ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಷದ ಕೊನೆಯಲ್ಲಿ ಮೈಸೂರು, ಹಂಪಿಗೆ ಡಬಲ್ ಡೆಕ್ಕರ್ ಬಸ್?

|
Google Oneindia Kannada News

ಮೈಸೂರು, ಆಗಸ್ಟ್ 31: ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೆಎಸ್ ಟಿಡಿಸಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಲಂಡನ್ ಮಾದರಿಯ ಬಿಗ್ ಬಸ್ ಸೇವೆ ನೀಡಲು ಮುಂದಾಗುತ್ತಿದೆ. ಇದೇ ಡಿಸೆಂಬರ್ ನಲ್ಲಿ ಮೈಸೂರಿಗೆ 4 ಹಾಗೂ ಹಂಪಿಗೆ 2 ವಿಶೇಷ ಬಸ್ ಗಳ ಸೇವೆ ಆರಂಭವಾಗಲಿದೆ.

ಗೌರಿ ಗಣೇಶ ಹಬ್ಬ: KSRTC ಮಹತ್ವದ ಪ್ರಕಟಣೆಗೌರಿ ಗಣೇಶ ಹಬ್ಬ: KSRTC ಮಹತ್ವದ ಪ್ರಕಟಣೆ

ತೆರೆದ ಬಸ್ ಸೇವೆಯನ್ನು ಮೈಸೂರು ದಸರಾ ಹಿನ್ನೆಲೆ ಆರಂಭಿಸಲಾಗಿತ್ತು. ಇದಕ್ಕೆ ಕಳೆದ ವರ್ಷ ಅಭೂತಪೂರ್ವ ಬೆಂಬಲ ದೊರೆತ ಹಿನ್ನೆಲೆ ಡಬಲ್ ಡೆಕ್ಕರ್ ಬಸ್ ಖರೀದಿಸುವ ಆಲೋಚನೆ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಳೆದ ಬಾರಿ ರಾಜ್ಯಕ್ಕೆ 10 ಡಬಲ್ ಡೆಕ್ಕರ್ ಬಸ್ ಗಳ ಸೇವೆ ಆರಂಭಿಸಲು 5 ಕೋಟಿ ಅನುದಾನ ನೀಡಲು ಪ್ರಸ್ತಾಪಿಸಿತ್ತು. ಅದರಂತೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ 5 ಕೋಟಿ ಅನುದಾನ ನೀಡಿದ್ದು ಲಂಡನ್ ಬಿಗ್ ಬಸ್ ಮಾದರಿಯ ಬಸ್ ತಯಾರಿಕೆಗೆ ಟೆಂಡರ್ ಸಹ ಕರೆಯಲಾಗಿತ್ತು.

Double Ducker bus to Hampi in Mysuru in December

ಆದರೆ ವಿಶೇಷ ಮಾದರಿಯಲ್ಲಿ ಡಬಲ್ ಡೆಕ್ಕರ್ ಬಸ್ ವಿನ್ಯಾಸಗೊಳಿಸಬೇಕಾದ ಕಾರಣ ಬಸ್ ತಯಾರಿಕೆ ಕಂಪನಿಗಳು ಮುಂದೆ ಬಂದಿರಲಿಲ್ಲ. ನಂತರದ ದಿನಗಳಲ್ಲಿ ಮತ್ತೊಮ್ಮೆ ಟೆಂಡರ್ ಕರೆಯಲಾಗಿದ್ದು ಈ ಬಾರಿ ಕೆಲ ಕಂಪನಿಗಳು ಮುಂದೆ ಬಂದಿವೆ. ಅಲ್ಲದೇ ಟೆಂಡರ್ ಪ್ರಕ್ರಿಯೆ ಇನ್ನು ಹತ್ತು ದಿನಗಳ ಒಳಗೆ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಮೂರು ತಿಂಗಳಲ್ಲಿ ಬಸ್ ನಿರ್ಮಾಣವಾಗಲಿದೆ. ಹೀಗಾಗಿ ಡಿಸೆಂಬರ್ ವೇಳೆ ಈ ವಿನೂತನ ಬಸ್ ಸೇವೆ ನೀಡಲಿದೆ ಎನ್ನುತ್ತಾರೆ ಕೆಎಸ್ ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪುಷ್ಕರ್.

Double Ducker bus to Hampi in Mysuru in December

ಡಬಲ್ ಡೆಕ್ಕರ್ ಬಸ್ ಸೇವೆ ಲಭ್ಯವಾಗುತ್ತಿದ್ದಂತೆ ಮೈಸೂರು ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ನಿರೀಕ್ಷೆಯಿದೆ.

English summary
For the first time, KS TDC is gearing up to offer a London-style Big Bus service to the state. The buses will start services to Mysuru 4 and Hampi 2 in December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X