ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ಆರ್ಭಟದಿಂದ ದಿನಬಳಕೆ ವಸ್ತುಗಳ ಪೂರೈಕೆಯಲ್ಲೂ ಏರುಪೇರು

|
Google Oneindia Kannada News

ಮೈಸೂರು, ಆಗಸ್ಟ್ 10 : ಹಲವೆಡೆ ಸುರಿಯುತ್ತಿರುವ ಭೀಕರ ಮಳೆಯಿಂದ ಸಮಸ್ಯೆಗಳ ಮಹಾಪೂರವೇ ಹರಿದುಬರುತ್ತಿದೆ. ಮೈಸೂರು- ಮಡಿಕೇರಿಯ ಬಹುತೇಕ ವ್ಯವಹಾರಗಳಿಗೆ ಬೆಂಗಳೂರಿನಿಂದ ಸಾಮಗ್ರಿ ಬರಬೇಕು. ಆದರೆ, ಪ್ರಮುಖ ರಸ್ತೆಗಳಲ್ಲಿ ಸಂಪರ್ಕ ಕಡಿತವಾಗಿರುವ ಕಾರಣ ಒಂದೊಂದೇ ವಸ್ತುಗಳ ಅಭಾವ ಕಾಣಲಾರಂಭಿಸಿದೆ.

ದಿನಸಿ ಮಾರುಕಟ್ಟೆಗೆ ಒಂದು ರೀತಿಯ ಸಮಸ್ಯೆಯಾದರೆ, ಆಟೊಮೊಬೈಲ್ ಕ್ಷೇತ್ರದ ಬಿಡಿಭಾಗಗಳ ಪೂರೈಕೆಗೆ ಮತ್ತೊಂದು ರೀತಿಯ ತೊಂದರೆಯಾಗಿದೆ. ದಿನಸಿ ಮಾರುಕಟ್ಟೆಯ ಸಗಟು ವ್ಯಾಪಾರಿಗಳಿಗೆ ಸಾಮಗ್ರಿ ತಂದುಕೊಡುವ ಲಾರಿಗಳಲ್ಲಿ ಕೆಲವು ಹಿಂತಿರುಗಿ ಹೋಗಿವೆ.

ಇಳಿದ ಮಲಪ್ರಭಾ ಮುನಿಸು, ಮಹಾರಾಷ್ಟ್ರದ ಜಲಾಶಯಗಳ ಹರಿವು ಹೇಗಿದೆ?
ಬೆಂಗಳೂರಿನಿಂದ ನಮ್ಮ ಅಂಗಡಿಗೆ ವಾಹನಗಳ ಬಿಡಿಭಾಗದ ಪಾರ್ಸೆಲ್ ಆ.6ರಂದೇ ಕೊರಿಯರ್ ಮಾಡಲಾಗಿದೆ. ಆದರೆ, ಅದು ಇನ್ನೂ ತಲುಪಿಲ್ಲ. ಎಲ್ಲಿದೆ, ಏನಾಯಿತು ಎಂಬ ಮಾಹಿತಿಯೂ ಇಲ್ಲ ಎನ್ನುತ್ತಾರೆ ಆಟೊ ಎಲೆಕ್ಟ್ರಿಕಲ್ಸ್ ಮಾಲೀಕ ರಾಜೇಶ ನಾಯ್ಕ. ಇನ್ನು ಮಡಿಕೇರಿಯ ಕೆಲ ಭಾಗಕ್ಕೂ, ನಂಜನಗೂಡಿನ ಭಾಗಕ್ಕೂ ಮೈಮೂಲ್ ನಿಂದ ನಂದಿನಿ ಹಾಲಿನ ಪೂರೈಕೆಯಾಗುತ್ತಿಲ್ಲ.

Due to Heavy rains fluctuations in the supply of basic materials
ನಮ್ಮ ಮಳಿಗೆಯಲ್ಲಿ ದಿನವೂ ಸುಮಾರು 350ರಿಂದ 400 ಲೀಟರ್ ಹಾಲು ಮಾರಾಟವಾಗುತ್ತದೆ. ಆದರೆ, ಮಳೆಯಿಂದ ವಾಹನ ಸಂಚಾರ ಸ್ಥಗಿತಗೊಂಡ ಬಳಿಕ ಬೇಡಿಕೆಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಟೆಟ್ರಾ ಪ್ಯಾಕ್, ಮೊಸರು, ನಂದಿನ ಪೇಡಾ, ತುಪ್ಪ ಖಾಲಿಯಾಗಿ ಎರಡು ದಿನಗಳಾದವು. ಒಂದು ಸಿಕ್ಕಿದರೆ ಮತ್ತೊಂದು ಸಿಗುತ್ತಿಲ್ಲ. ಗ್ರಾಹಕರನ್ನು ಸಮಾಧಾನ ಪಡಿಸುವುದೇ ಸವಾಲಾಗಿದೆ ಎಂದು ನಂದಿನಿ ಹಾಲಿನ ಮಳಿಗೆಯ ಎಸ್.ಕೆ.ನಾಯಕ್ ಅಸಹಾಯಕತೆ ವ್ಯಕ್ತಪಡಿಸಿದರು.

ಕಾವೇರಿ ಹೊರ ಹರಿವು ಹೆಚ್ಚಳ: ಹೊಗೆನಕಲ್ ಜಲಪಾತ ಪ್ರವೇಶ ನಿರ್ಬಂಧ
ಪ್ರವಾಹದ ಕಾರಣದಿಂದ ತರಕಾರಿ ದರವೂ ಗಗನಕ್ಕೇರಿದೆ. ಎಲ್ಲ ತರಕಾರಿಗಳಿಗೂ ಈಗಾಗಲೇ ಪ್ರತಿ ಕೆ.ಜಿ.ಯ ಮೇಲೆ 10ರಿಂದ 20ರೂ ಏರಿಕೆಯಾಗಿದೆ. ನಗರಕ್ಕೆ ಬಹುಪಾಲು ತರಕಾರಿ ಹೆಚ್ ಡಿ ಕೋಟೆ, ಪಿರಿಯಾಪಟ್ಟಣ, ಹುಣಸೂರಿನಿಂದ ಪೂರೈಕೆಯಾಗುತ್ತಿತ್ತು. ಆದರೆ, ಆ ಭಾಗದಲ್ಲಿ ಹೊಲಗಳು ಸಂಪೂರ್ಣ ಹಾಳಾಗಿವೆ. ಅಲ್ಲದೇ ರಸ್ತೆ ಸಂಪರ್ಕವೂ ಇಲ್ಲ. ಹಾಗಾಗಿ ಅಲ್ಲಿಂದ ಸದ್ಯಕ್ಕಂತೂ ತರಕಾರಿ ಸಿಗುವುದಿಲ್ಲ. ಹಾಗಾಗಿ ತರಕಾರಿ ಬೆಲೆಯನ್ನು ಸಹ ಏರಿಕೆ ಮಾಡಲಾಗಿದೆ..

English summary
Due to Heavy rains, fluctuations in the supply of basic materials at Mysuru-madikeri. Also milk supply has been variation in several places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X