ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆಗೆ ಕಾರಣ ಬಹಿರಂಗ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 12: ಮೈಸೂರು ನಗರದ ಎಲೆ ತೋಟದ ಬಳಿ ಭಾನುವಾರ ತಡರಾತ್ರಿ ಜೋಡಿ ಕೊಲೆ ನಡೆದಿತ್ತು. ಪ್ರಕರಣದ ತನಿಖೆ ಕೈಗೊಂಡ ಕೆ. ಆರ್. ಠಾಣಾ ಪೊಲೀಸರು ಕೊಲೆಗೆ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಭಾನುವಾರ ತಡರಾತ್ರಿ ಕತ್ತುಕೊಯ್ದು, ಮಾರಕಾಸ್ತ್ರಗಳಿಂದ ದಾಳಿ ಮಾಡಿ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ ಮತ್ತು ಕಿಶನ್ ಬಂಧಿಸಲಾಗಿತ್ತು. ಸೋಮವಾರ ಮುಂಜಾನೆ ರಕ್ತಸಿಕ್ತ ಮೃತದೇಹಗಳನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು.

ಮೈಸೂರು; ಎಲೆ ತೋಟದ ಬಳಿ ಜೋಡಿ ಕೊಲೆಮೈಸೂರು; ಎಲೆ ತೋಟದ ಬಳಿ ಜೋಡಿ ಕೊಲೆ

ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಾಮುಂಡಿಬೆಟ್ಟದ ಪಾದದ ನಿವಾಸಿಗಳಾದ ದಿಲೀಪ್ (27), ಸ್ವಾಮಿ (36) ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಯತ್ನ ನಡೆದಾಗ ಮಧುಸೂಧನ ಎಂಬುವವರು ಗಾಯಗೊಂಡಿದ್ದರು. ಅವರು ನೀಡಿದ ದೂರಿನ ಮೇಲೆಯೇ ತನಿಖೆ ನಡೆಸಲಾಗಿದೆ.

ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ

Double Murder In Mysuru Ele Thota Four Accused Arrested

ಕೊಲೆಗೆ ಕಾರಣವೇನು?; ನಿವೇಶನದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಿರಣ್ ಮತ್ತು ಕಿಶನ್ ಹತ್ಯೆ ಮಾಡಿದ್ದ ನಾಲ್ವರು ಬಳಿಕ ಪರಾರಿಯಾಗಿದ್ದರು. ಮೈಸೂರು ನಗರದ ಗೌರಿಶಂಕರ ನಗರ ಸರ್ವೆ ನಂ.101 ನಿವೇಶನ ಸಂಖ್ಯೆ 2ರ ಜಾಗದ ವಿಚಾರದಲ್ಲಿ ಆರೋಪಿ ಸ್ವಾಮಿ ಹಾಗೂ ಕಿರಣ ಮತ್ತು ಅವರ ಕಡೆಯವರಿಗೂ ಆಗಾಗ ಗಲಾಟೆ ನಡೆಯುತ್ತಿತ್ತು.

 18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು? 18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 7ರಂದು ನಡೆದ ಗಲಾಟೆಯಲ್ಲಿ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ ಮತ್ತು ಕಿಶನ್‌ರನ್ನು ಎಲೆತೋಟ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಮಧುಸೂಧನ್ ಎಂಬಾತ ಗಾಯಗೊಂಡಿದ್ದ.

ಕೆ. ಆರ್. ಠಾಣಾ ಪೊಲೀಸರು ಮೊದಲು ಆರೋಪಿಗಳಾದ ದಿಲೀಪ್ ಹಾಗೂ ಮಧು ಎಂಬಾತನನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ಫೆಬ್ರವರಿ 10ರಂದು ನಗರದ ಕುಂಬಾರಕೊಪ್ಪಲು ಗೇಟ್ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

English summary
Mysuru Krishnaraja station police arrested four accused in connection to the double murder in Ele Thota near Mysuru on February 8, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X