ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಿಂದಾಗಿ ಕಳೆಗುಂದಿದೆ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 26 : ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ಜೊತೆ -ಜೊತಗೆ ಫಲಫುಷ್ಪ ಪ್ರದರ್ಶನ. ಬೆಂಗಳೂರಿನ ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕಿಂತ ಹೆಚ್ಚು ಮಹತ್ವ ದಸರೆಯ ಫಲಪುಷ್ಪ ಪ್ರದರ್ಶನದ್ದಾಗಿದೆ. ಆದರೆ ಈ ಬಾರಿಯ ಪ್ರದರ್ಶನ ಮೊದಲೆರಡು ದಿನವೇನೋ ಅದ್ಭುತವಾಗಿತ್ತು. ಆದರೆ ಮಳೆಯಿಂದಾಗಿ ಸದ್ಯಕ್ಕೆ ಫಲಪುಷ್ಪ ಪ್ರದರ್ಶನ ಕಳೆಗುಂದಿದೆ.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

ಹೌದು, ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಕೆಂಪು, ಗುಲಾಬಿ, ಹಳದಿ, ಬಿಳಿ ಬಣ್ಣದ ಗುಲಾಬಿಗಳಿಂದ ನಿರ್ಮಿಸಲಾಗಿರುವ ಸೋಮನಾಥಪುರದ ಚೆನ್ನಕೇಶವ ದೇವಲಾಯ, ಕೆಂಪು ಹಾಗೂ ಬಿಳಿ ಗುಲಾಬಿಯನ್ನು ಬಳಸಿ ಮಾಡಲಾಗಿರುವ ದೊಡ್ಡ ಗಡಿಯಾರ ಈಗಾಗಲೇ ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಬಳಸಲಾಗಿರುವ ಗುಲಾಬಿ ಹೂಗಳು ಕೊಳತಿವೆ. ಫಲಪುಷ್ಪ ಪ್ರದರ್ಶನ ಪ್ರಾರಂಭವಾಗಿ ಐದೇ ದಿನಕ್ಕೆ ಹೂಗಳು ಈ ರೀತಿ ಬಾಡುತ್ತಿದ್ದರೆ, ಇನ್ನೂ ಅಕ್ಟೋಬರ್ 1 ರವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ಪ್ರವಾಸಿಗರು, ಸಾರ್ವಜನಿಕರಿಗಂತು ಮತ್ತಷ್ಟು ನಿರಾಸೆಯಾಗಲಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಲಾಬಿ ಹೂಗಳು ಹಾಳಾಗಿವೆ.

Due to rain in Mysuru, Dasara flower show will not look good.

ಸೌಂದರ್ಯ ಕಳೆದುಕೊಳ್ಳುತ್ತಿರುವ ದೇವಾಲಯದ ಮುಂದೆ ಸೆಲ್ಫಿ:
ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಮೂವತ್ತೇಳು ಅಡಿ ಅಗಲ, ಹದಿನೆಂಟು ಅಡಿ ಎತ್ತರ ಹಾಗೂ ಹದಿನಾರು ಅಡಿ ಉದ್ದ ವಿಸ್ತೀರ್ಣದಲ್ಲಿ ಮೂರು ಲಕ್ಷ ಗುಲಾಬಿ ಹೂಗಳಿಂದ ನಿರ್ಮಿಸಲಾಗಿರುವ ಸೋಮನಾಥಪುರದ ಶ್ರೀ ಚೆನ್ನಕೇಶವ ದೇವಾಲಯ ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ದೇವಲಾಯ ನಿರ್ಮಾಣಕ್ಕೆ ಬಳಸಲಾಗಿರುವ ಗುಲಾಬಿ ಹೂ ಗಳು ಹಾಳಾಗಿ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿರುವ ದೇವಾಲಯದ ಮುಂದೆಯೇ ಸಾರ್ವಜನಿಕರು ನಿಂತು ಸೆಲ್ಫಿ ತೆಗೆದುಕೊಂಡು ಸಂತಸ ಪಡುತ್ತಿದ್ದ ದೃಶ್ಯಗಳು ಕಂಡು ಬಂತು.

ಮೈಸೂರು ದಸರಾದಲ್ಲಿ ಕಣ್ತುಂಬಲಿದೆ ಆಕರ್ಷಕ ಏರ್ ಶೋ!ಮೈಸೂರು ದಸರಾದಲ್ಲಿ ಕಣ್ತುಂಬಲಿದೆ ಆಕರ್ಷಕ ಏರ್ ಶೋ!

Due to rain in Mysuru, Dasara flower show will not look good.

ನೀರಿನ ತೊಟ್ಟಿಯಲ್ಲಿ ಪ್ಲಾಸ್ಟಿಕ್:
ಇನ್ನು ಫಲಪುಷ್ಪ ಪ್ರದರ್ಶನದಲ್ಲಿ ಒಂದು ಸುತ್ತು ಹಾಕಿಕೊಂಡು ಬರುವಾಗ ಮಧ್ಯದಲ್ಲಿ ಸಿಗುವ ನೀರಿನ ತೊಟ್ಟಿ ಪಾಚಿಮಯವಾಗಿದ್ದು, ತೊಟ್ಟಿಯೊಳಗೆ ಪ್ಲಾಸ್ಟಿಕ್ ಕವರ್ ಗಳು ಕಾಣಸಿಗುತ್ತವೆ. ಈ ಪ್ಲಾಸ್ಟಿಕ್ ಅನ್ನು ನೀತಿನ ತೊಟ್ಟಿಯಿಂದ ತೆಗೆದು ತೊಟ್ಟಿಯನ್ನು ಸ್ವಚ್ಛಗೊಳಿಸಲು ಯಾರೂ ಮುಂದಾಗಿಲ್ಲ. ಬಿಳಿ ಹಾಗೂ ಗುಲಾಬಿ ಬಣ್ಣದ ಆರ್ಕಿಡ್ಸ್ ಹೂಗಳಿಂದ ತಯಾರಿಸಲಾದ ಬಾಬಿ ಗರ್ಲ್, ಬಿಳಿ ಬಣ್ಣದ ಹೂವಿನ ನವಿಲು, ಕೆಂಪು ಹಾಗೂ ಬಿಳಿ ಗುಲಾಬಿಗಳಿಂದ ಮಾಡಲಾದ ಚಿಟ್ಟೆ, ಬಿಳಿ ಹಾಗೂ ಹಳದಿ ಬಣ್ಣದ ಸೇವಂತಿಯಿಂದ ಮಾಡಲಾಗಿರುವ ಐಫಲ್ ಟವರ್, ಹಳದಿ ಬಣ್ಣದ ಹೂವಿನಿಂದ ಮಾಡಿರುವ ಕ್ಯಾಂಡಿ, ವಿವಿಧ ಧಾನ್ಯಗಳಿಂದ ಮಾಡಿರುವ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಅವರನ್ನು ನೋಡಿ ಪ್ರವಾಸಿಗರು ಸಂತಸ ಪಡಬೇಕಷ್ಟೆ. ಅಕ್ಟೋಬರ್ 1 ರವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶವಿದೆ.

ನಿಧಾನವಾಗಿ ಹೋದರೆ ಆಯ್ತು ಎನ್ನುವವರು ಮಾತ್ರ ತಡ ಮಾಡದೆ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವುದು ಒಳಿತು. ತಡವಾಗಿ ಹೋದರೆ ಅಯ್ಯೋ ಬೇಗ ಬರಬೇಕಿತ್ತು. ಚೆನ್ನಾಗಿರುತ್ತಿತ್ತು ಎಂದು ಬೇಸರವಾಗುವುದಂತೂ ಖಂಡಿತ.

English summary
Due to rain in Mysuru, Dasara flower show will not look good. The famous flower show loses its popularity this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X