ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಏಪ್ರಿಲ್ 1ರಿಂದ ಡಬಲ್ ಡೆಕ್ಕರ್ ಬಸ್ ಸಂಚಾರ

|
Google Oneindia Kannada News

ಮೈಸೂರು, ಮಾರ್ಚ್ 17: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಗಳು ರಸ್ತೆಗಿಳಿಯಲು ಸಜ್ಜಾಗಿವೆ. ಇನ್ನು ಮುಂದೆ ಪ್ರವಾಸಿಗರು ಡಬಲ್ ಡೆಕ್ಕರ್ ಬಸ್‌ನಲ್ಲಿ ಕುಳಿತು ಮೈಸೂರಿನ ಪ್ರವಾಸಿತಾಣಗಳನ್ನು ನೋಡಬಹುದಾಗಿದೆ.

ಮೈಸೂರಿಗರ ಬಹುದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್‌ ಸೇವೆ ಆರಂಭಿಸಲಾಗುತ್ತಿದೆ.

ಪ್ರವಾಸಿಗರಿಗೆ ಡಬಲ್ ಡೆಕ್ಕರ್ ಬಸ್ ನಲ್ಲಿ ಮೈಸೂರು ಸುತ್ತುವ ಮೋಜು...ಪ್ರವಾಸಿಗರಿಗೆ ಡಬಲ್ ಡೆಕ್ಕರ್ ಬಸ್ ನಲ್ಲಿ ಮೈಸೂರು ಸುತ್ತುವ ಮೋಜು...

ಮೈಸೂರಿನಲ್ಲಿ ಈ ಹಿಂದೆ ದಸರಾ ಸಂದರ್ಭದಲ್ಲಿ ಮಾತ್ರ ಡಬಲ್ ಡೆಕ್ಕರ್ ಬಸ್ ಸಂಚರಿಸುತ್ತಿತ್ತು. ಇದೀಗ ವರ್ಷವಿಡೀ ಈ ಬಸ್‌ನ ಸೌಲಭ್ಯ ಸಿಗಲಿದೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೈಸೂರಿಗೆ ಡಬಲ್ ಡೆಕ್ಕರ್ ಬಸ್ ಸೇವೆ ನೀಡಲು ಮುಂದಾಗಿದೆ.

 Double Decker Bus Will Run From April 1 In Mysuru

ಮೈಸೂರಿನಲ್ಲಿಒಟ್ಟು ಆರು ಡಬಲ್ ಡೆಕ್ಕರ್ ಬಸ್ ಸಂಚರಿಸಲಿವೆ. ಸದ್ಯ ಒಂದು ಬಸ್ ಮೈಸೂರಿಗೆ ಆಗಮಿಸಿದ್ದು, ಏ.1ರಿಂದ ಸಂಚಾರ ಆರಂಭಿಸಲಿದೆ. ಉಳಿದ ಐದು ಬಸ್‌ಗಳು ಮಾರ್ಚ್ ಅಂತ್ಯಕ್ಕೆ ಮೈಸೂರಿಗೆ ಆಗಮಿಸಲಿವೆ. ಬೆಂಗಳೂರು ಮೂಲದ ಕೆಎಂಎಸ್ ಕೋಚ್ ಬಿಲ್ಡರ್ಸ್ ಸಂಸ್ಥೆ 6 ಡಬಲ್ ಡೆಕ್ಕರ್ ‌ಬಸ್‌ಗಳನ್ನು ತಯಾರು ಮಾಡಿದ್ದು, ಪ್ರತಿ ಬಸ್‌ 40 ಸೀಟುಗಳ ಸಾಮರ್ಥ್ಯ ಹೊಂದಿದೆ.

ಕೆಳಗೆ 20 ಹಾಗೂ ಮೇಲೆ 20 ಸೀಟುಗಳು ಇರಲಿವೆ. ಪ್ರವಾಸಿ ಸ್ಥಳಗಳ ಬಗ್ಗೆ ಬಸ್‌ನಲ್ಲೇ ಮಾಹಿತಿ ನೀಡಲಾಗುವುದು. ಎಲ್‌ಇಡಿ ಟಿ.ವಿ ಮೂಲಕ ಪ್ರವಾಸಿ ತಾಣಗಳ ವಿಡಿಯೋ ಹಾಗೂ ಆಡಿಯೋ ಮೂಲಕ ಮಾಹಿತಿ ಸಿಗಲಿದೆ. ಮೈಸೂರು ನಗರದಾದ್ಯಂತ 35 ಕಿ.ಮೀ ವ್ಯಾಪ್ತಿಯಲ್ಲಿ ಈ ಬಸ್ ಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಕೈಗೆಟಕುವ ಹಾಗೆ ಟಿಕೆಟ್ ದರ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ.

English summary
Double decker bus which was introduced by government to improve tourism in mysuru will run from april 1 in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X