ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ನೂತನ ಡಿಸಿಪಿಯಾಗಿ ಡಾ. ಪ್ರಕಾಶ್ ಗೌಡ ನೇಮಕ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 14: ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವರ್ಗಾವಣೆ ಹಗ್ಗ ಜಗ್ಗಾಟಕ್ಕೆ ಸಂಬಂಧಿಸದಂತೆ ಸರ್ಕಾರ ಈ ಹಿಂದೆ ಸ್ಥಳ ನಿಯುಕ್ತಿಗೊಳಿಸದೆ ಮಾಡಿದ್ದ ವರ್ಗಾವಣೆ ಆದೇಶವನ್ನು ಸಿಎಟಿ (ಕೇಂದ್ರ ಆಡಳಿತ ನ್ಯಾಯಮಂಡಳಿ) ಎತ್ತಿ ಹಿಡಿದಿದ್ದು ಮೈಸೂರಿಗೆ ನೂತನ ಡಿಸಿಪಿ ಆಗಿ ಡಾ ಪ್ರಕಾಶ್‌ ಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯ ಸರ್ಕಾರ ಡಿಸಿಪಿ ಮುತ್ತುರಾಜ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿತ್ತು. ಈ ಆದೇಶವನ್ನ ಎತ್ತಿ ಹಿಡಿದ ಸಿಎಟಿ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಆದೇಶದ ಪ್ರತಿಯನ್ನು ರವಾನಿಸಿದೆ. ಸಿಎಟಿ ಆದೇಶದಂತೆ ಪ್ರಕಾಶ್‌ಗೌಡ ಅವರು ಮತ್ತೆ ಮೈಸೂರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿಂದೇ ಡಿಸಿಪಿ ಮುತ್ತುರಾಜ್ ಸ್ಥಳಕ್ಕೆ ಪ್ರಕಾಶ್ ಗೌಡರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ಡಿಸಿಪಿ ಮುತ್ತುರಾಜ್ ಅವರು ಜ. 2019 ಡಿಸೆಂಬರ್ 19ರಂದು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

Dr Prakash Gowda Transferred To Mysuru As New DCP

ಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತ

ಹಾಸನದ ಎಸ್‌ಪಿಯಾಗಿದ್ದ ಪ್ರಕಾಶ್‌ಗೌಡ ಅವರನ್ನು ಮೈಸೂರು ನಗರ ಡಿಸಿಪಿಯಾಗಿ ವರ್ಗಾವಣೆ ಮಾಡಿ ಅಧಿಕಾರ ಸ್ವೀಕರಿಸಿದಾಗ, ಮುತ್ತುರಾಜ್ ಅವರು ಸಿಎಟಿಗೆ ಮೊರೆ ಹೋಗಿದ್ದ ಪರಿಣಾಮ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಮತ್ತೆ ವರ್ಗಾವಣೆ ಮಾಡಿತ್ತು. ಆದರೆ ಸ್ಥಳ ನಿಯುಕ್ತಿಗೊಳಿಸಿರಲಿಲ್ಲ. ಇದೀಗ ಮತ್ತೆ ಡಿಸಿಪಿಯಾಗಿ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ. ಮುತ್ತುರಾಜ್ ಅವರಿಗೆ ಸ್ಥಳ ನಿಯುಕ್ತಿ ಮಾಡಿಲ್ಲ.

English summary
The CAT (Central Administrative Tribunal) has upheld the transfer order, which the government had previously made. Dr Prakash Gowda has been transferred to Mysuru as the new DCP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X