ಪ್ರಕ್ರಿಯೆ ಕುರಿತು ವಿವರಣೆ ನೀಡಿದ್ದಾರೆ. 2015-16 ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಪಾರದರ್ಶಕತೆ ಕಾಪಾಡಲು ಶಾಲೆಯಲ್ಲಿ ಲಭ್ಯವಿರುವ ಸೀಟುಗಳು ಮತ್ತು ಪ್ರವೇಶ ಪ್ರಕ್ರಿಯೆ ವೇಳಾ ಪಟ್ಟಿಯನ್ನು ಮಾರ್ಚ್ 2ರಂದು ಶಾಲೆಗಳಲ್ಲಿ ಪ್ರಕಟಿಸಬೇಕು.

sch

ಪ್ರವೇಶ ಅರ್ಜಿಯನ್ನು ಮಾರ್ಚ್ 21ರಿಂದ ವಿತರಿಸಬೇಕು. ಅರ್ಜಿ ಸ್ವೀಕರಿಸಲು ಮಾರ್ಚ್ 31 ಕೊನೆಯ ದಿನವಾಗಿರುತ್ತದೆ. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮತ್ತು ಕಾರಣ ಸಹಿತ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯನ್ನು ಏಪ್ರಿಲ್ 4ರಂದು ಪ್ರಕಟಿಸಬೇಕು. ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ಏಪ್ರಿಲ್ 7 ಕೊನೆ ದಿನವಾಗಿದೆ.

ಶಾಲೆಗಳು ಪ್ರಥಮ ಆಯ್ಕೆ ಪಟ್ಟಿಯನ್ನು ಏಪ್ರಿಲ್ 8ರಂದು ಪ್ರಕಟಿಸಿ ಪ್ರವೇಶ ಪಡೆಯಲು ಏಪ್ರಿಲ್ 15ರ ವರಗೆ ಕಾಲಾವಕಾಶ ನೀಡಬೇಕು. ದ್ವಿತೀಯ ಆಯ್ಕೆ ಪಟ್ಟಿಯನ್ನು ಏಪ್ರಿಲ್ 16ರಂದು ಪ್ರಕಟಿಸಿ ಪ್ರವೇಶ ಹೊಂದಲು ಏಪ್ರಿಲ್ 22ರ ವರಗೆ ಕಾಲಾವಕಾಶ ನೀಡಬೇಕು. [ಶಾಲೆಗೆ ಗೈರಾಗಿದ್ದಕ್ಕೆ ಶಿಕ್ಷೆ]

ಅನುದಾನ ರಹಿತ ಶಾಲೆಗಳು : ಇಲ್ಲಿ ಶೇ. 25ರ ಪ್ರಮಾಣದ ಆರ್.ಟಿ.ಇ. ಸೀಟುಗಳನ್ನು ಭರ್ತಿ ಮಾಡಲು ಈಗಾಗಲೇ ಶಿಕ್ಷಣ ಇಲಾಖೆಯಿಂದ ನೀಡಿರುವ ಸೂಚನೆಗಳನ್ನು ಪಾಲಿಸಬೇಕು. ಉಳಿದ ಶೇ. 75ರಷ್ಟು ಸೀಟುಗಳನ್ನು ಭರ್ತಿ ಮಾಡಲು ಪಾರದರ್ಶಕ ವಿಧಿ ವಿಧಾನಗಳನ್ನು ಆಡಳಿತ ಮಂಡಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಬೇಕು. ಸಾಮಾನ್ಯ ವರ್ಗದ ಸೀಟುಗಳನ್ನು ಲಾಟರಿ ಮೂಲಕ ಪೋಷಕರ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು.

ಶೇ. 75ರಷ್ಟು ಸೀಟುಗಳಲ್ಲಿ ಸಿಬ್ಬಂದಿಯ ಸಂಬಂಧಿಕರಿಗೆ, ವಿಕಲಚೇತನರಿಗೆ, ಅನಾಥರಿಗೆ, ಪ.ಜಾತಿ ಹಾಗೂ ಪಂಗಡ ಮುಂತಾದ ಗುಂಪುಗಳಿಗೆ (ಶಾಲೆ ಪ್ರಕಟಣೆಯಲ್ಲಿ ನಿಗದಿಪಡಿಸಿರುವಂತೆ) ಮೀಸಲಿಟ್ಟು ಸೀಟುಗಳ ಸಂಖ್ಯೆ, ಮಾಧ್ಯಮ, ಬೋಧನಾ ಶುಲ್ಕ ಮುಂತಾದ ಮಾಹಿತಿಯನ್ನು ಶಾಲೆ ಆವರಣದಲ್ಲಿ 4x6 ಸೈಜಿನ ಪ್ಲೆಕ್ಸ್‌ನಲ್ಲಿ ಶಾಲೆಯ ಮತ್ತು ಇಲಾಖೆ ವೆಬ್‌ಸೈಟ್‍ನಲ್ಲಿ ಪ್ರಕಟಿಸಬೇಕು. ಜೊತೆಗೆ ಒಂದು ಪ್ರತಿಯನ್ನು ಕೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಕಳುಹಿಸಬೇಕು. [ಸಿಎಂ ಕಂಡು ಮಕ್ಕಳಿಗೆ ಹಿಗ್ಗೋ ಹಿಗ್ಗು]

ಅನುದಾನ ರಹಿತ ಶಾಲೆಯು ತಮ್ಮ ಶಾಲೆಯಲ್ಲಿ ನಿಯಮಾನುಸಾರ ನಿಗದಿ ಪಡಿಸಿದ ಬೋಧನಾ ಶುಲ್ಕದ ಮೊತ್ತವನ್ನು ಸಾರ್ವಜನಿಕರ ಮಾಹಿತಿಗಾಗಿ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಬೇಕು. ಅಲ್ಲದೇ ಮಾಹಿತಿಯನ್ನು ಶಾಲೆಯು ಮಾಹಿತಿ ಪುಸ್ತಕದಲ್ಲಿ (ಪ್ರಾಸ್ಪೆಕ್ಟಸ್) ಮುದ್ರಿಸಬೇಕು. ಶಾಲೆ ಸೂಚನಾ ಫಲಕದಲ್ಲಿ ಮತ್ತು ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು.

sch

ಹೆಚ್ಚಿನ ಶುಲ್ಕ ವಸೂಲಿ ಮಾಡುವಂತಿಲ್ಲ : ಪರಿಶಿಷ್ಟ ಜಾತಿ, ವರ್ಗ ಮತ್ತು ಗುಂಪು-01 ವಿದ್ಯಾರ್ಥಿಗಳಿಂದ ಅಭಿವೃದ್ಧಿ ಶುಲ್ಕ ಹೊರತುಪಡಿಸಿ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಕಟ್ಟಡ ನಿರ್ಮಾಣ ಮತ್ತು ಇತರೆ ವಿಸ್ತರಣೆಗಾಗಿ ವಿದ್ಯಾರ್ಥಿ ಪ್ರವೇಶ ಹೊಂದುವಾಗ ಒಂದು ವರ್ಷದ ಬೋಧನಾ ಶುಲ್ಕಕ್ಕಿಂತ ಹೆಚ್ಚಾಗದಂತೆ ಒಂದು ಬಾರಿ ಮಾತ್ರ ವಿದ್ಯಾರ್ಥಿಯಿಂದ ಪಡೆಯಬೇಕು.

ಈ ಶುಲ್ಕಗಳನ್ನು ಹೊರತುಪಡಿಸಿ ವಿದ್ಯಾರ್ಥಿಯಿಂದ ವಂತಿಕೆ ಪಡೆಯತಕ್ಕದ್ದಲ್ಲ. ಮಗುವಿಗೆ ಪ್ರವೇಶ ನೀಡುವಾಗ ಕ್ಯಾಪಿಟೇಷನ್ ಫೀ ವಸೂಲು ಮಾಡಿದಲ್ಲಿ ವಸೂಲು ಮಾಡಿದ ಕ್ಯಾಪಿಟೇಷನ್ ಶುಲ್ಕದ 10 ಪಟ್ಟು ದಂಡ ವಿಧಿಸಲು ಅವಕಾಶವಿದೆ.

ವರ್ಗಾವಣೆ ಪತ್ರ, ಅಂಕ ದಾಖಲೆ, ಅಧ್ಯಯನ ಪತ್ರ, ನಡೆತ ಪತ್ರ, ಪ್ರವೇಶ ದಾಖಲಾತಿ ಉಧೃತ ಮತ್ತು ಇತರೆ ಪ್ರಮಾಣ ಪತ್ರಗಳಿಗೆ ರೂ.25 ಮತ್ತು ದಾಖಲೆಗಳು 03 ವರ್ಷ ಮೀರಿದ್ದರೆ ಹುಡುಕುವ ಶುಲ್ಕವಾಗಿ 25.ರೂ.ವಸೂಲಿಸಬೇಕು. ಪ್ರವೇಶ ಅರ್ಜಿಗೆ ಗರಿಷ್ಟ 5 ರೂ. ಪ್ರಾಸ್ಪೆಕ್ಟಸ್ ಗೆ ಗರಿಷ್ಟ 20 ರೂ. ವಸೂಲಿಸಬೇಕು. [ಶಾಲೆ ಮೇಲೆ ಉಗ್ರರ ದಾಳಿ ಸಂಭವ]

ಪಾರದರ್ಶಕ ವಿಧಾನ ಅನುಸರಿಸಿ : ಅನುದಾನ ರಹಿತ ಶಾಲೆಗಳಲ್ಲಿ ಶೇ. 25ರ ಪ್ರಮಾಣದ ಆರ್‌ಟಿಇ ಸೀಟುಗಳನ್ನು ಭರ್ತಿ ಮಾಡಲು ಪ್ರತ್ಯೇಕ ಸೂಚನೆಗಳನ್ನು ಪಾಲಿಸುವುದು. ಉಳಿದ ಶೇ. 75ರ ಪ್ರಮಾಣ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಪಾರದರ್ಶಕ ವಿಧಿವಿಧಾನಗಳನ್ನು ಆಡಳಿತ ಮಂಡಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಬೇಕು. ಸಾಮಾನ್ಯ ವರ್ಗದ ಸೀಟುಗಳನ್ನು ಲಾಟರಿ ಮೂಲಕ ಪೋಷಕರ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು.

ಶಿಕ್ಷಣ ಹಕ್ಕು ಕಾಯಿದೆ ಶೇ. 25ರ ಪ್ರವೇಶಾತಿಗೆ ಫೆ. 19ರ ವರೆಗೆ ಆನ್‍ಲೈನ್‍ನಲ್ಲಿ/ ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಟೋಲ್ ಫ್ರೀ ನಂ. 180042511027 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು.

English summary
Department of Public Instruction has warned private schools taking test for children and parents in the time of enrollment. Those schools will be fined Rs. 25,000 for first time and Rs. 50,000 after every time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X